ಗೋಕಾಕ:ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮನವಿ
ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮನವಿ
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಅ 31 :
ಹಿಂದು ಜಾಗರಣ ವೇದಿಕೆ ಕಾರ್ಯಕರ್ತರ ಮೇಲೆ ಹಲ್ಲೆ ಖಂಡಿಸಿ ಮತ್ತು ತಹಶೀಲ್ದಾರರ ದೌರ್ಜನ್ಯ ಖಂಡಿಸಿ ಸೋಮವಾರದಂದು ಗೋಕಾಕ ಘಟಕದ ಹಿಂದು ಜಾಗರಣ ವೇದಿಕೆ ಕಾರ್ಯಕರ್ತರು ತಹಶೀಲ್ದಾರ ಮುಖಾಂತರ ಸಿಎಂ ಅವರಿಗೆ ಮನವಿ ಸಲ್ಲಿಸಿದರು.
ರಾಯಚೂರು ಜಿಲ್ಲೆಯ ದೇವದುರ್ಗಾ ನಗರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಮಂಗಳಾರತಿ ಸಮಯದಲ್ಲಿ ಧ್ವನಿವರ್ಧಕವನ್ನು ಹಚ್ಚಿದ್ದನ್ನು ದೇವದುರ್ಗದ ದಂಡಾಧಿಕಾರಿ ಅವರ ವಾಹನ ಚಾಲಕ ತಡೆ ಹಿಡಿದು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರ ಮೇಲೆ ಹಲ್ಲೆ ಮಾಡಿ ದಂಡಾಧಿಕಾರಿ ಅವರು ಪೊಲೀಸರಿಗೆ ದೂರು ನೀಡಿ ಕಾರ್ಯಕರ್ತರ ಮೇಲೆ ಕೇಸ್ ದಾಖಲು ಮಾಡಿದ್ದಾರೆ. ಅಲ್ಲದೇ ಹಿಂದು ಜಾಗರಣ ವೇದಿಕೆಯ ಬಗ್ಗೆ ಅಲ್ಲ ಸಲ್ಲದ ಮಾತುಗಳನ್ನಾಡಿ ನಿಂದಿಸಿದ್ದಾರೆ. ದೇವದುರ್ಗದ ತಹಶೀಲ್ದಾರ ಸಂತೋಷ ರಾಣಿ ಅವರನ್ನು ಅಮಾನತ್ತುಗೊಳಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದ್ದಾರೆ. ಅಮಾನತ್ತುಗೊಳಿಸದಿದ್ದರೆ ಮುಂಬರುವ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಿದ್ದಾರೆ. ಈ ಸಂದರ್ಭದಲ್ಲಿ ವೇದಿಕೆ ಜಿಲ್ಲಾ ಸಂಯೋಜಕ ಸಮರ್ಥ ಖಾಸನಿಸ್, ಕಾರ್ಯಕರ್ತರಾದ ಸುನೀಲ ಬೆನವಾಡೆ, ಪ್ರವೀಣ ಗೋಸಬಾಳ, ಅಂಕುಶ ರೇಣಕೆ, ಶಂಕರ ವಾಕುಡೆ, ಪರಸು ಗೊಂಧಳಿ, ರಾಹುಲ ಗೊಂಧಳಿ, ಆನಂದ ನಾವಿ, ನಿಖೀಲ ಗೊಂಧಳಿ ಸೇರಿದಂತೆ ಇತರರು ಇದ್ದರು.