ಗೋಕಾಕ:ಲೋಕಸಭಾ ಉಪ ಚುನಾವಣೆ ಸ್ವರ್ಧೆ : ಪೇಸ್ಬುಕ್ಕ ಪೋಸ್ಟ್ ಹಾಕಿ ಊಹಾಪೋಹಗಳಿಗೆ ತೆರೆ ಎಳೆದ ಅಮರನಾಥ
ಲೋಕಸಭಾ ಉಪ ಚುನಾವಣೆ ಸ್ವರ್ಧೆ : ಪೇಸ್ಬುಕ್ಕ ಪೋಸ್ಟ್ ಹಾಕಿ ಊಹಾಪೋಹಗಳಿಗೆ ತೆರೆ ಎಳೆದ ಅಮರನಾಥ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 12 :
ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ಸಾವಿನಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಸ್ಥಾನಕ್ಕೆ ಮುಂದಿನ ಅಭ್ಯರ್ಥಿ ಯಾರು ಎಂಬ ಚರ್ಚೆಗಳು ರಾಜಕೀಯ ಪಡಶಾಲೆಯಲ್ಲಿ ಶೂರುವಾಗಿರುವಾಗಲೆ ಕಳೆದ ಎರೆಡು ದಿನಗಳಿಂದ ಸಮಾಜಿಕ ಜಾಲತಾಣಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಸುಪುತ್ರ ಅರಮನಾಥ್ ಜಾರಕಿಹೊಳಿ ಅವರೇ ಅಭ್ಯರ್ಥಿ ಎನ್ನುವ ರೀತಿಯಲ್ಲಿ ಅಮರ ಪರ ಪೋಸ್ಟಗಳು ಹರಿದಾಡುತ್ತಿರುವ ಸಂದರ್ಭದಲ್ಲಿ ಸಚಿವ ರಮೇಶ ಜಾರಕಿಹೊಳಿ ಅವರ ಪುತ್ರ ಅರಮನಾಥ್ ಜಾರಕಿಹೊಳಿ ಅವರು ರಾಜಕೀಯದಲ್ಲಿ ಇನ್ನೂ ನಾನು ಚಿಕ್ಕವನು ಬೆಳಗಾವಿ ಲೋಕಸಭಾ ಉಪ ಚುನಾವಣೆಗೆ ನಮ್ಮ ಬೆಂಬಲ ಸುರೇಶ ಅಂಗಡಿ ಅವರ ಕುಟುಂಬಕ್ಕೆ ಅವರಿಗೆ ಅನ್ಯಾಯವಾಗಲು ಬಿಡುವುದಿಲ್ಲ ಯಾವುದೇ ಕಾರಣಕ್ಕೂ ಅಭ್ಯರ್ಥಿ ಆಗುವ ಮನಸ್ಸು ನನಗಿಲ್ಲ.ನಾನು ಎಲ್ಲಾ ಕಾರ್ಯಕರ್ತರಂತೆ ಟೊಂಕ ಕಟ್ಟಿ ನಿಂತು ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸುತ್ತೇನೆ. ಶ್ಯಾಮ್ ಪ್ರಸಾದ್ ಮುಖರ್ಜಿ, ದೀನ್ದಯಾಳ್ ಉಪಾಧ್ಯಾಯರಂಥಹಾ ರಾಷ್ಟ್ರಭಕ್ತರು ಸ್ಥಾಪಿಸಿದ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತ ನಾನು ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಅನ್ನಿಸುತ್ತದೆ ಎಂದು ಸೋಮವಾರದಂದು ತಮ್ಮ ಫೇಸ್ಬುಕ್ ನಲ್ಲಿ ಪೋಸ್ಟ ಹಾಕಿ ತಾನು ಮುಂಬರುವ ಲೋಕಸಭಾ ಉಪ ಚುನಾವಣೆಯಲ್ಲಿ ಅಭ್ಯರ್ಥಿ ಅಲ್ಲ ಎಂದು ಹೇಳಿ ಎಲ್ಲ ಉಹಾಪೋಹಗಳಿಗೆ ತೆರೆ ಎಳೆದಿದ್ದಾರೆ .