RNI NO. KARKAN/2006/27779|Friday, December 13, 2024
You are here: Home » breaking news » ಗೋಕಾಕ:96 ಜನರಿಗೆ ಕೊರೋನಾ ಕ್ಷಿಪ್ರ ಪರೀಕ್ಷೆ ಒಟ್ಟು 21 ಜನರಿಗೆ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ

ಗೋಕಾಕ:96 ಜನರಿಗೆ ಕೊರೋನಾ ಕ್ಷಿಪ್ರ ಪರೀಕ್ಷೆ ಒಟ್ಟು 21 ಜನರಿಗೆ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ 

96 ಜನರಿಗೆ ಕೊರೋನಾ ಕ್ಷಿಪ್ರ ಪರೀಕ್ಷೆ ಒಟ್ಟು 21 ಜನರಿಗೆ ಸೋಂಕು ದೃಡ : ಡಾ.ಜಗದೀಶ ಜಿಂಗಿ ಮಾಹಿತಿ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 25 :

 
ಶನಿವಾರದಂದು ನಗರದ ಆಸ್ಪತ್ರೆಯಲ್ಲಿ 56 ಜನರಿಗೆ ನಡೆಸಲಾದ ಕೊರೋನಾ ಕ್ಷಿಪ್ರ ಪರೀಕ್ಷೆಗೆಯಲ್ಲಿ 12 ಜನರಿಗೆ ಸೋಂಕು ದೃಡಪಟ್ಟಿದ್ದು , ಒಟ್ಟು 21 ಜನರಿಗೆ ಶನಿವಾರದಂದು ಕೊರೋನಾ ಸೋಂಕು ತಲುಗಿದೆ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿರುವ ಅವರು ತಾಲೂಕಿನ ರಾಜಾಪೂರ ಗ್ರಾಮದ ದಂಪತಿಗಳಿಗೆ ಕೊರೋನಾ ಸೋಂಕು ದೃಡಪಟ್ಟಿದ್ದು, ಗೋಕಾಕ ನಗರದಲ್ಲಿ 2 , ಯಾದವಾಡ ಗ್ರಾಮದ 55 ವರ್ಷದ ವ್ಯಕ್ತಿಗೆ , ಖನಗಾಂವ ಗ್ರಾಮದ 70 ವರ್ಷದ ವೃದ್ದನಿಗೆ ಸೋಂಕು ದೃಡಪಟ್ಟಿದ ಪರಿಣಾಮ ನಗರದಲ್ಲಿ
ಮತ್ತು ತಾಲೂಕಿನ ಇತರ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಒಟ್ಟು 96 ಜನರಿಗೆ ಕೊರೋನಾ ಕ್ಷಿಪ್ರ ಪರೀಕ್ಷೆ ನಡೆಸಲಾಗಿತ್ತು. ಅದರಲ್ಲಿ 15 ಜನರಿಗೆ ಕೊರೋನಾ ಸೋಂಕು ದೃಡಪಟ್ಟಿದೆ ಎಂದು ಡಾ.ಜಗದೀಶ ಜಿಂಗಿ ತಿಳಿಸಿದ್ದಾರೆ.

ಪ್ರತಿ ದಿನ 100 ಜನರಿಗೆ ಕೊರೋನಾ ಕ್ಷಿಪ್ರ ಪರೀಕ್ಷೆ : ನಗರ ಸೇರಿದಂತೆ ತಾಲೂಕಿನ ವ್ಯಾಪ್ತಿಯಲ್ಲಿ ಬರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೊರೋನಾ ಸೋಂಕನ್ನು ದೃಡಪಡಿಸುವ ನಿಟ್ಟಿನಲ್ಲಿ ಕ್ಷಿಪ್ರ ಪರೀಕ್ಷೆ ನಡೆಸಲು ಇಲಾಖೆಯಿಂದ ಎಲ್ಲ ರೀತಿಯ ತಯಾರಿ ನಡೆಸಲಾಗಿದ್ದು, ಕೊರೋನಾ ವರದಿ ಬರುವುದನ್ನು ಕಾಯುವುದನ್ನು ತಪ್ಪಿಸಲು ಕೊರೋನಾ ಕ್ಷಿಪ್ರ ವರದಿ ನೆರವಾಗಲ್ಲಿದು ಸೋಂಕಿತರನ್ನು ಗುರುತಿಸಿ ತಕ್ಷಣದಲ್ಲಿ ಚಿಕಿತ್ಸೆ ನೀಡಲಾಗುವುದು ಎಂದು ಡಾ‌‌.ಜಗದೀಶ ಜಿಂಗಿ ತಿಳಿಸಿದ್ದಾರೆ.

Related posts: