RNI NO. KARKAN/2006/27779|Monday, December 23, 2024
You are here: Home » breaking news » ಮೂಡಲಗಿ:ಸಮರ್ಥ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಶಿವಪ್ಪ ಮರ್ದಿ

ಮೂಡಲಗಿ:ಸಮರ್ಥ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಶಿವಪ್ಪ ಮರ್ದಿ 

ಸಮರ್ಥ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ : ಶಿವಪ್ಪ ಮರ್ದಿ

 
ನಮ್ಮ ಬೆಳಗಾವಿ ಇ – ವಾರ್ತೆ ,ಮೂಡಲಗಿ ಸೆ 5 :

 
ಸಮರ್ಥ ಹಾಗೂ ಕ್ರಿಯಾಶೀಲ ಶಿಕ್ಷಕರಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಹಾಗೂ ಮಕ್ಕಳ ಭವಿಷ್ಯ ಕಟ್ಟುವಲ್ಲಿ ಶಿಕ್ಷಕರ ಪಾತ್ರ ತುಂಬಾ ಮಹತ್ವದ್ದಾಗಿದೆ ಎಂದು ತುಕ್ಕಾನಟ್ಟಿ ಗ್ರಾಮ ಪಂಚಾಯತಿ ಮಾಜಿ ಉಪಾಧ್ಯಕ್ಷರಾದ ಶಿವಪ್ಪ ಮರ್ದಿ ಹೇಳಿದರು.
ಅವರು ತಾಲೂಕಿನ ತುಕ್ಕಾನಟ್ಟಿ ಸರ್ಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಜರುಗಿದ ಡಾಕ್ಟರ್ ಸರ್ವಪಲ್ಲಿ ರಾಧಾಕೃಷ್ಣನ್ ರವರ 133 ನೇ ದಿನಾಚರಣೆಯಲ್ಲಿ ಶಾಲೆಯ ಶಿಕ್ಷಕರನ್ನು ಸನ್ಮಾನಿಸಿ ಮಾತನಾಡಿ, ಒಳ್ಳೆಯ ಸಮಾಜ ಉತ್ತಮ ಪ್ರಜೆ ನಿರ್ಮಾಣ ಮಾಡುವ ಶಿಕ್ಷಕರ ಕಾರ್ಯ ತುಂಬಾ ಪ್ರಶಂಸನೀಯ. ಅದರಲ್ಲೂ ನಮ್ಮೂರ ಸರಕಾರಿ ಶಾಲೆಯ ಶಿಕ್ಷಕರ ಅವಿರತ ಶ್ರಮದಿಂದ ಕಳೆದ ನಾಲ್ಕೈದು ವರ್ಷಗಳಲ್ಲಿ ಶಾಲೆಯು ಉತ್ತಮ ಪ್ರಗತಿ ಸಾಧಿಸಿದ್ದು ಮಕ್ಕಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದ್ದು ಇಲ್ಲಿ ಸರಕಾರಿ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲಾಗುತ್ತಿದೆ. ಕಾರಣ ನಮ್ಮ ಸರಕಾರಿ ಶಾಲೆಯ ಬಗ್ಗೆ ಪ್ರತಿಯೊಬ್ಬ ಗ್ರಾಮಸ್ಥರು ಅಭಿಮಾನ ಪಡುತ್ತೇವೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಸ್ಥರು ಹಾಗೂ ಜನಪ್ರತಿನಿಧಿಗಳು ಕೂಡಿಕೊಂಡು ಶಾಲೆಯ ಎಲ್ಲ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ಶಿವಪ್ಪ ಮರ್ದಿ ಗ್ರಾಮ ಪಂಚಾಯತ್ ಮಾಜಿ ಸದಸ್ಯರಾದ ಭರಮಪ್ಪ ಉಪ್ಪಾರ್ ,ಅಜ್ಜಪ್ಪ ಮನ್ನಿಕೇರಿ, ಕಲ್ಲಪ್ಪ ಉಪ್ಪಾರ್ ಜಿಲ್ಲಾ ರೈತಸಂಘದ ಕಾರ್ಯದರ್ಶಿಗಳಾದ ಭೀಮಸಿ ಗದಾಡಿ ತುಕ್ಕಾನಟ್ಟಿ ಪಿಕೆಪಿಎಸ್ ಮುಖ್ಯಕಾರ್ಯ ನಿರ್ವಾಹಕ ಯಮನಪ್ಪ ಗದಾಡಿ, ಸೋಮು ಹುಲಕುಂದ ಭಾಗವಹಿಸಿದ್ದರು.
ಪ್ರಧಾನ ಗುರು ಎ.ವಿ. ಗಿರೆಣ್ಣವರ, ಶಿಕ್ಷಕರಾದ ಲಕ್ಷ್ಮಿ ಹೆಬ್ಬಾಳ, ಪುಷ್ಪ ಬರಮದೆ, ಕುಸುಮ ಚಿಗರಿ, ವಿಮಲಾಕ್ಷಿ ತೋರಗಲ್, ಶಂಕರ್ ಲಮಾಣಿ ,ಶೀಲಾ ಕುಲಕರ್ಣಿ, ಕಿರಣ್ ಭಜಂತ್ರಿ, ಸಂಗೀತ ತಳವಾರ್, ಮಂಜುನಾಥ್ ಕಮ್ಮಾರ್ ,ಮಹಾದೇವ ಗೋ ಮಾಡಿ ಉಪಸ್ಥಿತರಿದ್ದರು.

Related posts: