ಬೆಳಗಾವಿ:ಸಚಿವ ರಮೇಶ ಜಾರಕಿಹೊಳಿ ಹೆಗಲಿಗೆ ಸಹಕಾರ ಖಾತೆ ಜವಾಬ್ದಾರಿ ಸಿಎಂ ಆದೇಶ
ಸಚಿವ ರಮೇಶ ಜಾರಕಿಹೊಳಿ ಹೆಗಲಿಗೆ ಸಹಕಾರ ಖಾತೆ ಜವಾಬ್ದಾರಿ ಸಿಎಂ ಆದೇಶ
ಬೆಳಗಾವಿ ಸೆ 2 : ಶುಕ್ರವಾರ ಸಂಜೆ ನಡೆದ ಸಚಿವ ಸಂಪುಟ ವಿಸ್ತರಣೆಯಲ್ಲಿ ನೂತನ ಸಚಿವರಾಗಿ ಹೆಚ್.ಎಂ. ರೇವಣ್ಣ, ಆರ್.ಬಿ. ತಿಮ್ಮಾಪುರ್ , ಗೀತಾ ಮಹದೇವ ಪ್ರಸಾದ. ಅವರು ನೂತನವಾಗಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ
ಇದರ ಬೆನ್ನಲ್ಲೇ ಕೆಲವು ಸಚಿವರಿಗೆ ಬಡ್ತಿ ನೀಡಿರುವ ಮುಖ್ಯಮಂತ್ರಿಗಳು ಸಣ್ಣ ಕೈಗಾರಿಕಾ ಖಾತೆ ನಿರ್ವಹಿಸುತ್ತಿದ್ದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸಹಕಾರ ಖಾತೆಯ ಜವಾಬ್ದಾರಿಯನ್ನು ನೀಡಿ ಆದೇಶ ಹೊರಡಿಸಿದ್ದಾರೆ
ಇದೇ ಸಂದರ್ಭದಲ್ಲಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿರುವ ಮುಖ್ಯಮಂತ್ರಿಗಳು
ಸಾರಿಗೆ ಖಾತೆಯನ್ನು ಹೆಚ್.ಎಂ. ರೇವಣ್ಣ ಗೆ , ಅಬಕಾರಿ ಖಾತೆಯನ್ನು ಆರ್.ಬಿ. ತಿಮ್ಮಾಪುರಗೆ ಗೀತಾ ಮಹದೇವ ಪ್ರಸಾದಗೆ ಸಕ್ಕರೆ, ಸಣ್ಣ ಕೈಗಾರಿಕೆ ಖಾತೆಯನ್ನು ನೀಡಿದ್ದಾರೆ