RNI NO. KARKAN/2006/27779|Wednesday, December 25, 2024
You are here: Home » breaking news » ಗೋಕಾಕ:ಯುವ ಸಮುದಾಯಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಬೇಕು : ಶಾಸಕ ಬಾಲಚಂದ್ರ

ಗೋಕಾಕ:ಯುವ ಸಮುದಾಯಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಬೇಕು : ಶಾಸಕ ಬಾಲಚಂದ್ರ 

ಯುವ ಸಮುದಾಯಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಬೇಕು : ಶಾಸಕ ಬಾಲಚಂದ್ರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 13 :

ಯುವ ಸಮುದಾಯ ಸಾಂಸ್ಕøತಿಕ ಮತ್ತು ಸಾಮಾಜಿಕ ಕಾರ್ಯಗಳನ್ನು ಮಾಡಿಕೊಂಡು ಸಮಾಜದ ಸರ್ವಾಂಗೀಣ ಅಭಿವೃದ್ದಿಗಾಗಿ ಶ್ರಮಿಸಬೇಕೆಂದು ಶಾಸಕ ಮತ್ತು ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಇಲ್ಲಿಯ ಎನ್‍ಎಸ್‍ಎಫ್ ಅತಿಥಿಗೃಹದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಗೋಕಾಕ ತಾಲೂಕಾ ಘಟಕದ ನೂತನ ಪದಾಧಿಕಾರಿಗಳನ್ನು ಅಭಿನಂಧಿಸಿ ಮಾತನಾಡಿದರು.
ಯುವ ಶಕ್ತಿಯೇ ದೇಶದ ಸಂಪತ್ತು. ಯುವ ಜನತೆಯ ಕ್ರೀಯಾಶೀಲರಾಗಿ ಸಮಾಜಮುಖಿ ಕಾರ್ಯಗಳನ್ನು ಮಾಡಬೇಕು. ಎಲ್ಲರೂ ಒಂದೇ ಮನಸ್ಸಿನಿಂದ ಒಗ್ಗಟ್ಟಾಗಿ ಕೆಲಸವನ್ನು ಮಾಡುತ್ತಾ ಹೋಗಬೇಕು. ಸಂಘಟನೆಯ ಮುಖಾಂತರ ಯಾವುದೇ ಸಮಾಜಮುಖಿ ಕಾರ್ಯಗಳನ್ನು ಮಾಡಿದರೇ ಅದಕ್ಕೆ ಸದಾ ನಮ್ಮ ಸಂಪೂರ್ಣ ಸಹಕಾರ ಇರುತ್ತದೆ ಎಂದರು. ಯುವ ಸಮುದಾಯ ಸಮಾಜದ ಅಭಿವೃದ್ಧಿ ಪರ ಕಾರ್ಯಗಳನ್ನು ಮಾಡಿ, ಸಂಘಟನೆಗೆ ಉತ್ತಮ ರೀತಿಯಲ್ಲಿ ಬೆಳೆಸಿಕೊಂಡು ಹೋಗಬೇಕು ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.
ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ತಾಲೂಕಾ ಘಟಕದ ಗೌರವಾಧ್ಯಕ್ಷೆ ಶ್ರೀಮತಿ ರಜನಿ ಜೀರಗ್ಯಾಳ, ಮಾತನಾಡಿ ಸಾಂಸ್ಕøತಿಕವಾಗಿ ಗೋಕಾಕ ತಾಲೂಕವು ಮುಂಚೂಣಿಯಲ್ಲಿದೆ. ಕಲಾವಿದರ ಸದಾ ಏಳ್ಗೆಗೆ ಶ್ರಮಿಸುವಂತಹ ಕಾರ್ಯವನ್ನು ಒಕ್ಕೂಟದಿಂದ ಮಾಡಲಾಗುತ್ತದೆ. ಕೆಲ ಕಲಾವಿದರ ಎಲೆಮರಿಕಾಯಿಯಂತೆ ಇದ್ದು ಅವರನ್ನು ಗುರುತಿಸುವಂತಹ  ಕೆಲಸ ಒಕ್ಕೂಟದಿಂದ ಮಾಡಲಾಗುತ್ತಿದೆ ಎಂದರು. ಇದೇ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಆದೇಶ ಪತ್ರವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಬಿಡುಗಡೆಗೊಳಿಸಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಸಿದ್ದಣ್ಣ ದುರದುಂಡಿ ಹಾಗೂ  ಗೋಕಾಕ ತಾಲೂಕಾ ಘಟಕದ ನೂತನ ಅಧ್ಯಕ್ಷ ವಿಠ್ಠಲ ಕರೋಶಿ, ಉಪಾಧ್ಯಕ್ಷ ಅನೀಲ ತುರಾಯಿದಾರ, ಕಾರ್ಯದರ್ಶಿ ಸೋಮನಾಥ ಹೊಸಟ್ಟಿ, ಜಂಟಿ ಕಾರ್ಯದರ್ಶಿ ಬಾಲಚಂದ್ರ ಬನವಿ, ಸಂಘಟನಾ ಕಾರ್ಯದರ್ಶಿ ಯಲ್ಲೇಶಕುಮಾರ ನಾಗಪ್ಪಗೋಳ, ಸಾಂಸ್ಕøತಿಕ ಕಾರ್ಯದರ್ಶಿ ಅಕ್ಕಮಹಾದೇವಿ ಮಾದರ, ಕ್ರೀಡಾ ಕಾರ್ಯದರ್ಶಿ ಗೂಳಪ್ಪ ವಿಜಯನಗರ, ಸಂಚಾಲಕಿ ಮಹಾಲಕ್ಷ್ಮೀ ಮಾಡಮಗೇರಿ, ಸಹ ಸಂಚಾಲಕಿ ಶೈಲಾ ಕೊಕ್ಕರಿ, ಸದಸ್ಯರುಗಳಾದ ಮಲ್ಲಪ್ಪ ದಾಸಪ್ಪಗೋಳ, ಪಾಂಡುರಂಗ ದೊಡಮನಿ, ವಿಠ್ಠಲ ಬಾಪುಕರಿ, ಮಾಲಾ ಭೋವಿ, ಪೂಜಾ ಕಾಂಬಳೆ ಇದ್ದರು.

Related posts: