RNI NO. KARKAN/2006/27779|Thursday, November 7, 2024
You are here: Home » breaking news » ಮೂಡಲಗಿ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳ ಬೇಕು : ಪಾಟೀಲ

ಮೂಡಲಗಿ:ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳ ಬೇಕು : ಪಾಟೀಲ 

ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳ ಬೇಕು : ಪಾಟೀಲ

 

 

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜು 14 :

 

ಗ್ರಾಮೀಣ ಭಾಗದ ಜನತೆಯ ಜನ ಜೀವನ ಸುಧಾರಣೆಯ ದೃಷ್ಠಿಯಿಂದ ಗ್ರಾಮ ಪಂಚಾಯತಗಳ ಮೂಲಕ ಅನೇಕ ಅಮೂಲಾಗ್ರ ಬದಲಾವಣೆಗಳನ್ನು ಮಾಡಿದೆ. ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಜನ ಸಾಮಾನ್ಯರು ಒಗ್ಗಟ್ಟಿನಿಂದ ಸರಕಾರದ ಯೋಜನೆಗಳನ್ನು ಸದುಪಯೋಗ ಪಡೆದುಕೊಳ್ಳ ಬೇಕು ಎಂದು ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷ ಶಿವನಗೌಡ ಪಾಟೀಲ ಹೇಳಿದರು.
ಅವರು ಸಮೀಪದ ಕಳ್ಳಿಗುದ್ದಿ ಗ್ರಾಮದಲ್ಲಿ ಜರುಗಿದ ಸನ್ 2015-19ರ ಸಾಲಿನ ಗ್ರಾಮ ಪಂಚಾಯತ ಚುನಾಯಿತ ಪ್ರತಿನಿಧಿಗಳ ಬಿಳ್ಕೊಡುವ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಗ್ರಾಮಗಳ ಅಭಿವೃದ್ಧಿಯಾದಾಗ ಮಾತ್ರ ದೇಶದ ಅಭಿವೃದ್ಧಿಯತ್ತ ಸಾಗಲು ಸಾಧ್ಯವಾಗುವದು. ಪ್ರಮುಖವಾಗಿ ಶಿಕ್ಷಣ, ಆರೋಗ್ಯ, ಆರ್ಥಿಕತೆ ಹಾಗೂ ಸಾಮಾಜಿಕವಾಗಿ ಬೆಳವಣಿಗೆಯಾದರೆ ಮಾತ್ರ ಎಲ್ಲ ಕ್ಷೇತ್ರಗಳಲ್ಲಿ ಯಶಸ್ಸು ಸಾಧಿಸಲು ಸಾಧ್ಯವಾಗುವದು. ಗ್ರಾಮೀಣ ಮಟ್ಟದ ಕುಂದುಕೊರತೆಗಳು ಅವಶ್ಯಕವಿರುವ ಕೆಲಸ ಕಾರ್ಯಗಳನ್ನು ಸ್ಥಳೀಯವಾಗಿ ಪರಿಹಾರೋಪಾಯ ಕಂಡುಕೊಳ್ಳುವದರಿಂದ ತ್ವರಿತಗತಿಯ ಪ್ರಗತಿ ಕಾಣಬಹುದು ಎಂದರು.
ಕೆ.ಎಮ್.ಎಫ್ ರಾಜ್ಯಾಧ್ಯಕ್ಷರು ಹಾಗೂ ಅರಭಾಂವಿ ಶಾಸಕರಾದ ಬಾಲಚಂದ್ರ ಜಾರಕಿಹೊಳಿಯವರ ಅವಿರತ ಪ್ರಯತ್ನ ಹಾಗೂ ನಿರಂತರ ಪರಿಶ್ರಮದ ಫಲವಾಗಿ ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ಧಿ ಪರ ಕಾರ್ಯಗಳು ಜರುಗಿವೆ. ಗ್ರಾಮೀಣ ರಸ್ತೆ, ಕುಡಿಯುವ ನೀರು, ನೈರ್ಮಲ್ಯ, ಶಿಕ್ಷಣ, ಆರೋಗ್ಯ, ಪರಿಸರ ಕಾಳಜಿಯನ್ನು ವಹಿಸಬೇಕು. ಸದ್ಯದ ಪರಿಸ್ಥಿತಿಯಲ್ಲಿ ಕೊರೋನಾ ಸೋಂಕಿನಿಂದಾಗಿ ಜನತೆ ಕಂಗಾಲಾಗಿದ್ದು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳಾದ ಮಾಸ್ಕ್, ಸ್ಯಾನಿಟೈಜರ್, ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಅಮೂಲ್ಯವಾದ ನಮ್ಮ ಜೀವಗಳನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ನಿರ್ಗಮಿತ ಗ್ರಾಮ ಪಂಚಾಯತ ಸದಸ್ಯರಿಗೆ ಸಸಿಗಳನ್ನು ನೀಡುವ ಮೂಲಕ ಸತ್ಕರಿಸಿ ಗೌರವಿಸಿದರು. ಪಿಎಸ್‍ಐ ಹುದ್ದೆಗೆ ಆಯ್ಕೆಯಾದ ಸಂತೋಷ ದಳವಾಯಿ ಅವರನ್ನು ಸತ್ಕರಿಸಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷೆ ನಾಗವ್ವ ನಾಡಗೌಡರ, ಉಪಾಧ್ಯಕ್ಷ ವೆಂಕಪ್ಪ ಮಹಾರಡ್ಡಿ, ಮುಖಂಡರಾದ ರಾಮಣ್ಣ ಮಹಾರಡ್ಡಿ, ಹನಮಂತ ಅಳಗೋಡಿ, ರಾಮಣ್ಣ ನಾಡಗೌಡರ, ಅರಕೇರಿ, ಸದಸ್ಯರಾದ ಮಹಾದೇವಿ ಪಾಶ್ಚಾಪೂರ, ಕರೆಪ್ಪ ಅಳಗೋಡಿ, ಮುದಕಪ್ಪ ಗೋಡಿ, ಭೀಮಶೆಪ್ಪ ಬಿರನ್ನವರ, ಲಕ್ಷ್ಮೀ ತವಗಿ, ಫಕೀರವ್ವ ಅಳಗೋಡಿ, ಮಲ್ಲವ್ವ ನಾಯಕರ, ಚಂದ್ರಪ್ಪ ಹರಿಜನ, ಅಭಿವೃದ್ಧಿ ಅಧಿಕಾರಿ ಎ.ಆರ್ ಗಚ್ಚಿ, ಲೆಕ್ಕ ಸಹಾಯಕ ರಮೇಶ ಮುನ್ಯಾಳ, ವಿ.ಎನ್ ಬಿಸನಕೊಪ್ಪ, ಎಸ್.ಜಿ ಹಿರೆಮೇತ್ರಿ, ವಿಭೂತಿ, ಎಸ್.ಬಿ ಪತ್ತಾರ ಹಾಗೂ ಪಂಚಾಯತ ಸಿಬ್ಬಂದಿ ವರ್ಗ ಹಾಜರಿದ್ದರು.

Related posts: