ಬೆಳಗಾವಿ:ಮಂತ್ರಿಗಿರಿಗಾಗಿ ನಾನು ಯಾರ ಪರವಾಗಿ ಮಾತನಾಡುವುದಿಲ್ಲ : ಸಚಿವ ರಮೇಶ ಸ್ವಷ್ಟನೆ
ಮಂತ್ರಿಗಿರಿಗಾಗಿ ನಾನು ಯಾರ ಪರವಾಗಿ ಮಾತನಾಡುವುದಿಲ್ಲ : ಸಚಿವ ರಮೇಶ ಸ್ವಷ್ಟನೆ
ನಮ್ಮ ಬೆಳಗಾವಿ ಇ – ವಾರ್ತೆ , ಬೆಳಗಾವಿ ಸೆ 19 :
ಮುಖ್ಯಮಂತ್ರಿ ಬದಲಾವಣೆ ವಿಚಾರವು ಸುಳ್ಳು . ಮಂತ್ರಿಗಿರಿಗಾಗಿ ನಾನು ಯಾರ ಪರವಾಗಿ ಮಾತನಾಡುವುದಿಲ್ಲ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ಶನಿವಾರದಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು ಸಂಪುಟ ವಿಸ್ತರಣೆ ಬಗ್ಗೆ ಸಿಎಂ, ವರಿಷ್ಠರು ಚರ್ಚಿಸಿ, ತೀರ್ಮಾನಕೈಗೊಳ್ಳಲಿದ್ದಾರೆ. ಮಂತ್ರಿಗಿರಿಗಾಗಿ ನಾನು ಯಾರ ಪರವಾಗಿ ಮಾತನಾಡುವುದಿಲ್ಲ. ವಿಶ್ವನಾಥ್, ಎಂಬಿಟಿ ಯಾರಿಗೆ ಮಂತ್ರಿ ಸ್ಥಾನ ಸಿಕ್ಕರೂ ನನಗೆ ಸಂತೋಷ. ನಾನು ಸಾಮಾನ್ಯ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.