RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಪೌಷ್ಠಿಕ ಆಹಾರವಾದ ಹಾಲನ್ನು ವ್ಯರ್ಥಮಾಡದೆ ರೋಗಿಗಳಿಗೆ ಬಡವರಿಗೆ ನೀಡಿ : ಮುರುಘರಾಜೇಂದ್ರ ಶ್ರೀ

ಗೋಕಾಕ:ಪೌಷ್ಠಿಕ ಆಹಾರವಾದ ಹಾಲನ್ನು ವ್ಯರ್ಥಮಾಡದೆ ರೋಗಿಗಳಿಗೆ ಬಡವರಿಗೆ ನೀಡಿ : ಮುರುಘರಾಜೇಂದ್ರ ಶ್ರೀ 

ಪೌಷ್ಠಿಕ ಆಹಾರವಾದ ಹಾಲನ್ನು ವ್ಯರ್ಥಮಾಡದೆ ರೋಗಿಗಳಿಗೆ ಬಡವರಿಗೆ ನೀಡಿ : ಮುರುಘರಾಜೇಂದ್ರ ಶ್ರೀ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 25 :

 

 

ಪೌಷ್ಠಿಕ ಆಹಾರವಾದ ಹಾಲನ್ನು ವ್ಯರ್ಥಮಾಡದೆ ರೋಗಿಗಳಿಗೆ ಬಡವರಿಗೆ ನೀಡಿದರೆ ಬಸವ ಪಂಚಮಿ ಆಚರಣೆ ಅರ್ಥಪೂರ್ಣವಾಗಿರುತ್ತದೆ ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು.

ಶನಿವಾರದಂದು ನಗದರ ಶೂನ್ಯ ಸಂಪಾದನ ಮಠದಲ್ಲಿ ಬಸವ ಪಂಚಮಿ ನಿಮಿತ್ತ ಲಿಂಗಾಯತ ಜಾಗ್ರತ ಮಹಿಳಾ ವೇದಿಕೆಯವರು ಹಮ್ಮಿಕೊಂಡ ಕೊರೋನಾ ಸೋಂಕಿತ ರೋಗಿಗಳಿಗೆ ಹಾಲನ್ನು ನೀಡಲು ಪೌರಾಯುಕ್ತ ಶಿವಾನಂದ ಹಿರೇಮಠ ಅವರಿಗೆ ನೀಡಿ ಮಾತನಾಡುತ್ತಿದ್ದರು. ಬಸವಣ್ಣನವರ ವಚನದಂತೆ ಕಲ್ಲು ನಾಗರಿಗೆ ಹಾಲೇರೆಯದೆ ರೋಗಿಗಳಿಗೆ ನೀಡಿದರೆ ದೇವರ ಸೇವೆ ಮಾಡಿದಂತಾಗುತ್ತದೆ. ನೀಜವಾದ ದೇವರು ರೋಗಿಗಳು , ಬಡವರು ಹಾಗೂ ದೀನರೆ ನಿಜವಾದ ದೇವರಾಗಿದ್ದು, ಅವರಿಗೆ ಹಾಲನ್ನು ನೀಡಿ ಬಸವ ಪಂಚಮಿ ಆಚರಿಸುವಂತೆ ಕರೆ ನೀಡಿದರು.

ಈ ಸಂದರ್ಭದಲ್ಲಿ ವೇದಿಕೆ ಅಧ್ಯಕ್ಷೆ ಶಂಕುತಲಾ ಕಟ್ಟಿ, ಗಣ್ಯರಾದ ವಿವೇಕ ಜತ್ತಿ, ದುಂದಪ್ಪ ಕಿರಗಿ , ಎಸ್.ಎಂ ಕಟ್ಟಿ , ಅಡಿವೇಶ ಗವಿಮಠ ಸೇರಿದಂತೆ ಅನೇಕರು ಇದ್ದರು

Related posts: