RNI NO. KARKAN/2006/27779|Saturday, October 19, 2024
You are here: Home » breaking news » ಗೋಕಾಕ:ಅಂಬುಲೆನ್ಸಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೆಎಂವಿಪಿ ಪದಾಧಿಕಾರಿಗಳ ಮನವಿ

ಗೋಕಾಕ:ಅಂಬುಲೆನ್ಸಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೆಎಂವಿಪಿ ಪದಾಧಿಕಾರಿಗಳ ಮನವಿ 

ಅಂಬುಲೆನ್ಸಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಕೆಎಂವಿಪಿ ಪದಾಧಿಕಾರಿಗಳ ಮನವಿ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 28 :

 

ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ನಿಲ್ಲಿಸಲಾಗಿದ್ದ, ಅಂಬುಲೆನ್ಸಗೆ ಬೆಂಕಿ ಹಚ್ಚಿ , ಇನ್ನುಳಿದ ವಾಹನಗಳ ಮೇಲೆ ಕಲ್ಲೂ ತೂರಾಟ ನಡೆಸಿದ ದುಷ್ಕರ್ಮಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಕರ್ನಾಟಕ ಮುಸ್ಲಿಂ ವಿಕಾಸ ಪರಿಷತ್ ಜಿಲ್ಲಾ ಘಟಕದ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಅರ್ಪಿಸಿದರು .

ಮಂಗಳವಾರದಂದು ಸಾಯಂಕಾಲ ನಗರದ ತಹಶೀಲ್ದಾರ ಕಾರ್ಯಾಲಯದಲ್ಲಿ ಸೇರಿದ ಪರಿಷತ್ ಕಾರ್ಯಕರ್ತರು ಅಂಬುಲೆನ್ಸಗೆ ಬೆಂಕಿ ಹಚ್ಚಿ ಅಮಾನವೀಯ ತೊರಿದ ಪುಂಡರ ವಿರುದ್ಧ ತಮ್ಮ ಆಕ್ರೋಶವನ್ನು ವ್ಯಕಪಡಿಸಿ ಉಪ ತಹಶೀಲ್ದಾರ ಎಸ್.ಬಿ.ಕಟ್ಟಿಮನಿ ಅವರ ಮುಖಾಂತರ ಜಿಲ್ಲಾಧಿಕಾರಿಗಳಿಗೆ ಮತ್ತು ಪೊಲೀಸ ಆಯುಕ್ತರಿಗೆ ಪ್ರತ್ಯೇಕ ಮನವಿ ಸಲ್ಲಿಸಿದರು.

ಕಳೆದ ಸುಮಾರು 5 ತಿಂಗಳಿನಿಂದ ತಮ್ಮ ಜೀವನ ಹಂಗು ತೊರೆದು ಕೊರೋನಾ ಸೋಂಕಿತರ ಆರೈಕೆ ಮಾಡುತ್ತಿರುವ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರ ಮತ್ತು ಪೊಲೀಸ ಇಲಾಖೆಯ ಸಿಬ್ಬಂದಿಗಳ ಕಾರ್ಯ ಶ್ಲಾಘನೀಯವಾಗಿದೆ. ಇಂತಹ ಸಮಯದಲ್ಲಿ ಅವರಿಗೆ ಆತ್ಮಸ್ಥೈರ್ಯ ತುಂಬಿ ಅವರ ಕೆಲಸವನ್ನು ಗೌರವಿಸಬೇಕಾದ ಸಂದರ್ಭದಲ್ಲಿ ಕೆಲವರು ಮಾನವೀಯತೆಯನ್ನು ಮರೆತು ದಾಂಧಲೆ ಮಾಡಿ ಅಂಬುಲೆನ್ಸಗೆ ಬೆಂಕಿ ಹಚ್ಚಿರುವುದು ತರವಲ್ಲ.ಈಗಾಗಲೇ ಈ ಪ್ರಕಣರಕ್ಕೆ ಸಂಬಂಧಿಸಿದಂತೆ 21 ಜನರನ್ನು ಬಂಧಿಸಲಾಗಿದ್ದು, ಯಾವುದೇ ಒತ್ತಡಕ್ಕೆ ಮನಿಯದೆ ಕಾನೂನು ರೀತಿ ಅವರ ಮೇಲೆ ಕಠಿಣ ಕ್ರಮ ಜರುಗಿಸಿ ಅವರನ್ನು ಶಿಕ್ಷೆಗೆ ಒಳಪಡಿಸಿ ಕೊರೋನಾ ಸಮಯದಲ್ಲಿ ತಮ್ಮ ಜೀವದ ಹಂಗು ತೊರೆದು ಕಾರ್ಯನಿರ್ವಹಿಸುವ ಕೊರೋನಾ ಸೈನಿಕರಿಗೆ ಸೂಕ್ತ ರಕ್ಷಣೆ ಒದಗಿಸಬೇಕೆಂದು ಕರ್ನಾಟಕ ಮುಸ್ಲಿಂ ವಿಕಾಸ್ ಪರಿಷತ್ ಮನವಿಯಲ್ಲಿ ವಿನಂತಿಸಲಾಗಿದೆ.

ಈ ಸಂದರ್ಭದಲ್ಲಿ ವೇದಿಕೆಯ ಜಿಲ್ಲಾಧ್ಯಕ್ಷ ಅಬ್ಬಾಸ ದೇಸಾಯಿ , ಕಾರ್ಯದರ್ಶಿ ಸಾದಿಕ ಹಲ್ಯಾಳ, ಪದಾಧಿಕಾರಿಗಳಾದ ಶಬ್ಬೀರ ಮುಲ್ಲಾ, ಜಾವೇದ ನಿಂಬರಗಿ, ಮೊಸಿನ ಮಕಾನದಾರ , ಕುತುಬ್ಬುದ್ದಿನ ಪೀರಜಾದೆ, ಮುಗುಟ ಪೈಲವಾನ, ಯಾಸಿನ ಮುಲ್ಲಾ,ಖಾಜಾಸಾಬ ಮತ್ತೆ, ಶಬ್ಬೀರ ಬೋರಗಾವಕರ ಉಪಸ್ಥಿತರಿದ್ದರು.

Related posts: