ಘಟಪ್ರಭಾ:ಸಮಾನೆತೆಯ ಹರಿಕಾರ ಮಹಾನ ವ್ಯಕ್ತಿ ಡಾ. ಭೀಮರಾವ ಅಂಬೇಡ್ಕರ : ಚೂನಪ್ಪ ಪೂಜೇರಿ
ಸಮಾನೆತೆಯ ಹರಿಕಾರ ಮಹಾನ ವ್ಯಕ್ತಿ ಡಾ. ಭೀಮರಾವ ಅಂಬೇಡ್ಕರ : ಚೂನಪ್ಪ ಪೂಜೇರಿ
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ನ 23 :
ಸಂವಿಧಾನದ ಶಿಲ್ಪಿ ಹುಟ್ಟಿನಿಂದಲು ಸಮಾಜದ ದೀನ ದಲಿತರ ಹಾಗೂ ಹಿಂದುಳಿದವರ ಅಭಿವೃದ್ದಿಗಾಗಿ ಹೋರಾಡಿದ ಮಹಾನ ಚೈತ್ಯನ್ಯ ಸಮಾನೆತೆಯ ಹರಿಕಾರ ಮಹಾನ ವ್ಯಕ್ತಿ ಡಾ. ಭೀಮರಾವ ಅಂಬೇಡ್ಕರ ಎಂದು ರೈತ ಸಂಘದ ರಾಜ್ಯ ಸಂಚಾಲಕರಾದ ಚೂನಪ್ಪ ಪೂಜೇರಿ ಹೇಳಿದರು.
ಅವರು ಸಮೀಪದ ರಾಜಾಪೂರ ಗ್ರಾಮದ ಮಹಾನಾಯಕ ಡಾ| ಭೀಮರಾವ ಅಂಬೇಡ್ಕÀರ ಬ್ಯಾನರ ಬಿಡುಗಡೆ ಮಾಡಿ ಮಾತನಾಡಿದರು.
ಮಯೂರ ತಳವಾರ ಮಾತನಾಡಿ ಲಂಡನಿನ ಲ್ಯಾಬರಿ ಎಂಬ ಗ್ರಂಥಾಲಯದಲ್ಲಿ ದಿನಕ್ಕೆ 18 ಗಂಟೆಗಳ ಕಾಲ ಅಧ್ಯಾಯನ ಮಾಡಿ ಪದವಿ ಪಡೆದು ನಮ್ಮ ಕಷ್ಟ ದೂರ ಮಾಡಲು ದಾರಿ ಮಾಡಿಕೊಟ್ಟ ಮಹಾನ ನಾಯಕ ಅಂಬೇಡಕರ. ಎಲ್ಲಾ ಸೌಲಭ್ಯ ಇದ್ದರೂ ಇಂದಿನ ಮಕ್ಕಳು ಸರಿಯಾನಿ ಓದುವ ಕಡೆ ಗಮನ ಹರಿಸುತ್ತಿಲ್ಲಾ ಆದುದರಿಂದ ಇವರ ಆದರ್ಶಗಳು ಇಂದಿನ ಯುವ ಪಿಳಿಗೆಗೆ ಮಾದರಿಯಾಗಬೇಕು ಎಂದರು.
ಈ ಕಾರ್ಯಕ್ರಮದಲ್ಲಿ ಉತ್ತಮ ಹರಿಜನ, ದುರ್ಗಪ್ಪ ದಂಡಿನವರ, ದಶರಥ ದೊಡಮನಿ, ಶಂಕರ ಖಿಲಾರಿ, ಮಾರುತಿ ಡೊಳ್ಳಿ, ಮುರಳಿ ಬಡಿಗೇರ, ರಾಮು ಬಡಶಟ್ಟಿ, ಕೆಂಪಣ್ಣ ಮೇಟಿ ಸಿದ್ದು ಕಂಕಣವಾಡಿ, ಕಿರಣ ಶಿವಾಳೆ, ದುಂಡಪ್ಪ ದೊಡಮನಿ ಸೇರಿದಂತೆ ಡಿ.ಎಸ್.ಎಸ್. ಮುಖಂಡರು ಗ್ರಾಮಸ್ಥರು ಯುವಕರು ಇದ್ದರು.