ಮೂಡಲಗಿ:ಕುಲಗೋಡ-ಯಾದವಾಡ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
ಕುಲಗೋಡ-ಯಾದವಾಡ ರಸ್ತೆ ಕಾಮಗಾರಿಯನ್ನು ಪೂರ್ಣಗೊಳಿಸಲು ಶಾಸಕ ಬಾಲಚಂದ್ರ ಜಾರಕಿಹೊಳಿ ಸೂಚನೆ
14 ಕೋಟಿ ರೂ. ವೆಚ್ಚದ ಸಂಗಮ-ಸಂಕೇಶ್ವರ ರಾ.ಹೆ-44 ರ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ
ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಜು 8 :
ಕುಲಗೋಡದಿಂದ ಯಾದವಾಡವರೆಗಿನ ರಸ್ತೆ ಸುಧಾರಣೆಗೆ 14 ಕೋಟಿ ರೂ. ಅನುದಾನ ಮಂಜೂರಾತಿಗಾಗಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ದಾರೆಂದು ಯಾದವಾಡ ಜಿಪಂ ಸದಸ್ಯ ಗೋವಿಂದ ಕೊಪ್ಪದ ಹೇಳಿದರು.
ಬುಧವಾರದಂದು ಲೋಕೋಪಯೋಗಿ ಇಲಾಖೆಯ ಸಂಕೇಶ್ವರ-ಸಂಗಮ ರಾ.ಹೆ-44 ರ ಕುಲಗೋಡ-ಯಾದವಾಡ ರಸ್ತೆ ಸುಧಾರಣಾ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಕಾಮಗಾರಿಯನ್ನು ಸಾರ್ವಜನಿಕ ಹಿತದೃಷ್ಟಿಯಿಂದ ತುರ್ತಾಗಿ ಪೂರ್ಣಗೊಳಿಸುವಂತೆ ಗುತ್ತಿಗೆದಾರರು, ಅಧಿಕಾರಿಗಳಿಗೆ ಶಾಸಕರು ಸೂಚನೆ ನೀಡಿದ್ದಾರೆಂದು ಹೇಳಿದರು.
ತೀವ್ರವಾಗಿ ಹದಗೆಟ್ಟು ಜನಸಂಚಾರಕ್ಕೆ ಅನಾನುಕೂಲವಾಗಿರುವ ಕುಲಗೋಡದಿಂದ ಯಾದವಾಡವರೆಗೆ ರಸ್ತೆ ಅಭಿವೃದ್ಧಿಗೆ 6 ತಿಂಗಳ ಹಿಂದೆಯೇ ಕಾಮಗಾರಿಗೆ ಮಂಜೂರಾತಿ ದೊರಕಿತ್ತು. ಆದರೆ ಕೋವಿಡ್-19 ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಅನುದಾನ ಇದುವರೆಗೂ ಬಿಡುಗಡೆಯಾಗಿಲ್ಲ. ಆದರೆ ಸಾರ್ವಜನಿಕರ ಮನವಿಯ ಮೇರೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಅಧಿಕಾರಿಗಳು ಮತ್ತು ಗುತ್ತಿಗೆದಾರರಿಗೆ ಈ ಕಾಮಗಾರಿಯ ಅನುದಾನ ಬಿಡುಗಡೆ ಮಾಡಿಸುವ ಭರವಸೆ ನೀಡಿದ್ದಾರೆ. ಆದ್ದರಿಂದ ಈ ರಸ್ತೆ ಕಾಮಗಾರಿಯನ್ನು ಈಗಲೇ ಆರಂಭಿಸಿ ಜನ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕೆಂದು ಈಗಾಗಲೇ ಗುತ್ತಿಗೆದಾರರಿಗೆ ಬಾಲಚಂದ್ರ ಜಾರಕಿಹೊಳಿ ಅವರು ನಿರ್ದೇಶನ ನೀಡಿದ್ದಾರೆಂದು ಕೊಪ್ಪದ ಹೇಳಿದರು.
ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತ ಸಹಾಯಕ ನಾಗಪ್ಪ ಶೇಖರಗೋಳ, ಗೋಕಾಕ ಟಿಎಪಿಸಿಎಂಎಸ್ ಅಧ್ಯಕ್ಷ ಅಶೋಕ ನಾಯಿಕ, ಕುಲಗೋಡ ತಾಪಂ ಸದಸ್ಯ ಸದಾಶಿವ ದುರಗನ್ನವರ, ಯಾದವಾಡ ಗ್ರಾಪಂ ಅಧ್ಯಕ್ಷ ಯಲ್ಲಪ್ಪಗೌಡ ನ್ಯಾಮಗೌಡ, ಕುಲಗೋಡ ಗ್ರಾಪಂ ಅಧ್ಯಕ್ಷೆ ಶಕುಂತಲಾ ಚಿಪ್ಪಲಕಟ್ಟಿ, ಗ್ರಾಪಂ ಮಾಜಿ ಅಧ್ಯಕ್ಷ ಬಸನಗೌಡ ಪಾಟೀಲ, ತಾಪಂ ಮಾಜಿ ಸದಸ್ಯ ಸುಭಾಸ ವಂಟಗೋಡಿ, ಪರ್ವತಗೌಡ ಪಾಟೀಲ, ಎಪಿಎಂಸಿ ಮಾಜಿ ಉಪಾಧ್ಯಕ್ಷರಾದ ಎಂ.ಎಂ. ಪಾಟೀಲ, ಮಾರುತಿ ಹರಿಜನ, ಜಿಪಂ ಮಾಜಿ ಸದಸ್ಯ ರಂಗಪ್ಪ ಇಟ್ಟನ್ನವರ, ಪಿಎಲ್‍ಡಿ ಬ್ಯಾಂಕ್ ನಿರ್ದೇಶಕ ಧರೆಪ್ಪ ಮುಧೋಳ, ಪ್ರಭಾಶುಗರ ನಿರ್ದೇಶಕ ಗಿರೀಶ ಹಳ್ಳೂರ, ಪುಟ್ಟಣ್ಣ ಪೂಜೇರಿ, ತಮ್ಮಣ್ಣ ದೇವರ, ಹನಮಂತ ಹುಚರಡ್ಡಿ, ಬಸು ಹಿಡಕಲ್, ಬಸು ಕೇರಿ, ಬೀರಪ್ಪ ಮುಗಳಖೋಡ, ರಾಜು ಕಲ್ಯಾಣಿ, ಎಂ.ಎಸ್. ದಂತಾಳಿ, ಬಸು ಭೂತಾಳಿ, ಹನಮಂತ ಲಕ್ಕಾರ, ರಾಜು ಯಕ್ಷಂಬಿ, ವಿಜಯ ಜಡ್ಲಿ, ಜಗದೀಶ ಬೆಳಗಲಿ, ವೆಂಕಣ್ಣಾ ಚನ್ನಾಳ, ಮಲ್ಲಪ್ಪ ಚಕ್ಕೆನ್ನವರ, ಶ್ರೀಶೈಲ ಢವಳೇಶ್ವರ, ಕಲ್ಲಪ್ಪ ಗಾಣಿಗೇರ, ಲೋಕೋಪಯೋಗಿ ಇಲಾಖೆಯ ಎಇಇ ಆರ್.ಎ. ಗಾಣಿಗೇರ, ಎಇ ಮಾರುತಿ ಉಪ್ಪಾರ, ಗುತ್ತಿಗೆದಾರರಾದ ಬಸವಂತ ದಾಸನವರ, ಬಿ.ಕೆ. ಗಂಗರಡ್ಡಿ, ಮಂಜುನಾಥ ಗಂಗರಡ್ಡಿ, ಬಾಳಪ್ಪ ಗೌಡರ, ವಾಲಿ, ಪಿಎಸ್‍ಐ ಎಚ್.ಕೆ. ನರಳೆ, ಗ್ರಾಪಂ ಸದಸ್ಯರು, ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.