ಗೋಕಾಕ:ಕೊರೋನಾ ವೈರಸ್ ನಾಶವಾಗುವವರೆಗೆ ನಮ್ಮ ಕಾರ್ಯವನ್ನು ಮುಂದುವರೆಸೋಣಾ : ಡಾ. ಉದಯ ಅಂಗಡಿ
ಕೊರೋನಾ ವೈರಸ್ ನಾಶವಾಗುವವರೆಗೆ ನಮ್ಮ ಕಾರ್ಯವನ್ನು ಮುಂದುವರೆಸೋಣಾ : ಡಾ. ಉದಯ ಅಂಗಡಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 28 :
ಕೊರೋನಾ ವೈರಸ್ ಪೂರ್ಣ ನಾಶವಾಗುವವರೆಗೆ ನಾವೆಲ್ಲ ನಮ್ಮ ಕಾರ್ಯವನ್ನು ಮುಂದುವರೆಸೋಣಾ ಎಂದು ಇಲ್ಲಿನ ಸರಕಾರಿ ಆಸ್ಪತ್ರೆಯ ಡಾ . ಉದಯ ಅಂಗಡಿ ಹೇಳಿದರು
ಬುಧವಾರದಂದು ನಗರದ ಸರಕಾರಿ ಆಸ್ಪತ್ರೆಯಲ್ಲಿ ರೋಟರಿ ಪ್ರತಿಷ್ಠಾನ ಹಾಗೂ ರೋಟರಿ ಸಂಸ್ಥೆಯವರು ಹಮ್ಮಿಕೊಂಡ ಕೊರೋನಾ ವಾರಿಯರ್ಸ್ ಗಳಿಗೆ ಪಿಪಿ ಕಿಟ್ ಹಾಗೂ ಮಾಸ್ಕಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು
ಕೊರೋನಾ ವೈರಸ್ ಕಡಿಮೆಯಾಗುತ್ತಿರುವುದು ನೆಮ್ಮದಿ ತರುತ್ತಿದೆ. ಆದರೂ ಸಹ ಸಂಪೂರ್ಣ ನಾಶವಾಗುವವರೆಗೆ ಜನರಲ್ಲಿ ಮಾಸ್ಕ ಧರಿಸುವಂತೆ ಮತ್ತು ಸಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಜಾಗೃತಿ ಮೂಡಿಸಬೇಕು ರೋಟರಿ ಸಂಸ್ಥೆಯವರು ಇಂತಹ ಕಾರ್ಯಕ್ಕೆ ಸಹಕಾರ ನೀಡುತ್ತಿರುವುದು ಮಾದರಿಯಾಗಿದೆ ನಾವೆಲ್ಲರೂ ಈ ವೈರಸ್ ವಿರುದ್ಧ ಹೋರಾಡೋಣಾ ಎಂದರು
ಈ ಸಂದರ್ಭದಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ಎಂ.ಎಸ್ ಕೋಪ್ಪದ ,ರಾಮಚಂದ್ರ ಸಣ್ಣಕ್ಕಿ , ರೋಟರಿ ಅಧ್ಯಕ್ಷ ವಿಶ್ವನಾಥ ಕಡಕೋಳ , ಕಾರ್ಯದರ್ಶಿ ರಾಜು ವರದಾಯಿ , ಪದಾಧಿಕಾರಿಗಳಾದ ಸೋಮಶೇಖರ್ ಮಗದುಮ್ಮ, ಸತೀಶ ಬೆಳಗಾವಿ , ಬಸವರಾಜ ಹಳ್ಳೂರ , ಸುರೇಶ ರಾಠೋಡ , ಸಚಿನ ಜಾಧವ, ಪರಮೇಶ್ವರ್ ಗುಲ್ಲ, ವಿನೋದ ಸುಪಲಿ , ಕೆಂಚಪ್ಪ ಭರಮನ್ನವರ ಇದ್ದರು.