RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಸತೀಶ ಶುಗರ್ಸ್ ಅವಾಡ್ರ್ಸ್ ಕಾರ್ಯಕ್ರಮವು ಕ್ರೀಡಾಪಟುಗಳಿಗೆ ಉತ್ತೇಜನವಾಗಿದೆ : ಜಿ.ಬಿ.ಬಳಗಾರ

ಗೋಕಾಕ:ಸತೀಶ ಶುಗರ್ಸ್ ಅವಾಡ್ರ್ಸ್ ಕಾರ್ಯಕ್ರಮವು ಕ್ರೀಡಾಪಟುಗಳಿಗೆ ಉತ್ತೇಜನವಾಗಿದೆ : ಜಿ.ಬಿ.ಬಳಗಾರ 

ಸತೀಶ ಶುಗರ್ಸ್ ಅವಾಡ್ರ್ಸ್ ಕಾರ್ಯಕ್ರಮವು ಕ್ರೀಡಾಪಟುಗಳಿಗೆ ಉತ್ತೇಜನವಾಗಿದೆ : ಜಿ.ಬಿ.ಬಳಗಾರ

ಗೋಕಾಕ ಅ 31: ಕ್ರೀಡಾಪಟುಗಳು ಕ್ರೀಡೆಯಲ್ಲಿ ಕ್ರೀಡಾಮನೋಭಾವನೆಯನ್ನು ಅಳವಡಿಸಿಕೊಂಡು, ಸಧೃಡವಾದ ಹಾಗೂ ಆರೋಗ್ಯವಂತ ಶರೀರವನ್ನು ಹೊಂದಿ, ತಮ್ಮ ವ್ಯಕ್ತಿತ್ವ ವಿಕಸನಗೊಳಿಸಿಕೊಳ್ಳಬೇಕೆಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು.
ಗುರುವಾರದಂದು ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜಿ.ಪಂ ಬೆಳಗಾವಿ, ಸಾರ್ವಜನಿಕ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಸೌಭಾಗ್ಯ ಲಕ್ಷ್ಮೀ ಶುಗರ್ಸ್ ಹಿರೇನಂದಿ, ನಾಯಕ ಸ್ಟುಡೆಂಟ್ ಫೆಡರೇಷನ್ ಗೋಕಾಕ ಇವರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ತಾಲೂಕಾ ಮಟ್ಟದ ಕ್ರೀಡಾಕೂಟ ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದರು.
ಗೋಕಾಕ ತಾಲೂಕು ಶೈಕ್ಷಣಿಕವಾಗಿ ಮಾತ್ರ ಮುಂದುವರಿಯದೇ ಕ್ರೀಡೆಯಲ್ಲೂ ಕೂಡಾ ಸದಾ ಮುಂದೆ ಇದ್ದು, ರಾಜ್ಯ ಹಾಗೂ ರಾಷ್ಟ್ರಮಟ್ಟದಲ್ಲಿ ಗೋಕಾವಿ ನಾಡಿನ ಹೆಸರನ್ನು ಚಿರಪರಿಚಿತವನ್ನಾಗಿ ಮಾಡುವಲ್ಲಿ ಇಲ್ಲಿಯ ಕ್ರೀಡಾಪಟುಗಳು ಯಶಸ್ವಿಯಾಗಿದ್ದಾರೆ. ಪ್ರತಿ ವರ್ಷ ಹಮ್ಮಿಕೊಳ್ಳುವ ಸತೀಶ ಶುಗರ್ಸ್ ಅವಾಡ್ರ್ಸ್ ಕಾರ್ಯಕ್ರಮವು ಕ್ರೀಡಾಪಟುಗಳಿಗೆ ಉತ್ತೇಜನ ನೀಡುವ ಕಾರ್ಯವಾಗಿದೆ ಎಂದು ತಿಳಿಸಿದರು.

ನಗರಾಧ್ಯಕ್ಷ ತಳದಪ್ಪ ಅಮ್ಮಣಗಿ ಅವರು ಹಾಕಿ ಮಾಂತ್ರಿಕ ಧ್ಯಾನಚಂದ್ರ ಅವರ ಭಾವಚಿತ್ರಕ್ಕೆ ಪೂಜೆ ಹಾಗೂ ಕ್ರೀಡಾಧ್ಜಜಾರೋಹಣವನ್ನು ನೇರೆವೇರಿಸಿದರು. ಜಿಪಂ ಸದಸ್ಯರಾದ ಟಿ.ಆರ್.ಕಾಗಲ ಹಾಗೂ ಮಡ್ಡೆಪ್ಪ ತೋಳಿನವರ ಅವರು ಕ್ರೀಡಾಜ್ಯೋತಿಯನ್ನು ಸ್ವಾಗತಿಸುವ ಮೂಲಕ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು.
ಇದೇ ಸಂದರ್ಭದಲ್ಲಿ ರಾಷ್ಟ್ರಮಟ್ಟದ ರಾಷ್ಟ್ರೀಯ ಶಿಕ್ಷಣ ರತ್ನ ಪ್ರಶಸ್ತಿ ಪಡೆದ ಬಿ.ಸಿ.ಸುತಗಟ್ಟಿ ಅವರನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ನಗರ ಸಭೆ ಉಪಾಧ್ಯಕ್ಷೆ ವಿಜಯಲಕ್ಷ್ಮೀ ಜತ್ತಿ, ತಾಪಂ ಉಪಾಧ್ಯಕ್ಷ ಯಲ್ಲಪ್ಪ ನಾಯಿಕ, ನಗರ ಸಭೆ ಸದಸ್ಯ ಎಸ್.ಎ.ಕೋತವಾಲ, ಪರಶುರಾಮ ಭಗತ, ಭೀಮಶಿ ಭರಮಣ್ಣವರ, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಎಫ್.ಜಿ.ಚಿನ್ನನವರ, ಹಮ್ಮಿಣಿ ಸಾಹುಕಾರ, ವಿವಿಧ ಇಲಾಖೆಯ ಅಧಿಕಾರಿಗಳಾದ ಡಾ|| ಮೋಹನ ಕಮತ, ಎಸ್. ಪಿ. ವರಾಳೆ, ಎಮ್.ಡಿ.ಬೇಗ್. ಪಿ.ಎಚ್.ಕೌಜಲಗಿ, ಜಿ.ಆರ್.ಮಾಳಗಿ, ಎಸ್. ಎ .ರಾಮಗಾನಟ್ಟಿ ಸೇರಿದಂತೆ ಅನೇಕರು ಇದ್ದರು. ವಿ.ಎಮ್.ಸೂಲೆಗಾವಿ ಸ್ವಾಗತಿಸಿದರು, ಎ.ಜಿ.ಕೋಳಿ ನಿರೂಪಿಸಿ, ವಂದಿಸಿದರು.

Related posts: