ಗೋಕಾಕ:ಕೊರೋನಾ ಮಹಾಮಾರಿ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ : ಮಾನವೀಯತೆ ಮೆರೆಯುತ್ತಿರುವ ಗೋಕಾಕಿನ ವೈದ್ಯರು
ಕೊರೋನಾ ಮಹಾಮಾರಿ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ಚಿಕಿತ್ಸೆ : ಮಾನವೀಯತೆ ಮೆರೆಯುತ್ತಿರುವ ಗೋಕಾಕಿನ ವೈದ್ಯರು
ನಮ್ಮ ಬೆಳಗಾವಿ ಇ – ವಾರ್ತೆ ವಿಶೇಷ ವರದಿ , ಗೋಕಾಕ ಅ 4 :
ವೈದ್ಯೋ ನಾರಾಯಣ ಹರಿ, ನಮಗೆ ಚಿಕಿತ್ಸೆ ಕೊಟ್ಟು ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವ ವೈದ್ಯರನ್ನು ನಾವು ದೇವರೆಂದು ಕರೆಯುವ ಪರಿಪಾಠ ಭಾರತದಲ್ಲಿದೆ.
ಆದರೆ ಕಳೆದ ಸುಮಾರು 5 ತಿಂಗಳನಿಂದ ಬೆಂಬಿಡದೆ ಕಾಡುತ್ತಿರುವ ಮಹಾಮಾರಿ ಕೊರೋನಾದಿಂದ ಉಂಟಾದ ಲಾಕಡೌನ ಮತ್ತು ಸದ್ಯದ ಪರಿಸ್ಥಿತಿಯಲ್ಲಿ ವೈದ್ಯರು ರೋಗಿಗಳನ್ನು ನೋಡಿದರೆ ಸಾಕು ಮಾರುದ್ದು ಹೋಗುತ್ತಿರುವ ಸಂದರ್ಭದಲ್ಲಿ 1ನೇ ಹಂತದ ಲಾಕಡೌನ ನಿಂದ ಹಿಡಿದು ಪ್ರಸ್ತುತ ಇಲ್ಲಿಯವರೆಗೆ ತಮ್ಮನ್ನು ಅರಿಸಿ ಬಂದ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಅವರು ಗುಣಮುಖರಾಗಲು ಕಾರಣೀಕರ್ತರಾಗಿದ್ದಾರೆ ನಗರದ ಖ್ಯಾತ ಅಂತಸ್ರಾವ ತಜ್ಞ ಡಾ.ಮಂಜುನಾಥ್ ಗೋರೋಶಿ , ವಿಕಿರಣಶಾಸ್ತ್ರಜ್ಞ ಡಾ.ಶೆಟ್ಟೆಪ್ಪಾ ಗೋರೋಶಿ ಮತ್ತು ಇಬ್ಬರು ವೈದ್ಯ ದಂಪತಿಗಳಾದ ವಿಲಾಸ ಕಲ್ಲೋಳಿ , ಹೇಮಾ ವಿಲಾಸ ಕಲ್ಲೋಳಿ ಮತ್ತು ಗುರು ಮನಗೂಳಿ, ಡಾ. ಗೀತಾ ಮನಗೂಳಿ ಅವರು ಕೊರೋನಾ ವಾರಿಯರ್ಸ್ ರಂತೆ ಯುದ್ದೊಪಾದಿಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿ ವೈದ್ಯೋ ನಾರಾಯಣ ಹರಿ ಎಂಬ ಮಾತಿನ ಗೌರವವನ್ನು ಹೆಚ್ಚಿಸಿದ್ದಾರೆ.
ಕೊರೋನಾ ಭಾರತಕ್ಕೆ ಬಂದು ಎರಗಿದಾಗ ಅದನ್ನು ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಅವರು ಇಡೀ ದೇಶವನ್ನು ಲಾಕಡೌನ ಮಾಡಲು ಕರೆ ಕೊಟ್ಟಾಗ ಎಲ್ಲಾ ಖಾಸಗಿ ವೈದ್ಯರು ತಮ್ಮ ದಾವಾಖಾನೆಗಳನ್ನು ಬಂದ್ ಮಾಡಿದರು ಆದರೆ ಗೋಕಾಕಿನ ಅಂತಸ್ರಾವ ತಜ್ಞ ಡಾ.ಮಂಜುನಾಥ್ ಗೊರೋಶಿ ಅವರು ಬೆಳಗಾವಿ , ಕೊಣ್ಣೂರ ಮತ್ತು ಗೋಕಾಕದಲ್ಲಿ ಹಗಲು ರಾತ್ರಿ ಎನ್ನದೆ ತಮ್ಮನ್ನು ಅರಿಸಿ ಬರುವ ದಿನಕ್ಕೆ 60 ರಿಂದ 100 ರೋಗಿಗಳಿಗೆ ಎಲ್ಲ ಮುಂಜಾಗೃತ ಕ್ರಮಗಳನ್ನು ತಗೆದುಕೊಂಡು ಸೂಕ್ತ ಚಿಕಿತ್ಸೆ ನೀಡುವ ಮೂಲಕ ಸೈನಿಕರಂತೆ ಕೆಲಸ ಮಾಡಿದ್ದಾರೆ. ಬೆಳಗಾವಿಯಲ್ಲಿ ಮೊದಲ ಹಂತದ ಲಾಕಡೌನ ನಲ್ಲಿ ಪ್ರತಿ ದಿನ 50 ರಿಂದ 70 ರೋಗಿಗಳನ್ನು ಈಗ ಪ್ರಸ್ತುತ ದಿನಕ್ಕೆ 100 ರಂತೆ ರೋಗಿಗಳನ್ನು ತಪಾಸಣೆ ಮಾಡಿದರೆ. ಕೊಣ್ಣೂರಿನ ಸಾಯಿ ಆಸ್ಪತ್ರೆಯಲ್ಲಿ ಪ್ರತಿ ರವಿವಾರದಂದು 70 ರಿಂದ 80 ರೋಗಿಗಳನ್ನು ಮತ್ತು ಗೋಕಾಕನ ಗೊರೋಶಿ ರಕ್ತ ತಪಾಸಣೆ ಕೇಂದ್ರದಲ್ಲಿ ಪ್ರತಿ ರವಿವಾರ 80 ರಿಂದ 100 ಮದುಮೇಹ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡುತ್ತಿದ್ದಾರೆ.
ಇನ್ನೂ ಇವರ ಸಹಾಯಕರಾಗಿ ಡಾ.ಗುರು ಮನಗೂಳಿ ಮತ್ತು ಡಾ.ಶ್ರೀಮತಿ ಮನಗೂಳಿ ಅವರು ದಿನದ 24 ಘಂಟೆಗಳ ಕಾಲ ತಮ್ಮ ಹತ್ತಿರ ಬರುವ ರೋಗಿಗಳಿಗೆ ಡಾ.ಮಂಜುನಾಥ್ ಗೋರೋಶಿ ಅವರ ನಿರ್ದೇಶನದ ಮೆರೆಗೆ ಮಾಸ್ಕ , ಪೇಸ್ ಸೀಲ್ಡ ಧರಿಸಿ ಪ್ರಥಮ ಚಿಕಿತ್ಸೆ ನೀಡುತ್ತಿದ್ದಾರೆ.
ಇದ್ದಲದೆ ನಗರದ ಇನ್ನೋರ್ವ ವೈದ್ಯ ದಂಪತಿಗಳಾದ ಡಾ.ವಿಲಾಸ ಕಲ್ಲೋಳಿ ಹಾಗೂ ಡಾ. ಹೇಮಾ ಕಲ್ಲೋಳಿ ಅವರು ಸಹ ಲಾಕಡೌನ 1 ರಿಂದ ಇಲ್ಲಿಯವರೆಗೆ ತಮ್ಮ ಮಕ್ಕಳನ್ನು ತಮ್ಮ ತಂದೆ ತಾಯಿಯ ಹತ್ತಿರ ಬಿಟ್ಟು ದಿನಪೂರ್ತಿ ತಮ್ಮ ಹತ್ತಿರ ಬರುವ ರೋಗಿಗಳಿಗೆ ಸೂಕ್ತ ಚಿಕಿತ್ಸೆ ನೀಡಿ ಕೊರೋನಾ ವೈರಸ ಹರಡದಂತೆ ಯಾವೆಲ್ಲಾ ಮುಂಜಾಗ್ರತಾ ಕ್ರಮಗಳನ್ನು ಸಾರ್ವಜನಿಕರು ತಗೆದುಕೊಳ್ಳಬೇಕು ಎಂಬೆಲ್ಲಾ ವಿಷಯಗಳನ್ನು ಜನರ ಮನಮುಟ್ಟುವ ಹಾಗೆ ತಿಳಿ ಹೇಳುತ್ತಿದ್ದಾರೆ
ಮಾಸ್ಕ ಧರಿಸಿದರೆ ಒಳಗೆ ಪ್ರವೇಶ : ರೋಗಿಗಳಿಗೆ ಮುಂಜಾಗ್ರತಾ ಕ್ರಮವಾಗಿ ಕಡ್ಡಾಯವಾಗಿ ಮಾಸ್ಕ ಧರಿಸಬೇಕು. ಮಾಸ್ಕ ದರಿಸಿದರೆ ಮಾತ್ರ ಒಳಗೆ ಪ್ರವೇಶ ಎಂಬ ತೆಲೆ ಬರಹವನ್ನು ಗೋಡೆಗಳ ಮೇಲೆ ಅಂಟಿಸಲಾಗಿದೆ. ಮಾಸ್ಕ ಧರಿಸದೆ ಬಂದವರಿಗೆ ಮಾಸ್ಕ ನೀಡಿ ಚಿಕಿತ್ಸೆ ನೀಡುವ ಈ ವೈದ್ಯರ ಕಾರ್ಯ ಸಾರ್ವಜನಿಕರ ವಲಯದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ.
ಒಟ್ಟಾರೆ ಲಾಕಡೌನ ಮತ್ತು ಕೊರೋನಾ ಮಹಾಮಾರಿಗೆ ಹೆದರಿ ಸಾಕಷ್ಟು ವೈದ್ಯರು ತಮ್ಮ ಸೇವೆಯನ್ನು ಮರೆತಿರುವ ಸಂದರ್ಭದಲ್ಲಿ ಕೊರೋನಾ ವಾರಿಯರ್ಸ್ ರಂತೆ ತಮ್ಮ ವೈದ್ಯ ವೃತ್ತಿಯನ್ನು ನಿರಂತವಾಗಿ ಶುರು ಇಟ್ಪುಕೊಂಡು ಇತರರಿಗೆ ಮಾದರಿಯಾಗಿರುವ ಈ ವೈದ್ಯರ ಕಾರ್ಯಕ್ಕೆ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗಿದೆ.