RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕರ್ನಾಟಕದ ಎಲ್ಲ ಮರಾಠಿಗರು ಕನ್ನಡವನ್ನು ಪ್ರೀತಿಸುತ್ತಾರೆ : ಡಾ. ಜಿ. ಆರ್.ಸೂರ್ಯವಂಶಿ

ಗೋಕಾಕ:ಕರ್ನಾಟಕದ ಎಲ್ಲ ಮರಾಠಿಗರು ಕನ್ನಡವನ್ನು ಪ್ರೀತಿಸುತ್ತಾರೆ : ಡಾ. ಜಿ. ಆರ್.ಸೂರ್ಯವಂಶಿ 

ಕರ್ನಾಟಕದ ಎಲ್ಲ ಮರಾಠಿಗರು ಕನ್ನಡವನ್ನು ಪ್ರೀತಿಸುತ್ತಾರೆ : ಡಾ. ಜಿ. ಆರ್.ಸೂರ್ಯವಂಶಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 17 :

 
ಕರ್ನಾಟಕದ ಎಲ್ಲ ಮರಾಠಿಗರು ಕನ್ನಡವನ್ನು ಪ್ರೀತಿಸುತ್ತಾರೆ. ಆದರೆ ಕೆಲ ಪಟ್ಟಬದ್ದ ಹಿತಾಸಕ್ತಿಗಳು ಮರಾಠಿ ಪ್ರಾಧಿಕಾರಕ್ಕೆ ವಿರೋಧ ಮಾಡುತ್ತಿರುವುದು ಸರಿಯಲ್ಲ ಎಂದು ಮರಾಠಾ ಸಮಾಜದ ಮುಖಂಡ ಡಾ. ಜಿ.ಆರ್.ಸೂರ್ಯವಂಶಿ ಹೇಳಿದರು

ಮಂಗಳವಾರದಂದು ನಗರದ ಖಾಸಗಿ ಹೋಟೇಲನಲ್ಲಿ ಮರಾಠಾ ಸಮಾಜದ ವತಿಯಿಂದ ಕರೆದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು.

ಕಳೆದ 10 ವರ್ಷಗಳಿಂದ ಮರಾಠಾ ಸಮಾಜವನ್ನು 2 ಎ ಕ್ಕೆ ಸೇರಿಸಿ ಎಂದು ಹೋರಾಟ ಮಾಡಲಾಗುತ್ತಿದ್ದು, ಅದರ ಫಲವಾಗಿ ಇಂದು ಸರಕಾರ ನಮಗೆ ಪ್ರತ್ಯೇಕ ಪ್ರಾಧಿಕಾರ ರಚನೆ ಮಾಡಿದ್ದು , ಮುಂದೆ ಈ ಸಮಾಜವನ್ನು 2 ಎ ಗೆ ಸೇರಿಸಲು ಕ್ರಮ ಜರುಗಿಸುತ್ತದೆ ಎಂಬ ವಿಶ್ವಾಸ ಇದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಸಮಾನ ಹಕ್ಕು ಇದೆ. ರಾಜ್ಯದಲ್ಲಿ ಸಾಕಷ್ಟು ಮರಾಠಿ ಜನರು ಕನ್ನಡವನ್ನು ಪ್ರೀತಿಸುತ್ತಾರೆ. ಇದಕ್ಕೆ ವಿರೋಧ ಮಾಡಿದರೆ ಒಂದು ಸಮಾಜಕ್ಕೆ ದ್ರೋಹ ಬಗೆದಂತೆ ಎಂಬುದನ್ನು ಕನ್ನಡ ಪರ ಹೋರಾಟಗಾರರು ತಿಳಿದುಕೊಳ್ಳಬೇಕು. ‌ ಈ ಸಮಾಜ ಸಾಕಷ್ಟು ಹಿಂದುಳಿದಿದೆ ಸರಕಾರದ ಈ ಕ್ರಮದಿಂದ ಸಮಾಜ ಬೆಳವಣಿಗೆ ಆಗುತ್ತದೆ ಮುಖ್ಯಮಂತ್ರಿ ಅವರಿಗೆ ಭೇಟಿಯಾಗಿ ಅಭಿನಂದನೆ ಸಲ್ಲಿಸುತ್ತೇವೆ ಎಂದು ಹೇಳಿದರು .

ಸಮಾಜದ ಮುಖಂಡ ರಾಮಚಂದ್ರ ಕಾಕಡೆ ಮಾತನಾಡಿ ನಾವು ಜಾತಿಯಿಂದ ಮರಾಠಿ ಆದರೂ ರಕ್ತದಲ್ಲಿ ಕನ್ನಡ ಇದೆ. ಅಭಿವೃದ್ಧಿ ಹೆಸರಿನಲ್ಲಿ ಜಾತಿ ಮತಗಳ ಬೇಧ ತರಬಾರದು. ಮರಾಠ ಸಮಾಜದವರು ಕನ್ನಡ ಕಲಿಯುತ್ತಿರುವುದರಿಂದ ಮರಾಠಿ ಶಾಲೆಗಳು ಬಂದ್ ಆಗಿವೆ ಎಂಬುದನ್ನು ಮರಾಠಿ ಅಭಿವೃದ್ಧಿ ಪ್ರಾಧಿಕಾರಕ್ಕೆ ವಿರೋಧ ಮಾಡುವವರು ಅರ್ಥಮಾಡಿಕೊಳ್ಳಬೇಕು. ನಾವು ಈ ನಾಡಿನ ಮಕ್ಕಳಾಗಿ ಹೋರಾಟಗಾರರಲ್ಲಿ ಮನವಿ ಮಾಡುತ್ತಿದ್ದೇವೆ. ಕನ್ನಡಕ್ಕೆ ಜಾತಿ ಯಾವುದು ಎಂಬುವ ಪ್ರಶ್ನೆಗೆ ಮೊದಲು ಉತ್ತರ ನೀಡಲಿ. ಮರಾಠಾ ಪ್ರಾಧಿಕಾರದಿಂದ ಅನೇಕ ಪ್ರತಿಭೆಗಳು ಹೋರಗೆ ಬರಲು ಅನುಕೂಲ ವಾಗುತ್ತದೆ ಆದ್ದರಿಂದ ಈ ವಿರೋಧವನ್ನು ನಿಲ್ಲಿಸಿ ಇದಕ್ಕೆ ಸ್ವಂದಿಸಬೇಕು ಎಂದು ಮನವಿ ಮಾಡಿದರು ‌.

ಸುಭಾಷ ಘೋರ್ಪಡೆ ಮಾತನಾಡಿ ಮರಾಠಾ ಅಭಿವೃದ್ಧಿ ಪ್ರಾಧಿಕಾರಕ್ಕೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸುತ್ತಿರುವುದು ವಿಷಾದನೀಯ ಸಂಗತಿ , ಡಿಸೆಂಬರ್ 5 ರಂದು ಕರ್ನಾಟಕ ಬಂದ್ ಕರೆ ನೀಡಿದ ವಾಟಾಳ್ ನಾಗರಾಜ ಅವರು ತಮ್ಮ ಹೋರಾಟವನ್ನು ಹಿಂದೆ ಪಡೆದು ಸಹಕರಿಸಬೇಕು ಎಂದು ಮನವಿ ಮಾಡಿದರು. ಶಿವಾಜಿ ಮಹಾರಾಜರ ಆಸ್ಥಾನದಲ್ಲಿ ಎಲ್ಲ ಸಮಾಜದ ಜನರಿದ್ದರು. ಜಾತಿಯಿಂದ ಮರಾಠಿಗರಾದರು ನಾವು ಕನ್ನಡದ ಸ್ವಾಭಿಮಾನಿಗಳು. ಮರಾಠ ಪ್ರಾಧಿಕಾರ ಎಂಇಎಸ್ ಗಾಗಿ ಮಾಡಿಲ್ಲ ಎಲ್ಲ ಮರಾಠಾ ಸಮಾಜದ ಅಭಿವೃದ್ಧಿಗೆ ಈ ಪ್ರಾಧಿಕಾರ ಮಾಡಲಾಗಿದೆ ಎಲ್ಲ ಕನ್ನಡಪರ ಮುಖಂಡರು ಸಹಕರಿಸಬೇಕು ಮನವಿ ಮಾಡಿದರು.

ನ್ಯಾಯವಾದಿ ಸುಭಾಷ ಜಾಧವ ಮಾತನಾಡಿ ಮರಾಠಾ ಸಮಾಜ ಶೈಕ್ಷಣಿಕ , ಸಾಮಾಜಿಕ , ಆರ್ಥಿಕವಾಗಿ ಬೆಳವಣಿಗೆ ಹೊಂದಲಿ ಎಂದು ಮುಖ್ಯಮಂತ್ರಿ ಅವರು ತಜ್ಞರ ಸಲಹೆ ಸೂಚನೆ ಪಡೆದು ಮರಾಠಾ ಅಭಿವೃದ್ಧಿ ಪ್ರಾಧಿಕಾರ ಮಾಡಿದ್ದಾರೆ. ನಾವು ಮರಾಠ ಸಮಾಜದರಾದರು ಸಹ ನಮ್ಮ ಜಾತಿ ಕನ್ನಡ ವಾಗಿದೆ ಎಂಬುದನ್ನು ತಿಳಿದು ಕೊಳ್ಳಬೇಕು. ಮರಾಠಾ ಸಮಾಜದ ಸಾಕಷ್ಟು ಜನರು ಸಾಂಸ್ಕೃತಿಕವಾಗಿ ಕನ್ನಡವನ್ನು ಬೆಳೆಸಿದ್ದಾರೆ. ಎಲ್ಲರೂ ಇದನ್ನು ಪ್ರೋತ್ಸಾಹಿಸಬೇಕು ಎಂದರು.

ಪ್ರೋ ಶಿವಾಜಿ ಗಾಯಕವಾಡ ಮಾತನಾಡಿ ದಿವಂಗತ ಅಂದಿನ ಮುಖ್ಯಮಂತ್ರಿ ದೇವರಾಜ ಅರಸು ಸರಕಾರ ಇದ್ದಾಗಲೇ ಮರಾಠ ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದರು. ಆದರೆ ನಮ್ಮ ಸಮಾಜದಲ್ಲಿಯ ಭಿನ್ನಾಭಿಪ್ರಾಯದಿಂದ ಅಂದು ಪ್ರಾಧಿಕಾರದ ಕನಸು ಈಡೇರಿಲ್ಲ. ಆದರೆ ಇಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಆ ಕಾರ್ಯ ಮಾಡಿದ್ದಾರೆ ಇದು ಸ್ವಾಗತಾರ್ಹ , ನಾವು ಕನ್ನಡ ಭಾಷೆಯ ವಿರೋಧಿಗಳು ಇಲ್ಲ ಎಂದು ಸ್ವಷ್ಟ ಪಡಿಸಿದರು

ಪತ್ರಿಕಾಗೋಷ್ಠಿಯಲ್ಲಿ ಸಮಾಜದ ಮುಖಂಡರುಗಳಾದ
ಪರಶುರಾಮ ಭಗತ , ಜ್ಯೋತಿಭಾ ಸುಂಭಜಿ , ದಶರಥ ಗುಡ್ಡದಮನಿ , ನ್ಯಾಯವಾದಿ ಎಂ ಎನ್ ಸಾವಂಜಿ , ವಿಜೇಂದ್ರ ಮಾಂಗಳೇಕರ ಇದ್ದರು.

Related posts: