RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಸಾವಯವ ಕೃಷಿ ಪದ್ಧತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು : ದೇವರಾಜ್.ಎಂ

ಗೋಕಾಕ:ಸಾವಯವ ಕೃಷಿ ಪದ್ಧತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು : ದೇವರಾಜ್.ಎಂ 

ಸಾವಯವ ಕೃಷಿ ಪದ್ಧತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು : ದೇವರಾಜ್.ಎಂ

 

 

ನಮ್ಮ ಬೆಳಗಾವಿ ಇ – ವಾರ್ತೆ, ಬೆಟಗೇರಿ ನ 11 :

 

ಇಂದಿನ ದಿನಮಾನಗಳಲ್ಲಿ ವಿಷ ಮುಕ್ತ ಆಹಾರ ಪಡೆಯಲು ಮತ್ತು ಮನುಷ್ಯನ ಆರೋಗ್ಯದ ಹಿತದೃಷ್ಠಿಯಿಂದ ಸಾವಯವ ಕೃಷಿ ಪದ್ಧತಿಯನ್ನು ಪ್ರತಿಯೊಬ್ಬರು ಅಳವಡಿಸಿಕೊಳ್ಳಬೇಕು ಎಂದು ಮೂಡಲಗಿ ಕೇಂದ್ರದ ಶ್ರೀಕ್ಷೇಧಗ್ರಾಯೋ ಬಿಸಿ ಟ್ರಸ್ಟ್ ಯೋಜನಾಧಿಕಾರಿ ದೇವರಾಜ್.ಎಂ ಹೇಳಿದರು.
ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದಲ್ಲಿ ಮೂಡಲಗಿ ಕೇಂದ್ರ ಹಾಗೂ ಕೌಜಲಗಿ ವಲಯದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಡಿಯಲ್ಲಿ ಬುಧವಾರ ನ.11ರಂದು ನಡೆದ ರೈತ ಕ್ಷೇತ್ರ ಪಾಠ ಶಾಲೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿ, ಜೀವಾಮೃತದ, ಗೋಕೃಪಾಂಬೃತದ ಬಳಕೆ, ದೇಶಿ ತಳಿ ಗೋವುಗಳ ಸಂರಕ್ಷಣೆ, ಸಾವಯವ ಕೃಷಿ ಪದ್ಧತಿ ಅಳವಡಿಕೆ ಕುರಿತು ರೈತರಿಗೆ ತಿಳಿಸಿದರು.
ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಸಾವಯವ ಕೃಷಿಕ ರೈತರಾದ ಅಜ್ಜಪ್ಪ ಕುಲಗೋಡ ಅವರು ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾಗಿ ಮಾತನಾಡಿ, ಸಾವಯವ ಕೃಷಿಯಿಂದ ದೊರಕುವ ವಿವಿಧ ಪ್ರಯೋಜನಗಳು ಹಾಗೂ ಸಾವಯವ ಕೃಷಿ ಚಟುವಟಿಕೆಗಳ ಕುರಿತು ಮಾತನಾಡಿದರು.
ಶ್ರೀಕ್ಷೇಧಗ್ರಾಯೋ ಕೌಜಲಗಿ ವಲಯದ ಮೇಲ್ವಿಚಾರಕ ಬಾಬುರಾವ್ ಗೋಣಿ, ಕೃಷಿ ಮೇಲ್ವಿಚಾರಕ ಈರಣ್ಣ ಅಂಗಡಿ, ಪ್ರಜ್ವಲ ಹುಂಡೆಕರ, ಮಧು ತಲ್ಲೂರ, ಬಸವರಾಜ ಕರಿಗಾರ, ಲಕ್ಷ್ಮೀ ಚಂದರಗಿ ಸೇರಿದಂತೆ ಕೌಜಲಗಿ ವಲಯದ ಎಲ್ಲ ಪ್ರಗತಿ ಬಂಧು, ಮಹಿಳಾ ಸ್ವ-ಸಹಾಯ ಸಂಘಗಳ ಹಾಗೂ ಒಕ್ಕೂಟದ ಅಧ್ಯಕ್ಷರು, ಸದಸ್ಯರು, ಪ್ರತಿನಿಧಿಗಳು, ರೈತರು, ಗ್ರಾಮಸ್ಥರು ಇದ್ದರು.

Related posts: