RNI NO. KARKAN/2006/27779|Tuesday, December 24, 2024
You are here: Home » breaking news » ಗೋಕಾಕ:ಲಾಕಡೌನಗೆ ಪರಸ್ಪರ ಸಹಕಾರ ನೀಡಿ : ಗೋಕಾಕ ಜನತೆಯಲ್ಲಿ ಹೆಚ್ಚುವರಿ ಎಸ.ಪಿ ಅಮರನಾಥ ಮನವಿ

ಗೋಕಾಕ:ಲಾಕಡೌನಗೆ ಪರಸ್ಪರ ಸಹಕಾರ ನೀಡಿ : ಗೋಕಾಕ ಜನತೆಯಲ್ಲಿ ಹೆಚ್ಚುವರಿ ಎಸ.ಪಿ ಅಮರನಾಥ ಮನವಿ 

ಲಾಕಡೌನಗೆ ಪರಸ್ಪರ ಸಹಕಾರ ನೀಡಿ : ಗೋಕಾಕ ಜನತೆಯಲ್ಲಿ ಹೆಚ್ಚುವರಿ ಎಸ.ಪಿ ಅಮರನಾಥ ಮನವಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 16 :

 

ಮಹಾಮಾರಿ ಕೊರೋನಾ ವೈರಸ್ ತಡೆಗಟ್ಟುವುದೆ ಎಲ್ಲರ ಉದ್ದೇಶವಾಗಿದೆ .ಜನತೆ ಅನಾವಶ್ಯಕವಾಗಿ ಒಡಾಡದೆ ತಮ್ಮ ಮನೆಗಳಲ್ಲಿಯೇ ಇದ್ದು, ಲಾಕಡೌನಗೆ ಸಹಕಾರ ನೀಡುವಂತೆ ಜಿಲ್ಲಾ ಹೆಚ್ಚುವರಿ ಪೊಲೀಸ ವರಿಷ್ಠಾಧಿಕಾರಿ ಅಮರನಾಥ ರೆಡ್ಡಿ ಹೇಳಿದರು

ಮಂಗಳವಾರ ಲಾಕಡೌನ ಜಾರಿಯಲಿರುವ ಹಿನ್ನೆಲೆಯಲ್ಲಿ ನಗರಕ್ಕೆ ಭೇಟಿನೀಡಿ ಪರಿಸ್ಥಿತಿಯನ್ನು ಅವಲೋಕಿಸಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಇಲಾಖೆಯಿಂದ ಎಲ್ಲ ರೀತಿಯ ಸೂಕ್ತ ವ್ಯವಸ್ಥೆಯನ್ನು ಮಾಡಲಾಗಿದೆ. ಜನತೆ ತಮ್ಮ ಮನೆಗಳಲ್ಲಿಯೆ ಇದ್ದು ಸಹಕಾರ ನೀಡಬೇಕು ಅನಾವಶ್ಯಕವಾಗಿ ತಿರುಗಾಡುವವರ ವಿರುದ್ಧ ಸೂಕ್ತ ಕ್ರಮ ಕೈಗೋಳ್ಳಲಾಗುವದು. ಎಲ್ಲರೂ ಪರಸ್ಪರ ಸಹಕಾರದಿಂದ ಈ ಕೊರೋನಾ ಹರಡುವಿಕೆಯನ್ನು ತಡೆಯೋಣಾ ಎಂದು ತಿಳಿಸಿದರು.

ಸಿಪಿಐ ಗೋಪಾಲ ರಾಠೋಡ, ಪಿಎಸ್ಐ ಎ.ಟಿ ಅಮ್ಮಿನಬಾಂವಿ, ತಿಲಾರಿ ಉಪಸ್ಥಿತರಿದ್ದರು.

Related posts: