RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ತಹಶೀಲ್ದಾರ ಬಿ.ಕೆ. ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಸರಕಾರಿ ನೌಕರರ ಸಂಘದಿಂದ ಮನವಿ

ಗೋಕಾಕ:ತಹಶೀಲ್ದಾರ ಬಿ.ಕೆ. ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಸರಕಾರಿ ನೌಕರರ ಸಂಘದಿಂದ ಮನವಿ 

ತಹಶೀಲ್ದಾರ  ಬಿ.ಕೆ. ಚಂದ್ರಮೌಳೇಶ್ವರ ಹತ್ಯೆ ಖಂಡಿಸಿ ಸರಕಾರಿ ನೌಕರರ ಸಂಘದಿಂದ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 10 :

 

ಬಂಗಾರುಪೇಟೆ ತಾಲ್ಲೂಕು ತಹಶೀಲ್ದಾರರಾಗಿದ್ದ ಶ್ರೀ ಬಿ.ಕೆ. ಚಂದ್ರಮೌಳೇಶ್ವರ ಹತ್ಯೆ ಹಿನ್ನೆಲೆಯಲ್ಲಿ ಕಠಿಣ ಕಾನೂನು ರೂಪಿಸಿ ಸರ್ಕಾರಿ ಅಧಿಕಾರಿ ನೌಕರರಿಗೆ ಅಗತ್ಯ ರಕ್ಷಣೆ ನೀಡುವಂತೆ ಆಗ್ರಹಿಸಿ   ಇಲ್ಲಿಯ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ತಾಲೂಕ ಘಟಕ ಮತ್ತು ರಾಜ್ಯ ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಸಂಯುಕ್ತಾಶ್ರಯದಲ್ಲಿ ತಹಶೀಲ್ದಾರ ಪ್ರಕಾಶ ಹೋಳೆಪ್ಪಗೋಳ ಮುಖಾಂತರ ಸರಕಾರದ ಮುಖ್ಯ ಕಾರ್ಯದರ್ಶಿ ಅವರಿಗೆ ಮನವಿ ಅರ್ಪಿಸಲಾಯಿತು.

ಶುಕ್ರವಾರದಂದು ತಹಶೀಲ್ದಾರ ಕಾರ್ಯಾಲಯ ಸಿಲ್ಡೌನ ಆದ ಪರಿಣಾಮ ನಗರದ ತಹಶೀಲ್ದಾರ ವಸತಿ ಗೃಹದಲ್ಲಿ ತಹಶೀಲ್ದಾರ ಅವರನ್ನು ಭೇಟಿ ಮಾಡಿದ ಸಂಘದ  ಪದಾಧಿಕಾರಿಗಳು ಕೈಗೆ ಕಪ್ಪು ಪಟ್ಟಿ ಕಟ್ಟಿಕೊಂಡು ತಮ್ಮ ಆಕ್ರೋಶ ವ್ಯಕ್ತಪಡಿಸಿ   ತಹಶೀಲ್ದಾರ ಮುಖಾಂತರ ಸರಕಾರಕ್ಕೆ ಮನವಿ ಅರ್ಪಿಸಿದರು.

ದಿನಾಂಕ: 09-07-2020 ರಂದು ಕೋಲಾರ ಜಿಲ್ಲೆ, ಬಂಗಾರು ಪೇಟೆ ತಾಲ್ಲೂಕು ತಹಶೀಲ್ದಾರರಾಗಿದ್ದ ಶ್ರೀ ಬಿ.ಕೆ. ಚಂದ್ರಮೌಳೇಶ್ವರ ಇವರು ಬಂಗಾರುಪೇಟೆ ತಾಲ್ಲೂಕಿನ ಕಾಮಸಮುದ್ರ ಹೋಬಳಿ, ತೊಪ್ಪನಹಳ್ಳಿ ಗ್ರಾಮದ ರಾಮಮೂರ್ತಿ ಹಾಗೂ ವೆಂಕಟಪತಿ ಎಂಬುವರ ಜಮೀನಿನ ವಾಜ್ಯದ ಸಂಬಂಧ ಪೊಲೀಸ್ ರಕ್ಷಣೆಯಲ್ಲಿ ಜಂಟಿ ಸರ್ವೆ ಕಾರ್ಯನಿರತರಾಗಿದ್ದ ಸಂದರ್ಭದಲ್ಲಿ ಆರೋಪಿ ವೆಂಕಟಪತಿರವರು ಪೋಲಿಸರ ಸಮ್ಮುಖದಲ್ಲಿ ಏಕಾಏಕಿ ಚಾಕುವಿನಿಂದ ಇರಿದು ಹತ್ಯೆಗೈದಿರುತ್ತಾರೆ.
ರಾಜ್ಯಾದ್ಯಂತ ಸರ್ಕಾರಿ ಅಧಿಕಾರಿಗಳು ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಇಂತಹ ಘಟನೆಗಳು ಆಗಿಂದಾಗ್ಗೆ ಸಂಭವಿಸುತ್ತಿದ್ದು, ಅದರಲ್ಲೂ ಕಂದಾಯ, ಭೂಮಾನಪ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಆರೋಗ್ಯ ಇಲಾಖೆ ಸೇರಿದಂತೆ ಹಲವು ಇಲಾಖೆಗಳಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮೇಲೆ ಇಂತಹ ಹಲ್ಲೆ ಹಾಗೂ ದೌರ್ಜನ್ಯಗಳು ನಡೆಯುತ್ತಿವೆ. ರಾಜ್ಯ ಸರ್ಕಾರದ ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವ ಕಾರ್ಯಾಂಗ ಕ್ಷೇತ್ರದ ಅಧಿಕಾರಿ/ನೌಕರರ ವರ್ಗ ಆತಂಕ ಹಾಗೂ ಭಯದಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಸೃಷ್ಟಿಯಾಗುತ್ತಿವೆ.

ರಾಜ್ಯದಲ್ಲಿ ಕಠಿಣ ಕಾನೂನುಗಳು ಜಾರಿಯಲ್ಲಿರದ ಕಾರಣ ಇಂತಹ ಕೃತ್ಯಗಳು ಮರುಕಳಿಸುತ್ತಿದ್ದು, ಇಂತಹ ಪರಿಸ್ಥಿತಿಗಳು ಮರುಕಳಿಸದಂತೆ ಕಠಿಣ ಕಾನೂನುಗಳನ್ನು ರಾಜ್ಯ ಸರ್ಕಾರ ರೂಪಿಸಿ ತಪ್ಪಿಸ್ಥರ ವಿರುದ್ಧ ಕಠಿಣ ಕ್ರಮ ಜರುಗಿಸಿ ಮೃತರ ಕುಟುಂಬದ ಸದಸ್ಯರೊಬ್ಬರಿಗೆ ಅನುಕಂಪದ ಆಧಾರದ ನೇಮಕಾತಿ ಮಾಡಿ, ಅವರ  ಕುಟುಂಬಕ್ಕೆ ಸರ್ಕಾರದಿಂದ ದೊರೆಯಬೇಕಾಗಿರುವ ಎಲ್ಲಾ ಆರ್ಥಿಕ ಸೌಲಭ್ಯಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಈ ಸಂದರ್ಭದಲ್ಲಿ ಸಂಘದ ಮುಖಂಡರುಗಳಾದ ಬಿ.ಆರ್. ಮುರಗೋಡ, ಕೃಷ್ಣ ಕುಮಾರ ಎಸ್.ಕೆ , ಸುಮನ ಜಾಧವ ,ಬಿ.ಎಮ್. ಕೊಡ್ಲ್ಯಾಳ , ಮಾರುತಿ ಗದಾಡಿ, ಎಸ್.ಬಿ ಕಟ್ಟಿಮನಿ , ಗ್ರಾಮ ಲೆಕ್ಕಾಧಿಕಾರಿಗಳ ಸಂಘದ ಡಿ.ಎಸ್.ದೇಸಾಯಿ, ಎನ್.ಎಮ್.ಬನ್ನಿಶೆಟ್ಟಿ ಉಪಸ್ಥಿತರಿದ್ದರು .

Related posts: