ಗೋಕಾಕ:ಭೂ ಸುಧಾರಣಾ , ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ನಾಳೆ ಗೋಕಾಕ ಬಂದ್ : ಭೀಮಶಿ ಗದಾಡಿ
ಭೂ ಸುಧಾರಣಾ , ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ನಾಳೆ ಗೋಕಾಕ ಬಂದ್ : ಭೀಮಶಿ ಗದಾಡಿ
ಗೋಕಾಕ ಸೆ 27 : ಭೂ ಸುಧಾರಣಾ , ಎಪಿಎಂಸಿ ಕಾಯ್ದೆಗಳನ್ನು ವಿರೋಧಿಸಿ ಸೋಮವಾರ ದಿ. 28 ರಂದು ಗೋಕಾಕ , ಮೂಡಲಗಿ ತಾಲೂಕು ಸಂಪೂರ್ಣ ಬಂದ ಮಾಡಿ ಪ್ರತಿಭಟಿಸಲಾಗುವುದೆಂದು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಸಂಚಾಲಕ ಭೀಮಶಿ ಗದಾಡಿ ಹೇಳಿದರು
ರವಿವಾರದಂದು ನಗರದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪ್ರತಿಕಾಗೋಷ್ಠಿಯನ್ನು ಉದ್ಧೇಶಿಸಿ ಮಾತನಾಡಿದ ಅವರು ರಾಜ್ಯ ಸರಕಾರ ತಂದಿರುವ ಭೂ ಸುಧಾರಣೆ ಮತ್ತು ಎಪಿಎಂಸಿ ಮಸೂದೆಗಳು ರೈತರ ಪಾಲಿಗೆ ಮರಣ ಶಾಸನವಾಗಿದ್ದು ಶೀಘ್ರದಲ್ಲೇ ಈ ಮಸೂದೆಗಳನ್ನು ಹಿಂಪಡೆದು ರೈತರ ಹಿತ ಕಾಪಾಡಬೇಕೆಂದು ಸರಕಾರವನ್ನು ಆಗ್ರಹಿಸಿರುವ ಅವರು ಸೋಮವಾರದಂದು ನಡೆಯುವ ಹೋರಾಟಕ್ಕೆ ಕನ್ನಡ ಪರ ಸಂಘಟನೆಗಳು ಸೇರಿದಂತೆ ಹತ್ತಾರು ಸಂಘಟನೆಗಳು ಬೆಂಬಲ ಸೂಚಿಸಿದ್ದು ಹೋರಾಟಕ್ಕೆ ಆನೆಬಲ ಬಂದಂತಾಗಿದೆ ಎಂದು ಗದಾಡಿ ಹೇಳಿದರು
ಕೃಷಿ ಸಚಿವ ಬಿ.ಸಿ ಪಾಟೀಲ ಹೇಳಿಕೆ ಹಿಮ್ಮಡಿಯಲ್ಲಿ : ರಾಜ್ಯ ಕೃಷಿ ಸಚಿವ ಬಿ.ಸಿ ಪಾಟೀಲ ರಾಜ್ಯ ರೈತ ನಾಯಕ ಕೋಡಿಹಳ್ಳಿ ಅವರಿಗೆ ಅವೈಜ್ಞಾನಿ ಎಂದು ಸಂಭೊಧಿಸಿರುವುದು ತರವಲ್ಲ ಅವರು ತಕ್ಷಣ ಈ ಹೇಳಿಕೆಯನ್ನು ಹಿಮ್ಮಡೆಯಬೇಕು ಇಲ್ಲದಿದ್ದರೆ ಅವರು ಜಿಲ್ಲೆಯಲ್ಲಿ ಭಾಗವಹಿಸುವ ಯಾವುದೇ ಕಾರ್ಯಕ್ರಮ ಇದ್ದರೆ ಅದನ್ನು ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ವತಿಯಿಂದ ಬಹಿಷ್ಕರಿಸಲಾಗುವುದು ಎಂದು ಭೀಮಶಿ ಗದಾಡಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶೆಟ್ಟೆಪ್ಪ ಮಲ್ಲಾಪುರಿ, ಕನ್ನಡಪರ ಸಂಘಟನೆಗಳ ಮುಖಂಡರುಗಳಾದ ಸಂತೋಷ ಖಂಡ್ರಿ, ಸಂತೋಷ ಅರಳಿಕಟ್ಟಿ , ಮಲಿಕಜಾನ ತಳವಾರ, ಅಪ್ಪಾಸಾಬ ಮುಲ್ಲಾ , ರಾಜು ದೊಡ್ಡಮನಿ , ಸೇರಿದಂತೆ ಇತರರು ಇದ್ದರು