RNI NO. KARKAN/2006/27779|Friday, November 22, 2024
You are here: Home » breaking news » ಗೋಕಾಕ:ಲಾಕಡೌನಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ : ಬಿಕ್ಕೋ ಎನ್ನುತ್ತಿರುವ ಜನನಿಬಿಡು ಪ್ರದೇಶಗಳು

ಗೋಕಾಕ:ಲಾಕಡೌನಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ : ಬಿಕ್ಕೋ ಎನ್ನುತ್ತಿರುವ ಜನನಿಬಿಡು ಪ್ರದೇಶಗಳು 

ಲಾಕಡೌನಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ : ಬಿಕ್ಕೋ ಎನ್ನುತ್ತಿರುವ ಜನನಿಬಿಡು ಪ್ರದೇಶಗಳು

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 15 :

ಲಾಕಡೌನ ಹಿನ್ನೆಲೆಯಲ್ಲಿ ಜನರಿಲ್ಲದೆ ಬಿಕ್ಕೋ ಎನ್ನುತ್ತಿರುವ ಭಾಜಿ ಮಾರುಕಟ್ಟೆ

ಮಂಗಳವಾರ ರಾತ್ರಿ 8 ಘಂಟೆಯಿಂದ ಜಿಲ್ಲೆಯ ಐದು ತಾಲೂಕುಗಳಲ್ಲಿ ಜಾರಿಯಲ್ಲಿರುವ ಲಾಕಡೌನಗೆ ಗೋಕಾಕದಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

 

ವಾಹನಗಳ ಓಡಾಟ ಇಲ್ಲದೆ ಸ್ತಬ್ಧವಾಗಿರುವ ನಾಕಾ ನಂ 1 ರ ಚನ್ನಮ್ಮಾ ವೃತ್ತ

ನಗರದ ಜನನಿಬಿಡು ಪ್ರದೇಶಗಳಾದ ಬಸವೇಶ್ವರ ವೃತ್ತ ,ಸಂಗೋಳ್ಳಿ ರಾಯಣ್ಣ ವೃತ್ತ,ಭಾಜಿ ಮಾರ್ಕೆಟ್ , ಭಾಪನ ಕೂಟ, ಶಿಂಧಿಕೂಟ, ಬ್ಯಾಳಿಕಾಟ,ಅಪ್ಪಸರಾ ಕೂಟ, ನಾಕಾ ನಂ 1, ಎ.ಪಿ.ಎಂ.ಸಿ ಸೇರಿದಂತೆ ಇತರ ಪ್ರದೇಶಗಳಲ್ಲಿ ವ್ಯಾಪಾರ ವಹಿವಾಟು ಸಂಪೂರ್ಣ ಸ್ತಗಿತಗೊಂಡ ಪರಿಣಾಮ ಈ ಪ್ರದೇಶಗಳು ಬಿಕ್ಕೋ ಎನ್ನುತ್ತಿದ್ದವು. ಅಗತ್ಯ ಸೇವೆಗಳಾದ ಔಷಧಿ ಅಂಗಡಿ, ಆಸ್ಪತ್ರೆಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಗತ್ಯ ವಸ್ತುಗಳಿಗಾಗಿ ಜನರ ಓಡಾಟ ಬಿಟ್ಟರೆ ಯಾರು ಅನಗತ್ಯವಾಗಿ ಹೊರಗಡೆ ತಿರುಗಾಡುವದು ಕಂಡು ಬರಲಿಲ್ಲ.

ವ್ಯಾಪಾರ ವಹಿವಾಟು ಇಲ್ಲದೆ ಸಂಪೂರ್ಣ ಬಂದ ಆಗಿರುವ ನಗರದ ಜನನಿಬಿಡು ಪ್ರದೇಶ ಶಿಂಧಿಕೂಟ

ಹೆಚ್ಚುವರಿ ಎಸ್.ಪಿ ಅಮರನಾಥ ರೆಡ್ಡಿ ನಗರಕ್ಕೆ ಭೇಟಿ ನೀಡಿ ನಗರದಲ್ಲಿ ಜಾರಿಯಲ್ಲಿರುವ ಲಾಕಡೌನ ಪರಿಸ್ಥಿತಿ ಅವಲೋಕಿಸಿ ಜನರಲ್ಲಿ ಭಯ ಮೂಡಿಸದೆ. ಯಾರ ಮೇಲೆ ಅನಾವಶ್ಯಕವಾಗಿ ಲಾಠಿ ಬಿಸದೆ ಎಲ್ಲರಲ್ಲಿ ಜಾಗೃತಿ ಮೂಡಿಸಿ ಲಾಕಡೌನ ಯಶಸ್ವಿಯಾಗುಲು ಇಲಾಖೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.

ವಾಹನಗಳ ಓಡಾಟ ವಿಲ್ಲದೆ ಬಿಕ್ಕೋ ಎನ್ನುತ್ತಿರುವ ನಗರದ ಎ.ಪಿ.ಎಂ.ಸಿ ರಸ್ತೆ

Related posts: