RNI NO. KARKAN/2006/27779|Tuesday, November 5, 2024
You are here: Home » breaking news » ಗೋಕಾಕ:ಬಿಜೆಪಿ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ

ಗೋಕಾಕ:ಬಿಜೆಪಿ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ 

ಬಿಜೆಪಿ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣ

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಅ 5 :

 

ಲಕ್ಷಾಂತರ ಜನ ರಾಮ ಭಕ್ತರು, ಮಹಾನ್ ಪುರುಷರು ಸುಮಾರು 400 ವರ್ಷಗಳಿಂದ ರಾಮ ಮಂದಿರ ನಿರ್ಮಾಣಕ್ಕೆ ಹೋರಾಟದ ಹಾಗೂ ಹಲವರ ಪ್ರಾಣ ತ್ಯಾಗದ ಪ್ರತೀಕವಾಗಿ ಇಂದು ಅಯ್ಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಭೂಮಿ ಪೂಜೆ ನಡೆದಿದೆ ಎಂದು ಗೋಕಾಕ ತಾಲೂಕಿನ ಬೆಟಗೇರಿ ಶ್ರೀರಾಮ ಅಭಿಮಾನಿ ಬಳಗದ ಸಂಚಾಲಕ ವೀರನಾಯ್ಕ ನಾಯ್ಕರ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಕ್ಷತ್ರೀಯ ಸಮಾಜ ಬಾಂದವರ ಹಾಗೂ ಗ್ರಾಮಸ್ಥರ ಸಹಯೋಗದಲ್ಲಿ ಸ್ಥಳೀಯ ಶ್ರೀರಾಮ ವೃತ್ತದಲ್ಲಿ ಬುಧವಾರದಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಶಿಲಾನ್ಯಾಸ ಕಾರ್ಯಕ್ರಮದ ಪ್ರಯುಕ್ತ ನಡೆದ ಸಂಭ್ರಮಾಚರಣೆ ಕಾರ್ಯಕ್ರಮದ ಸಾರಥ್ಯ ವಹಿಸಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದ ಬಿಜೆಪಿ ಕೇಂದ್ರ ಸರ್ಕಾರದ ಆಡಳಿತಾವಧಿಯಲ್ಲಿ ರಾಮ ಮಂದಿರ ನಿರ್ಮಾಣವಾಗಲಿದೆ ಎಂದರು.
ಈರಯ್ಯ ಹಿರೇಮಠ, ಸಂಗಯ್ಯ ಹಿರೇಮಠ ಸಾನಿಧ್ಯ ವಹಿಸಿ ಶ್ರೀರಾಮನ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಪನೆ ಸಮರ್ಪಿಸಿ, ದೀಪ ಪ್ರಜ್ವಲಿಸಿದ ಬಳಿಕ ಸಿಹಿ ವಿತರಿಸಿದರು. ಗ್ರಾಪಂ ಮಾಜಿ ಅಧ್ಯಕ್ಷ ಈಶ್ವರ ಬಳಿಗಾರ, ಪತ್ರೇಪ್ಪ ನೀಲಣ್ಣವರ, ಅಶೋಕ ರಾಮಗೇರಿ, ಮಲ್ಲಪ್ಪ ಪೇದನ್ನವರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು.
ಶ್ರೀಧರ ದೇಯಣ್ಣವರ, ಲಕ್ಷ್ಮಣ ಚಿನ್ನನ್ನವರ, ಸಂಜು ಪೂಜೇರಿ, ಅಜ್ಜಪ್ಪ ಪೇದನ್ನವರ, ಮಾರುತಿ ಪೇದನ್ನವರ, ಕೆಂಪಣ್ಣ ಪೇದನ್ನವರ, ಶಿವಾಜಿ ನೀಲಣ್ಣವರ, ತಮ್ಮಣ್ಣ ಮೆಟ್ಟಿನ್ನವರ, ಸುಭಾಷ ಕರೆಣ್ಣವರ, ವಿಠಲ ಕೋಣಿ, ಭೀಮನಾಯ್ಕ ನಾಯ್ಕರ, ಶ್ರೀಶೈಲ ಗಾಣಗಿ, ಹನುಮಂತ ವಗ್ಗರ, ಭರಮಣ್ಣ ಪೂಜೇರ, ಮಲ್ಲಪ್ಪ ಪಣದಿ, ಇಡಪ್ಪ ರಾಮಗೇರಿ, ಮಾಯಪ್ಪ ಬಾಣಸಿ, ಮಲ್ಲಪ್ಪ ಕಳಸಪ್ಪಗೋಳ, ಕ್ಷತ್ರೀಯ ಸಮಾಜ ಬಾಂದವರು, ಶ್ರೀರಾಮ ಅಭಿಮಾನಿ ಬಳಗದ ಸದಸ್ಯರು, ಗ್ರಾಮಸ್ಥರು ಇದ್ದರು.

Related posts: