RNI NO. KARKAN/2006/27779|Sunday, December 15, 2024
You are here: Home » breaking news » ಬೆಳಗಾವಿ:ಹಿಂದಿ ದಿವಸ ವಿರೋಧಿಸಿ ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ

ಬೆಳಗಾವಿ:ಹಿಂದಿ ದಿವಸ ವಿರೋಧಿಸಿ ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ 

ಹಿಂದಿ ದಿವಸ ವಿರೋಧಿಸಿ ಬೆಳಗಾವಿಯಲ್ಲಿ ಕರವೇ ಪ್ರತಿಭಟನೆ   ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಸೆ 14 :   ದೇಶದಲ್ಲಿ ಸರ್ವ ಭಾಷೆಗಳಿಗೆ ಸಮಾನ ಸ್ಥಾನ ವಿರುವಾಗ ಕೇವಲ ಹಿಂದಿ ದಿವಸ ಮಾಡುವುದು ಸರಿಯಲ್ಲಾ ಎಂದು ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಘಟಕದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು  ಸೋಮವಾರದಂದು 

ನಗರ ಚೆನ್ನಮ್ಮ ವೃತ್ತದಲ್ಲಿ ಸೇರಿದ ಕರವೇ ಕಾರ್ಯಕರ್ತರು ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿಸಿ ಜಿಲ್ಲಾಧಿಕಾರಿ ಅವರ ಮುಖಾಂತರ ಸರಕಾರಕ್ಕೆ ಮನವಿ ಸಲ್ಲಿಸಿದರು ಈ ಸಂದರ್ಭದಲ್ಲಿ ಮಾತನಾಡಿದ ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಸರ್ವ ಭಾಷೆಗೆ ಸಮಾನ ಸ್ಥಾನಮಾನ ವಿರುವ ಭಾರತದಲ್ಲಿ ಕೇವಲ ಹಿಂದಿ ದಿವಸ ಆಚರಣೆ ಮಾಡುವುದು ಹಿಂದಿಯೇತರ ರಾಜ್ಯಗಳಿಗೆ ಮಾಡಿದ ಅನ್ಯಾಯವಾಗಿದೆ ಇದನ್ನು ಸರಕಾರ ಕೈಬಿಡಬೇಕೆಂದು ಆಗ್ರಹಿಸಿದರು ಪ್ರತಿಭಟನೆಯಲ್ಲಿ ಕರವೇ ರಾಜ್ಯ ಸಂಚಾಲಕ ಮಹಾದೇವ ತಳವಾರ , ಜಿಲ್ಲಾ ಉಪಾಧ್ಯಕ್ಷ ಸುರೇಶ್ ಗವ್ವನ್ನವರ, ಕಾರ್ಯದರ್ಶಿ ಗಣೇಶ ರೋಕಡೆ, ಬಾಳು ಜಿಡಗಿ , ಕರವೇ ಬೆಳಗಾವಿ ತಾಲೂಕಾಧ್ಯಕ್ಷ ನಾಗರಾಜ ಗುಂಡ್ಯಾಗೋಳ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು

Related posts: