RNI NO. KARKAN/2006/27779|Thursday, November 7, 2024
You are here: Home » breaking news » ಗೋಕಾಕ:14 ಜನ ಬಿಡುಗಡೆ , 2 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ

ಗೋಕಾಕ:14 ಜನ ಬಿಡುಗಡೆ , 2 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ 

14 ಜನ ಬಿಡುಗಡೆ , 2 ಜನರಿಗೆ ಕೊರೋನಾ ಸೋಂಕು ದೃಡ : ಡಾ.ಜಗದೀಶ ಜಿಂಗಿ

 

 
ಕೊವಿಡ್ ಕೇರ ಸೆಂಟರಗೆ ಬೆಳಗಾವಿ ಲೋಕಾಯುಕ್ತ ಡಿವೈಎಸ್ಪಿ ಬಿ.ಎಸ್. ಪಾಟೀಲ್ ಭೇಟಿ ನೀಡಿ ಪರಿಶೀಲನೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 23 :

 

 

ದುರದುಂಡಿ ಗ್ರಾಮದ 12 ವರ್ಷದ ಬಾಲಕನಿಗೆ ಹಾಗೂ ಬೆಳಗಾವಿ ಡಿ.ಎಚ್ಓ ಕಛೇರಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಲೂಕಿನ ಬೂದಿಹಾಳ ಗ್ರಾಮದ 32 ವರ್ಷದ ಯುವಕನಿಗೆ ಗುರುವಾರದಂದು ಕೊರೋನಾ ಸೋಂಕು ದೃಡಪಟ್ಟಿದ್ಧು, ನಗರದ ಕೊವಿಡ್ ಕೇರ ಸೆಂಟರದಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 14 ಜನರನ್ನು ಬಿಡುಗಡೆ ಗೊಳಿಸಲಾಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ತಾಲೂಕಿನ ದುರದುಂಡಿ ಗ್ರಾಮದಲ್ಲಿ ಮೊನ್ನೆಯಷ್ಟೇ 200 ಜನರ ಗಂಟಲು ದ್ರವ ಸಂಗ್ರಹಿಸಿದರಲ್ಲಿ ಒಬ್ಬನಿಗೆ ಇಂದು ಯುವಕನಿಗೆ ಸೋಂಕು ದೃಡಪಟ್ಟಿದೆ . ಹಾಗೂ ಬೆಳಗಾವಿ ಡಿಎಚ್ಓ ಕಛೇರಿಯಲ್ಲಿ ಮಾನಸಿಕ ವಿಭಾಗದಲ್ಲಿ ಸಹಾಯಕನಾಗಿ ಕಾರ್ಯನಿರ್ವಹಿಸುತ್ತಿರುವ ಬೂದಿಹಾಳ ಗ್ರಾಮದ ಯುವಕನಿಗೆ ಸೋಂಕು ದೃಡಪಟ್ಟಿದೆ. ಇಬ್ಬರು ಸೋಂಕಿತರನ್ನು ಕೊವಿಡ್ ಕೇರ ಸೆಂಟರನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುವುದು ಎಂದು ಡಾ.ಜಿಂಗಿ ತಿಳಿಸಿದ್ದಾರೆ.

14 ಜನ ಸೋಂಕಿತರ ಬಿಡುಗಡೆ : ವಾರದ ಹಿಂದೆಯಷ್ಟೇ ನಗರದ ದೇವರಾಜ ಅರಸ ಹಾಸ್ಟೆಲ್ವ ಹಾಗೂ ಸರಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೊವಿಡ್ ಕೇರ ಸೆಂಟರಗಳಲ್ಲಿ ದಾಖಲಾಗಿದ್ದ 7 ಜನ ಗರ್ಭಿಣಿಯರು ಸೇರಿದಂತೆ ಒಟ್ಟು 14 ಕೊರೋನಾ ಸೋಂಕಿತರು ಸಂಪೂರ್ಣ ಗುಣಮುಖ ಹೊಂದಿದರ ಪರಿಣಾಮ ಇಂದು ಬಿಡುಗಡೆ ಗೊಳಿಸಲಾಗಿದ್ದು , ಸರಕಾರದ ಹೊಸ ಮಾರ್ಗಸೂಚಿಯಂತೆ ಮುಂದಿನ 14 ದಿನಗಳವರೆಗೆ ಮನೆಯಲ್ಲೇ ಹೋಮ್ ಕ್ವಾರಂಟೈನಲ್ಲಿ ಇರುವಂತೆ ತಿಳಿಸಲಾಗಿದೆ ಎಂದು ಡಾ. ಜಗದೀಶ ಜಿಂಗಿ ಪತ್ರಿಕೆ ತಿಳಿಸಿದ್ದಾರೆ.

ಕೊವಿಡ್ ಕೇರ ಸೆಂಟರಗೆ ಲೋಕಾಯುಕ್ತ ಡಿವೈಎಸ್ಪಿ ಭೇಟಿ : ನಗರದ ಸರಕಾರಿ ಆಸ್ಪತ್ರೆಯಲ್ಲಿ ತೆರೆಯಲಾಗಿರುವ ಕೊವಿಡ್ ಕೇರ ಸೆಂಟರಗೆ ಲೋಕಾಯುಕ್ತ ಡಿವೈಎಸ್ಪಿ ಬಿ.ಎಸ್. ಪಾಟೀಲ್
ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೋನಾ  ಸೋಂಕಿತರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳುವಂತೆ ವೈದ್ಯಾಧಿಕಾರಿಗಳಿಗೆ ಸಲಹೆ ನೀಡಿದರು

ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ರವೀಂದ್ರ ಅಂಟಿನ , ಪೌರಾಯುಕ್ತ ಶಿವಾನಂದ ಹಿರೇಮಠ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು

Related posts: