RNI NO. KARKAN/2006/27779|Saturday, October 19, 2024
You are here: Home » breaking news » ಬೆಳಗಾವಿ:ಸಂಗೋಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಸಚಿವ ರಮೇಶ ಮತ್ತು ಈಶ್ವರಪ್ಪ ಮಾಲಾರ್ಪಣೆ

ಬೆಳಗಾವಿ:ಸಂಗೋಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಸಚಿವ ರಮೇಶ ಮತ್ತು ಈಶ್ವರಪ್ಪ ಮಾಲಾರ್ಪಣೆ 

ಸಂಗೋಳ್ಳಿ ರಾಯಣ್ಣ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗಳಿಗೆ ಸಚಿವ ರಮೇಶ ಮತ್ತು ಈಶ್ವರಪ್ಪ ಮಾಲಾರ್ಪಣೆ

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಅ 29 :

 

ಸಾಕಷ್ಟು ವಿವಾದ ಸೃಷ್ಟಿಸಿ ಸುಖಾಂತ್ಯ ಕಂಡಿದ್ದ ಸಂಗೋಳ್ಳಿ ರಾಯಣ್ಣ ಪ್ರತಿಮೆ ಮತ್ತು ಶಿವಾಜಿ ಮಹಾರಾಜರ ಪ್ರತಿಮೆಗೆ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಮತ್ತು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಅವರು ಭೇಟಿ ನೀಡಿ ಮಾಲಾರ್ಪಣೆ ಮಾಡಿದರು

ಶನವಾರದಂದು ನಗರಕ್ಕೆ ಆಗಮಿಸಿರುವ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ನಿನ್ನೆ ಕನ್ನಡ ಪರ ಸಂಘಟನೆಗಳು ಮತ್ತು ರಾಯಣ್ಣನ ಅಭಿಮಾನಿಗಳು ಪ್ರತಿಷ್ಠಾಪಿಸಿರುವ ಸಂಗೋಳ್ಳಿ ರಾಯಣ್ಣನ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಇಬ್ಬರು ಮಹಾನ ಪುರುಷರ ಪ್ರತಿಮೆಗಳಿಗೆ ಗೌರವ ಸಲ್ಲಿಸಿದರು

ನಂತರ ಪ್ರತಕರ್ತರ ಪ್ರಶ್ನೆಗೆ ಉತ್ತರಿಸಿದ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರು ಪೀರನವಾಡಿ ಸಂಗೊಳ್ಳಿ ರಾಯಣ್ಣ ಪ್ರತಿಮೆ ಸ್ಥಾಪನೆ ಪ್ರಕರಣ ಸೌಹಾರ್ದತೆಯಿಂದ ಇತ್ಯರ್ಥವಾಗಿದೆ.
ಇಬ್ಬರು ಮಹಾನ್ ನಾಯಕರಿಗೆ ಅಗೌರವ ಆಗದಂತೆ ಕ್ರಮ ತೆಗೆದುಕೊಳ್ಳಲಾಗಿದೆ ಎಂದ ಅವರು ನಿನ್ನೆಯ ಮೂರ್ತಿ ಪ್ರತಿಷ್ಠಾಪನೆ ‌ಹಾಗೂ ಲಾಠಿ ಚಾರ್ಜ್ ಕುರಿತು ದಾಖಲಾಗಿರುವ ಪ್ರಕರಣಗಳನ್ನ ವಾಪಸ್ ಪಡೆಯುವ ಕುರಿತು ಸಿಎಂ ಜತೆಗೆ ಚರ್ಚಿಸಿ ತೀರ್ಮಾಣ ಮಾಡಲಾಗುವುದು‌ ಎಂದರು. ಕನ್ನಡ ಪರ ಹೋರಾಟಗಾರರ ಮೇಲೆ ಕೇಸ್ ವಿಚಾರ ಹಿಂಪಡೆಯಬೇಕೆಂಬ ಒತ್ತಡಗಳ ಕುರಿತು ಪ್ರತಿಕ್ರಿಯೆ ನೀಡದ ಸಚಿವರು ಏನಾದರು ಅನಾಹುತವಾಗಿದ್ರೆ ನೀವೆ ಪ್ರಶ್ನೆ ಮಾಡುತ್ತಿದ್ದಿರಿ.‌ ಹೀಗಾಗಿ ಕೇಸ್ ದಾಖಲಿಸಲಾಗಿದೆ. ಇನ್ನೂ ಸಂಗೊಳ್ಳಿ ರಾಯಣ್ಣ ಮೂರ್ತಿ ಅಧಿಕೃತ ಮಾಡುವ ಕುರಿತು ಕಾನೂನಾತ್ಮಕ ಕ್ರಮ ಕೈಗೊಳ್ಳಲಾಗುವುದು ಎಂದರು

Related posts: