ಗೋಕಾಕ:ಶರತ್ತುಬದ್ದ ಲಾಕಡೌನ : ಮೊದಲ ದಿನ ಜನರಿಂದ ವ್ಯಾಪಾರ ವಹಿವಾಟುಗಳನ್ನು ಬಂದ ಮಾಡಿ ಬೆಂಬಲ
ಶರತ್ತುಬದ್ದ ಲಾಕಡೌನ : ಮೊದಲ ದಿನ ಜನರಿಂದ ವ್ಯಾಪಾರ ವಹಿವಾಟುಗಳನ್ನು ಬಂದ ಮಾಡಿ ಬೆಂಬಲ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 9 :
ತೀವ್ರವಾಗಿ ಹರಡುತ್ತಿರುವ ಕೊರೋನಾ ವೈರಸ್ ತಡೆಗಟ್ಟುವ ನಿಟ್ಟಿನಲ್ಲಿ ಜಾರಿಯಲ್ಲಿರುವ ಶರತ್ತುಬದ್ದ ಲಾಕಡೌನ ಮೊದಲ ದಿನ ಜನರು ವ್ಯಾಪಾರ ವಹಿವಾಟುಗಳನ್ನು ಬಂದ ಮಾಡಿ ಬೆಂಬಲ ವ್ಯಕ್ತಪಡಿಸಿದರು.
ಸರಿಯಾಗಿ ಮಧ್ಯಾಹ್ನ 12 ಗಂಟೆಗೆ ಪಿಲ್ಡಿಗೆ ಇಳಿದ ಪೊಲೀಸರು ನಗರದಾದ್ಯಂತ ಗಸ್ತು ತಿರುಗಿ ಅಂಗಡಿ ಮುಂಗಟ್ಟುಗಳು ತೆರೆಯದಂತೆ ಸೂಕ್ತ ಕ್ರಮ ಕೈಗೊಂಡಿದ್ದರು.
ನಗರ ಬಸವೇಶ್ವರ ವೃತ್ತ, ಸಂಗೊಳ್ಳಿ ರಾಯಣ್ಣ ವೃತ್ತ, ಬ್ಯಾಳಿಕಾಟಾ , ನಾಕಾ ನಂ 1 ಸೇರಿದಂತೆ ಇತರ ಜನನಿ ಬಿಡು ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಬಂದ ಆಗಿದ್ದರಿಂದ ಜನದಟ್ಪನೆ ಕಂಡು ಬರಲಿಲ್ಲ. ಬೇರೆ ಊರಿಗೆ ಹೋಗುವವರು ಅಲಲ್ಲಿ ನಿಂತು ಬಸ್ಸಗಾಗಿ ಕಾಯುತ್ತಿದ್ದ ದೃಶ್ಯಗಳು ಕಂಡು ಬಂದವು , ಉಳಿದಂತೆ ಅಗತ್ಯ ವಸ್ತುಗಳು ಮಾರಾಟ ಮತ್ತು ಖರೀದಿಗೆ ಯಾವುದೇ ಅಡೆತಡೆಯಾಗಲಿಲ್ಲ . ಔಷಧಿ ಅಂಗಡಿಗಳು , ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು.
ಕೊರೋನಾ ಸೋಂಕು ತಗುಲಿದ ತಹಶೀಲ್ದಾರ್ ಕಛೇರಿ ಸಿಬ್ಬಂದಿ ವಾಸವಿದ್ದ ಪ್ರದೇಶದ 50 ಮೀಟರ್ ಪ್ರದೇಶವನ್ನು ಕ್ವಾಟನಮೆಂಟ್ ಝೋನ ಎಂದು ಘೋಷಿಸಿರುವ ತಾಲೂಕಾಡಳಿತ ಆ ಪ್ರದೇಶದಲ್ಲಿ ಯಾರು ತಿರುಗಾಡದಂತೆ ಮತ್ತು ಅಲ್ಲಿಂದ ಯಾರು ಹೊರಗಡೆ ಬರದಂತೆ ಸೂಚನೆ ನೀಡಿದ್ದಾರೆ.