RNI NO. KARKAN/2006/27779|Saturday, November 23, 2024
You are here: Home » breaking news » ಗೋಕಾಕ:ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಜಿಲ್ಲೆ ಜನತೆಗೆ ತೀವ್ರ ಅಘಾತ ಉಂಟು ಮಾಡಿದೆ : ಭೀಮಶಿ ಭರಮನ್ನವರ

ಗೋಕಾಕ:ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಜಿಲ್ಲೆ ಜನತೆಗೆ ತೀವ್ರ ಅಘಾತ ಉಂಟು ಮಾಡಿದೆ : ಭೀಮಶಿ ಭರಮನ್ನವರ 

ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಜಿಲ್ಲೆ ಜನತೆಗೆ ತೀವ್ರ ಅಘಾತ ಉಂಟು ಮಾಡಿದೆ : ಭೀಮಶಿ ಭರಮನ್ನವರ

 
ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಸೆ 24 :

 

ಬೆಳಗಾವಿ ಜಿಲ್ಲೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಪಕ್ಷದ ಕಾರ್ಯಕರ್ತರಿಗೆ ಹಿರಿಯ ಅಣ್ಣನಂತೆ ನಿಂತು ಮಾರ್ಗದರ್ಶನ ನೀಡುತ್ತಿದ್ದ ಸಂಸದರು ಹಾಗೂ ಕೇಂದ್ರ ರೇಲ್ವೆ ಸಚಿವರಾದ ಸುರೇಶ ಅಂಗಡಿ ಅವರ ನಿಧನ ಜಿಲ್ಲೆ ಜನತೆಗೆ ತೀವ್ರ ಅಘಾತ ಉಂಟು ಮಾಡಿದೆ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಭೀಮಶಿ ಭರಮನ್ನವರ ಹೇಳಿದರು.
ಅವರು, ಗುರುವಾರದಂದು ನಗರದ ಸಚಿವ ರಮೇಶ ಜಾರಕಿಹೊಳಿ ಅವರ ಗೃಹ ಕಚೇರಿಯಲ್ಲಿ ಬಿಜೆಪಿ ಗೋಕಾಕ ನಗರ ಹಾಗೂ ಗ್ರಾಮೀಣ ಘಟಕದಿಂದ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಮೃತ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಭಾವ ಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಮೌನಾಚರಣೆ ನಡೆಸಿ, ಮಾತನಾಡಿದರು.
ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ಅವರು ಸ್ಮಾರ್ಟ್ ಸಿಟಿ ಸೇರಿದಂತೆ ಈ ಭಾಗದ ಬಹುದಿನಗಳ ಕನಸ್ಸಾಗಿದ್ದ ಬೆಳಗಾವಿ ಕಿತ್ತೂರು ಧಾರವಾಡ ರೈಲು ಸೇವೆಯನ್ನು ಪ್ರಾರಂಭಿಸಲು ಉತ್ಸುಕರಾಗಿದ್ದರು. ತಮ್ಮ ಅಮೃತ ಹಸ್ತದಿಂದ ಈ ಸೇವೆಯನ್ನು ಪ್ರಾರಂಭಿಸಬೇಕಿದ್ದ ಅವರು ನಿಧನರಾಗಿದ್ದು ಬೆಳಗಾವಿ ಜಿಲ್ಲೆಗೆ ದುಃಖದ ಸಂಗತಿಯಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಪಂ ಸದಸ್ಯ ಟಿ ಆರ್ ಕಾಗಲ್, ಬಿಜೆಪಿ ಗ್ರಾಮೀಣ ಅಧ್ಯಕ್ಷ ರಾಜೇಂದ್ರ ಗೌಡಪ್ಪಗೋಳ, ಮಹಿಳಾ ಮೋರ್ಚಾ ರಾಜ್ಯ ಉಪಾಧ್ಯಕ್ಷೆ ಪ್ರೇಮಾ ಭಂಡಾರಿ, ಜಿಲ್ಲಾ ಉಪಾಧ್ಯಕ್ಷ ಶಾಮಾನಂದ ಪೂಜಾರಿ, ಕಾರ್ಯದರ್ಶಿ ಬಸವರಾಜ ಹಿರೇಮಠ, ಅಲ್ಪ ಸಂಖ್ಯಾತರ ಘಟಕದ ಶಕೀಲ ಧಾರವಾಡಕರ, ಶಫಿ ಜಮಾದಾರ, ಮುಖಂಡರಾದ ಕಾಂತು ಎತ್ತಿನಮನಿ, ಅಶೋಕ ಗೋಣಿ, ಸುರೇಶ ಸನದಿ, ಶಶಿಧರ ದೇಮಶೆಟ್ಟಿ, ವೀರುಪಾಕ್ಷ ಯಲಿಗಾರ, ನಗರಸಭೆ ಸದಸ್ಯರಾದ ಅಬ್ಬಾಸ ದೇಸಾಯಿ, ದುರ್ಗಪ್ಪ ಶಾಸ್ತ್ರಿಗೊಲ್ಲರ, ಜಯಾನಂದ ಹುಣಶ್ಯಾಳ, ಯಲ್ಲಪ್ಪ ಹಳ್ಳೂರ, ಜ್ಯೋತಿಭಾ ಸುಭಂಜಿ, ಅಬ್ದುಲವಹಾಬ ಜಮಾದಾರ, ಮಹಿಳಾ ಮೋರ್ಚಾದ ಕುಸುಮಾ ಖನಗಾಂವಿ, ರಾಜೇಶ್ವರಿ ಒಡೆಯರ, ಹಾಗೂ ಶಿವು ಹಿರೇಮಠ, ಕಿರಣ ಡಮಾಮಗರ, ಸಚೀನ ಕಮಟೇಕರ, ವಿಶಾಲ ಪಟಗುಂದಿ, ರಾಜು ಹಿರೇಅಂಬಿಗೇರ, ಹಟ್ಟಿಗೌಡರ ಸೇರಿದಂತೆ ಬಿಜೆಪಿ ಕಾರ್ಯಕರ್ತರು ಇದ್ದರು.

Related posts: