ಗೋಕಾಕ:ನಾನು ಮಂತ್ರಿಯಾಗಲು ದೆವೇಂದ್ರ ಫಡ್ನವೀಸ್ ಪಾತ್ರ ಮುಖ್ಯವಾಗಿದೆ : ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ರಮೇಶ ಜಾರಕಿಹೊಳಿ
ನಾನು ಮಂತ್ರಿಯಾಗಲು ದೆವೇಂದ್ರ ಫಡ್ನವೀಸ್ ಪಾತ್ರ ಮುಖ್ಯವಾಗಿದೆ : ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ಉದ್ಘಾಟಿಸಿದ ಸಚಿವ ರಮೇಶ ಜಾರಕಿಹೊಳಿ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಸೆ 20
ಪೌರಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿಯಲ್ಲಿ ಅಂದಾಜು ರೂ.130.00 ಲಕ್ಷಗಳಡಿ G+2ಮಾದರಿಯಲ್ಲಿ ನಿರ್ಮಿಸಿದ ಪೌರಕಾರ್ಮಿಕರ ವಸತಿ ಸಮುಚ್ಛಯ ಕಟ್ಟಡಗಳನ್ನು ರವಿವಾರದಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಉದ್ಘಾಟಿಸಿದರು
ಈ ಸಂದರ್ಭದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು ಪೌರಕಾರ್ಮಿಕರಿಗೆ ಅನುಕೂಲಕ್ಕಾಗಿ ಗೃಹ ಭಾಗ್ಯ ಯೋಜನೆಯಡಿಯಲ್ಲಿ 15 ಮನೆಗಳನ್ನು ನಿರ್ಮಿಸಲಾಗಿದ್ದು, ಪೌರಕಾರ್ಮಿಕರ ಅನುಕೂಲಕ್ಕಾಗಿ ಮುಂದಿನ ದಿನಗಳಲ್ಲಿ ಹಂತ ಹಂತವಾಗಿ ಹಲವಾರು ಯೋಜನೆಗಳನ್ನು ಕೈಗೋಳಲಾಗುವುದಲ್ಲದೆ ಗೋಕಾಕ ಸಮಗ್ರ ಅಭಿವೃದ್ಧಿಗೆ ಶ್ರಮಿಸಲಾಗುವದು ಎಂದು ಹೇಳಿದರು.
ದೇವೆಂದ್ರ ಫಡ್ನವೀಸ್ ಭೇಟಿ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ದೇವೆಂದ್ರ ಫಡ್ನವೀಸ್ ಸೌಜನ್ಯಯುತ್ತ ಭೇಟಿಯಷ್ಟೇ ಇದಕ್ಕೆ ಬೇರೆ ಅರ್ಥ ಕಲ್ಪಿಸಬೇಕಾಗಿಲ್ಲ , ಮಂತ್ರಿಯಾದಗಿನಿಂದ ಭೇಟಿಯಾಗಲು ಆಗಿರಲಿಲ್ಲ ನಾನು ಮಂತ್ರಿಯಾಗಲು ಮತ್ತು ರಾಜ್ಯ ಸರಕಾರ ರಚನೆಯಾಗಲು ಫಡ್ನವೀಸ್ ಪಾತ್ರ ಬಹು ಮುಖ್ಯವಾಗಿದೆ ಈ ಬಾರಿ ದೆಹಲಿಯಿಂದ ಹಿಂದಿರುಗುವ ಸಂದರ್ಭದಲ್ಲಿ ಭೇಟಿಯಾಗಿ ಕುಶಲೋಪರಿ ವಿಚಾರಿಸಿದ್ದೇನಷ್ಟೆ ಎಂದರು
ಕತ್ತಿ ಸೇರಿದಂತೆ ಎಲ್ಲಾ ಸಚಿವ ಆಕಾಂಕ್ಷಿಯರು ನನ್ನ ಗೆಳೆಯರೇ : ಸಚಿವಾಕಾಂಕ್ಷಿ ಉಮೇಶ ಕತ್ತಿ ಸಿ.ಪಿ ಯೊಗೇಶ್ವರ, ಆರ್.ಶಂಕರ , ಎಂಟಿಬಿ ಹೆಚ್ಚ.ವಿಶ್ವನಾಥ್ ಸೇರಿದಂತೆ ಎಲ್ಲರೂ ನನ್ನ ಗೆಳೆಯರೇ ಯಾರಿಗೆ ಸಚಿವ ಸ್ಥಾನ ಕೊಡಬೇಕು ಅದನ್ನು ಸಿಎಂ ನಿರ್ಧರಿಸುತ್ತಾರೆ. ಎಲ್ಲರಿಗು ಸಿಕ್ಕರೆ ಸಂತೋಷ ಎಂದು ಸಚಿವ ರಮೇಶ ಪ್ರತಿಕ್ರಿಯೆಸಿದರು.
ಇದೇ ಸಂದರ್ಭದಲ್ಲಿ ಪೌರಕಾರ್ಮಿಕರ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಸತ್ಕರಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಪೌರಾಯುಕ್ತ ಶಿವಾನಂದ ಹಿರೇಮಠ , ಅಧಿಕಾರಿಗಳಾದ ಎಂ.ಎಚ್.ಗಜಾಕೋಶ, ವಿ ಎಮ್ ಸಾಲಿಮಠ, ವಿನೋದ ಪಾಟೀಲ, ಹಳ್ಳೂರ, ಗುತ್ತಿಗೇದಾರ ಬಸವರಾಜ ಗಂಗರೆಡ್ಡಿ , ನಗರಸಭೆ ಸದಸ್ಯರಾದ ಅಬ್ದುಲರಹೆಮಾನ ದೇಸಾಯಿ , ಜಯಾನಂದ ಹುಣಶ್ಯಾಳ, ಬಸವರಾಜ ಅರೆನ್ನವರ , ಮುಖಂಡರುಗಳಾದ ದುರ್ಗಪ್ಪ ಶಾಸ್ತ್ರಿಗೋಲ್ಲರ, ಅಬ್ದುಲ್ ಜಮಾದರ , ಕಾಶಿಮ ಖಲೀಫ , ವಿಶ್ವನಾಥ್ ಬಿಳ್ಳೂರ , ಬಿಜೆಪಿ ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ಅಲ್ಪಸಂಖ್ಯಾತರ ಜಿಲ್ಲಾಧ್ಯಕ್ಷ ಶಪೀ ಜಮಾದರ , ಬಿಜೆಪಿ ರಾಜ್ಯ ಮಹಿಳಾ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ತಾಪಂ ಸದಸ್ಯ ಕಿರಣ ಬೆಣಚಿನಮರಡಿ, ಜ್ಯೋತಿಭಾ ಸುಬಂಜಿ, ಬಸವರಾಜ ಹಿರೇಮಠ, ಶಿವಾನಂದ ಚೌಕಾಶಿ, ಯಲ್ಲಪ್ಪ ಹಳ್ಳೂರ, ಸೇರಿದಂತೆ ಅನೇಕರು ಇದ್ದರು.