RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಪರಿಸರವನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ : ಜಿಪಂ ಸದಸ್ಯ ಟಿ ಆರ್ ಕಾಗಲ

ಗೋಕಾಕ:ಪರಿಸರವನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ : ಜಿಪಂ ಸದಸ್ಯ ಟಿ ಆರ್ ಕಾಗಲ 

ಪರಿಸರವನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ : ಜಿಪಂ ಸದಸ್ಯ ಟಿ ಆರ್ ಕಾಗಲ

 
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜು 28 :

 

 

ನಮ್ಮ ಜೀವನದಲ್ಲಿ ಪರಿಸರದ ಪಾತ್ರವು ಬಹುಮುಖ್ಯವಾಗಿದೆ. ಪರಿಸರವನ್ನು ಉಳಿಸಿ ಬೆಳೆಸುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ಜಿಪಂ ಸದಸ್ಯ ಟಿ ಆರ್ ಕಾಗಲ ಹೇಳಿದರು.
ಅವರು, ವಿಶ್ವ ಪರಿಸರ ಸಂರಕ್ಷಣಾ ದಿನಾಚರಣೆ ಮತ್ತು ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಒಂದು ವರ್ಷ ತುಂಬಿರುವ ಹಿನ್ನಲೆಯಲ್ಲಿ, ಮಂಗಳವಾರದಂದು ಬಿಜೆಪಿ ನಗರ ಘಟಕ ಹಾಗೂ ಅರಣ್ಯ ಇಲಾಖೆಯ ಜಂಟಿ ಸಹಯೋಗದೊಂದಿಗೆ ನಗರದ ಸರಕಾರಿ ಆಸ್ಪತ್ರೆಯ ಆವರಣದಲ್ಲಿ ಸಸಿಗೆ ನಿರುಣಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮಣ್ಣವರ ಮಾತನಾಡಿ, ಯಡಿಯೂರಪ್ಪನವರ ಸರಕಾರ ಒಂದು ವರ್ಷ ಪೂರೈಸಿದ ಹಿನ್ನಲೆ ನಗರದ ಎಲ್ಲ ವಾರ್ಡಗಳ ಬೂತ್ ಮಟ್ಟದಲ್ಲಿ ಐದು ಸಸಿಗಳಂತೆ ಸುಮಾರು 500 ಸಸಿಗಳನ್ನು ಏಕಕಾಲದಲ್ಲಿ ನೆಡಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಶ್ಯಾಮಾನಂದ ಪೂಜೇರಿ, ಜಿಲ್ಲಾ ಕಾರ್ಯದರ್ಶಿ, ಬಸವರಾಜ ಹೀರೆಮಠ, ವಲಯ ಅರಣ್ಯಾಧಿಕಾರಿ ಕೆಂಪಣ್ಣಾ ವಣ್ಣೂರ, ಡಾ.ಅಂಟಿನ, ನಗರ ಘಟಕ ಪ್ರಧಾನ ಕಾರ್ಯದರ್ಶಿ ಜಯಾನಂದ ಹುಣಚ್ಯಾಳಿ, ಯುವ ಮೋರ್ಚಾ ಅಧ್ಯಕ್ಷರಾದ ರಾಜು ಹೀರೆಅಂಬಿಗೇರ, ಮುಖಂಡರಾದ ಲಕ್ಷ್ಮಣ ತಳ್ಳಿ, ಶಿವು ಹೀರೆಮಠ, ಮಹಾಂತೇಶ ತಾಂವಶಿ, ಬಸವರಾಜ ಹುಳ್ಳೇರ, ಮುತ್ತುರಾಜ ಜಮಖಂಡಿ, ಶ್ರೀರಂಗ ನಾಯಕ, ಸೇರಿದಂತೆ ಅನೇಕ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Related posts: