RNI NO. KARKAN/2006/27779|Monday, February 17, 2025
You are here: Home » breaking news » ಗೋಕಾಕ:ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಆರ್.ಎ.ವಿಟ್ಟಪ್ಪನವರ ಅವರಿಗೆ ಸತ್ಕಾರ

ಗೋಕಾಕ:ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಆರ್.ಎ.ವಿಟ್ಟಪ್ಪನವರ ಅವರಿಗೆ ಸತ್ಕಾರ 

ಸೇವಾ ನಿವೃತ್ತಿ ಹೊಂದಿದ ಶಿಕ್ಷಕಿ ಆರ್.ಎ.ವಿಟ್ಟಪ್ಪನವರ ಅವರಿಗೆ ಸತ್ಕಾರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 8 :

 
ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ಸೇವೆಯನ್ನು ಸಲ್ಲಿಸುತ್ತಿದ್ದ ಶ್ರೀಮತಿ ಆರ್.ಎ.ವಿಟ್ಟಪ್ಪನವರ ಅವರು ಇತ್ತಿಚೆಗೆ ಸೇವಾ ನಿವೃತ್ತಿಯನ್ನು ಹೊಂದಿದ್ದ ನಿಮಿತ್ಯ ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷರು, ಸದಸ್ಯರು ಹಾಗೂ ಶಿಕ್ಷಕರು ಹಮ್ಮಿಕೊಂಡ ಸಮಾರಂಭದಲ್ಲಿ ಶ್ರೀಮತಿ ಆರ್.ಎ.ವಿಟ್ಟಪ್ಪನವರ ಅವರನ್ನು ಸತ್ಕರಿಸಿ ಬೀಳ್ಕೋಡಲಾಯಿತು.
ಈ ಸಂದರ್ಭದಲ್ಲಿ ಸಿ ಆರ್ ಪಿ ಪ್ರಕಾಶ ಮುರ್ಕಿಭಾವಿ, ಶಿಕ್ಷಕರಾದ ಶ್ರೀಮತಿ ಎಮ್.ಬಿ.ಪಾಟೀಲ, ಯಾಸಿನ್ ಸನದಿ, ಎಸ್.ಬಿ.ಕರೆಪ್ಪನವರ, ಶಾಲೆಯ ಎಸ್‍ಡಿಎಮ್‍ಸಿ ಅಧ್ಯಕ್ಷ ಬಿ.ಎಸ್.ಕೊಣ್ಣೂರ, ಎಸ್‍ಡಿಎಮ್‍ಸಿ ಸದಸ್ಯರು ಸೇರಿದಂತೆ ಗ್ರಾಮಸ್ಥರು ಇದ್ದರು.

Related posts: