RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ವಿಕಲಚೇತನರಿಗೆ ಸಚಿವರಿಂದ ತ್ರಿಚಕ್ರ ವಾಹನ ವಿತರಣೆ

ಗೋಕಾಕ:ವಿಕಲಚೇತನರಿಗೆ ಸಚಿವರಿಂದ ತ್ರಿಚಕ್ರ ವಾಹನ ವಿತರಣೆ 

ವಿಕಲಚೇತನರಿಗೆ ಸಚಿವರಿಂದ ತ್ರಿಚಕ್ರ ವಾಹನ ವಿತರಣೆ

 

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 27 :

 
ತಾಲೂಕಿನ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತ ವತಿಯಿಂದ ಐವರು ವಿಶೇಷ ಚೇತನರಿಗೆ ತ್ರೀಚಕ್ರ ವಾಹನವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ವಿತರಿಸಿದರು.
ಗುರುವಾರದಂದು ಸಚಿವರ ಗೃಹ ಕಚೇರಿ ಆವರಣದಲ್ಲಿ ಮಲ್ಲಾಪೂರ ಪಿಜಿ ಪಟ್ಟಣ ಪಂಚಾಯತನಿಂದ ಸನ್ 2019-20ರ ಎಸ್ ಎಫ್ ಸಿ ಸ್ಥಳೀಯ ನಿಧಿ ಅಡಿಯಲ್ಲಿ ಫಲಾನುಭವಿಗಳಿಗೆ 4.5 ಲಕ್ಷ ರೂಗಲಕ ವೆಚ್ಚದಲ್ಲಿ ಐದು ತ್ರೀಚಕ್ರ ವಾಹನ ವಿತರಿಸಿದರು.
ಈ ಸಂದರ್ಭದಲ್ಲಿ ಮುಖಂಡರಾದ ಡಿ ಎಮ್ ದಳವಯಿ, ಶಿವಪುತ್ರ ಕೊಂಗನೂರ, ಮಲ್ಲು ತುಕ್ಕಾನಟ್ಟಿ, ಸುರೇಶ ಪೂಜೇರಿ, ಶೇಖರ ಕುಲಗೋಡ, ಪಟ್ಟಣ ಪಂಚಾಯತ ಸದಸ್ಯರಾದ ಗಂಗಾಧರ ಬಡಕುಂದರಿ, ಮಲ್ಲು ಕೋಳಿ, ಸಲೀಂ ಕಬ್ಬೂರ, ಇಮ್ರಾನ್ ಬಟಕುರ್ಕಿ, ಈರಣ್ಣ ಕಲಗುಟಗಿ, ಮುಖ್ಯಾಧಿಕಾರಿ ಕೆ ಬಿ ಪಾಟೀಲ ಹಾಗೂ ಸಿಬ್ಬಂದಿಗಳು ಇದ್ದರು.

Related posts: