RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:23 ವರ್ಷದ ತುಂಬು ಗರ್ಭಿಣಿ ಯೊಬ್ಬರಿಗೆ ಕೊರೋನಾ ಸೋಂಕು ಧೃಡ : ಡಾ.ಜಗದೀಶ ಮಾಹಿತಿ

ಗೋಕಾಕ:23 ವರ್ಷದ ತುಂಬು ಗರ್ಭಿಣಿ ಯೊಬ್ಬರಿಗೆ ಕೊರೋನಾ ಸೋಂಕು ಧೃಡ : ಡಾ.ಜಗದೀಶ ಮಾಹಿತಿ 

23 ವರ್ಷದ ತುಂಬು ಗರ್ಭಿಣಿ  ಯೊಬ್ಬರಿಗೆ  ಕೊರೋನಾ ಸೋಂಕು ಧೃಡ : ಡಾ.ಜಗದೀಶ ಮಾಹಿತಿ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :

ತಾಲೂಕಿನ  ಮಾಲದಿನ್ನಿ ಗ್ರಾಮದ (23) ವರ್ಷದ ಗರ್ಭಿಣಿ ಯೊಬ್ಬರಿಗೆ  ಕೊರೋನಾ ಸೋಂಕು ಧೃಡಪಟ್ಟಿದ್ದೆ ಎಂದು ಗೋಕಾಕ ತಾಲೂಕಾ ವೈದ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ಬೆಳಗಾವಿ ಜಿಲ್ಲೆಯಾದ್ಯಂತ ಇಂದು 94 ಪ್ರಕರಣಗಳು ಪತ್ತೆಯಾಗಿದ್ದು, ಗೋಕಾಕ ತಾಲೂಕಿನ ಮಾಲದಿನ್ನಿ ಗ್ರಾಮದ ಗರ್ಭಿಣಿ ಯೊಬ್ಬರಿಗೆ ಸೋಂಕು ತೊಗಲಿದ್ದು, ಯುವತಿಯು 9 ತಿಂಗಳ ತುಂಬು ಗರ್ಭಿಣಿಯಾಗಿದ್ದು, ಅಥಣಿ ಪಟ್ಟಣದಿಂದ ಹೆರಿಗೆಗಾಗಿ ತಾಲೂಕಿನ ಮಾಲದಿನ್ನಿ ಗ್ರಾಮದ ತಾಯಿಯ ಮನೆಗೆ ಬಂದಿದ್ದ ಇವರ ಗಂಟಲು ದ್ರವ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಕೊರೋನಾ ಸೋಂಕು ದೃಡಪಟ್ಟಿದೆ.ಸೋಂಕಿತ ಮಹಿಳೆ ವಾಸಿಸುವ ಸುತ್ತ ಮುತ್ತಲಿನ ಮನೆಯ 50 ಮೀಟರ ಪ್ರದೇಶವನ್ನು ಸಿಲ್ಡೌನ ಮಾಡಲಾಗಿದ್ದು, ಚಿಕಿತ್ಸೆಗಾಗಿ ಸೋಂಕಿತ ಮಹಿಳೆಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

Related posts: