ಗೋಕಾಕ:ಜಿ.ಸಿ.ಐ ಸಂಸ್ಥೆಯ ಶೈಕ್ಷಣಿಕ ಸಹಕಾರ ಮಾದರಿಯಾಗಿದೆ : ಬಿಇಒ ಜಿ.ಬಿ.ಬಳಗಾರ
ಜಿ.ಸಿ.ಐ ಸಂಸ್ಥೆಯ ಶೈಕ್ಷಣಿಕ ಸಹಕಾರ ಮಾದರಿಯಾಗಿದೆ : ಬಿಇಒ ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 8 :
ಸಮಾಜಿಕ ಕಳಕಳಿಯಿಂದ ಇಲ್ಲಿನ ಜಿ.ಸಿ.ಐ ಸಂಸ್ಥೆ ಶೈಕ್ಷಣಿಕ ಪ್ರಗತಿಗೆ ಶಿಕ್ಷಣ ಇಲಾಖೆಯೊಂದಿಗೆ ಸಹಕಾರ ನೀಡಿ ಶ್ರಮ ವಹಿಸುತ್ತಿರುವುದು ಮಾದರಿಯಾಗಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು
ಮಂಗಳವಾರದಂದು ನಗರದ ಬಿಇಒ ಕಛೇರಿಯಲ್ಲಿ ಜೆಸಿಐ ಸಂಸ್ಥೆ ವತಿಯಿಂದ ಮೂಡಲಗಿ ತಾಲೂಕಿನ ನಾಗನೂರ ಗ್ರಾಮದ ಧರೆಪ್ಪಾ ಸೂಳೆನ್ನವರ ಎಂಬ ಪಿಯುಸಿ ಪಾಸಾದ ವಿಧ್ಯಾರ್ಥಿಯನ್ನು ಶೈಕ್ಷಣಿಕ ದತ್ತು ಪಡೆದ ನಿಮಿತ್ತ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು
ವಿದ್ಯಾರ್ಥಿಗಳಿಗೆ ತರಬೇತಿ, ಪ್ರೋತ್ಸಾಹ ಧನ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅವರ ಉಜ್ವಲ ಭವಿಷ್ಯಕ್ಕಾಗಿ ಜೆಸಿಐ ಸಂಸ್ಥೆ ಶ್ರಮಿಸುತ್ತಿರುವದು ಶ್ಲಾಘನೀಯವಾಗಿದೆ. ಈಗ ದತ್ತು ಪಡೆದ ವಿದ್ಯಾರ್ಥಿಯ ಉನ್ನತ ವ್ಯಾಸಂಗದ ಸಂಪೂರ್ಣ ಜವಾಬ್ದಾರಿ ಹೊತ್ತಿರುವ ಸಂಸ್ಥೆ ಅದನ್ನು ಪರಿಪೂರ್ಣವಾಗಿ ನಿರ್ವಹಿಸಲಿದೆ ಎಂದು ಹೇಳಿದರು
ಈ ಸಂದರ್ಭದಲ್ಲಿ ಜೆಸಿಐ ವಲಯ ಸಂಯೋಜಕ ವಿಷ್ಣು ಲಾತೂರ , ಅಧ್ಯಕ್ಷ ರಜನಿಕಾಂತ್ ಮಾಳೇದ , ಶೇಖರ ಉಳ್ಳೇಗಡ್ಡಿ ಸೇರಿದಂತೆ ಇತರರು ಇದ್ದರು.