ಮೂಡಲಗಿ:ಯಾದವಾಡ ಗ್ರಾಮದಲ್ಲಿ ಸರ್ವ ಧರ್ಮದವರಿಂದ ಗ್ರಾಮದ ಶ್ರೀ ಪೇಟೆ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜೆ
ಯಾದವಾಡ ಗ್ರಾಮದಲ್ಲಿ ಸರ್ವ ಧರ್ಮದವರಿಂದ ಗ್ರಾಮದ ಶ್ರೀ ಪೇಟೆ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜೆ
ನಮ್ಮ ಬೆಳಗಾವಿ ಇ -ವಾರ್ತೆ , ಮೂಡಲಗಿ ಅ 5 :
ಅಯೋಧ್ಯದಲ್ಲಿ ಬುಧವಾರ ಜರುಗಿದ ಶ್ರೀ ರಾಮ ಮಂದಿರ ಅಡಿಗಲ್ಲು ಸಮಾರಂಭದ ಅಂಗವಾಗಿ ತಾಲೂಕಿನ ಯಾದವಾದಡಲ್ಲಿ ನಮ್ಮ ಕರವೇ ಯಾದವಾಡ ಘಟಕದ ಮತ್ತು ಸರ್ವ ಧರ್ಮದವರಿಂದ ಗ್ರಾಮದ ಶ್ರೀ ಪೇಟೆ ಮಾರುತೇಶ್ವರ ದೇವಸ್ಥಾನದಲ್ಲಿ ಪೂಜಾ ಕಾರ್ಯಕ್ರಮ ಜರುಗಿತು.
ಶ್ರೀ ಶಿವಯೋಗಿ ಶ್ರೀಗಳು ಮಾತನಾಡಿ, ಗ್ರಾಮದಲ್ಲಿ ಸೇರಿದ ಎಲ್ಲ ಧರ್ಮದವರು ಇದೇ ರೀತಿಯಾಗಿ ಒಗ್ಗಟ್ಟಿನಿಂದ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಬೆಳೆಸಿಕೊಂಡು ಮುಂದುವರೆಯಲಿ ಎಂದು ಆಶಿಸಿದರು.
ಕಲ್ಮೇಶ ಗಾಣಿಗೇರ ಮಾತನಾಡಿ, ಭಾರತ ದೇಶದಲ್ಲಿ ಧರ್ಮದ ಭೇದ ಮರೆತು ಎಲ್ಲರೂ ಒಗ್ಗಟ್ಟಿನಿಂದ, ಸಹ ಬಾಳ್ವೆಯಿಂದ ಬಾಳಿ ಬದುಕ ಬೇಕೆಂದರು.
ಈ ಸಂದರ್ಭದಲ್ಲಿ ಮುಸ್ಲಿಂ ಜಮಾತ್ ಅಧ್ಯಕ್ಷರ ರಾಜೆಸಾಬ್ ಕಮಲಾಪುರ್, ಜಿ.ಎನ್.ಎಸ್ ಶಾಲೆ ಅಧ್ಯಕ್ಷ ಶಿವಪ್ಪ ನ್ಯಾಮಗೌಡ, ಮೂಡಗೌಡ ಪಾಟೀಲ, ಆತ್ಮಾರಾಮ ಇತಾಪಿ, ಮೈಬೂಬಸಾಬ ಮೊಮಿನ, ಪರಗೌಡ ಪಾಟೀಲ, ನಿಂಗನಗೌಡ ಪಾಟೀಲ, ರಾಜೇಶಗೌಡ ಸಿ ಪಾಟೀಲ್, ನಮ್ಮ ಕರವೇ ಕಾರ್ಯಕರ್ತರು, ನ್ಯಾಮಗೌಡ, ಲಕ್ಷ್ಮಿ ಪಾಟೀಲ್, ಮಲ್ಲಿಕಾರ್ಜುನ ಗೋಡಚಿ, ಈರಣ್ಣ ಅರಿಕೇರಿ, ಮೌನೇಶ್ ಪತ್ತಾರ್, ಕನ್ನಡ ಪರ ಸಂಘಟನೆ ಕಾರ್ಯ ಕರ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಸರ್ವಧರ್ಮದವರು ರಾಮಮಂದಿರ ನಿರ್ಮಾಣಕ್ಕೆ ಪ್ರೋತ್ಸಾಹ ನೀಡಲೆಂದು ಪೂಜೆ ಸಲ್ಲಿಸಿ ಭಗವಂತನಲ್ಲಿ ಪ್ರಾರ್ಥನೆ ಸಲ್ಲಿಸಿದರು.