RNI NO. KARKAN/2006/27779|Saturday, December 14, 2024
You are here: Home » breaking news » ಮೂಡಲಗಿ:ಪ್ರಸಕ್ತ ದಿನಗಳಲ್ಲಿ ನಮ್ಮ ಹಕ್ಕನ್ನು ಪಡೆಯುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ : ಡಾ. ರಾಜೇಂದ್ರ ಸಣ್ಣಕ್ಕಿ

ಮೂಡಲಗಿ:ಪ್ರಸಕ್ತ ದಿನಗಳಲ್ಲಿ ನಮ್ಮ ಹಕ್ಕನ್ನು ಪಡೆಯುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ : ಡಾ. ರಾಜೇಂದ್ರ ಸಣ್ಣಕ್ಕಿ 

ಪ್ರಸಕ್ತ ದಿನಗಳಲ್ಲಿ ನಮ್ಮ ಹಕ್ಕನ್ನು ಪಡೆಯುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ : ಡಾ. ರಾಜೇಂದ್ರ ಸಣ್ಣಕ್ಕಿ

ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ನ 25 :

 

 

ಪ್ರಸಕ್ತ ದಿನಗಳಲ್ಲಿ ನಮ್ಮ ಹಕ್ಕನ್ನು ಪಡೆಯುವದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹೋರಾಟದ ಮೂಲಕ ಸರಕಾರದ ಗಮನ ಸೆಳೆದು ಕುರುಬ ಸಮುದಾಯಕ್ಕೆ ಪರಿಶಿಷ್ಠ ಪಂಗಡ (ಎಸ್.ಟಿ) ಮೀಸಲಾತಿ ಅತ್ಯಾವಶ್ಯಕವಾಗಿದೆ ಎಂದು ಕರ್ನಾಟಕ ರಾಜ್ಯ ಎಸ್.ಟಿ ಹೋರಾಟ ಸಮೀತಿ ಕಾರ್ಯದರ್ಶಿ ಹಾಗೂ ಮಾಜಿ ಪ್ರದೇಶ ಕುರುಬರ ಸಂಘದ ರಾಜ್ಯಾಧ್ಯಕ್ಷ ಡಾ. ರಾಜೇಂದ್ರ ಸಣ್ಣಕ್ಕಿ ಹೇಳಿದರು.
ಅವರು ಪಟ್ಟಣದ ಶ್ರೀ ಶಿವಬೋಧರಂಗ ಅರ್ಬನ್ ಸೊಸೈಟಿಯಲ್ಲಿ ಜರುಗಿದ ಬಾಗಲಕೋಟೆಯಲ್ಲಿ ನಂ. 29 ರಂದು ಜರುಗುವ ಪರಿಶಿಷ್ಠ ಪಂಗಡ ಮೀಸಲಾತಿ ಹೋರಾಟ ದ ಪೂರ್ವಬಾವಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು. ರಾಜ್ಯದಲ್ಲಿರುವ ಕುರುಬ ಸಮಾಜವು ಪರಿಶಿಷ್ಠ ಪಂಗಡ ಮೀಸಲಾತಿ ಪಡೆಯುವ ಹಕ್ಕು ಹೊಂದಿದೆ. ಸಮಾಜವು ಮೂಲತಃ ಬುಡಕಟ್ಟು ಹಾಗೂ ಅಲೆಮಾರಿ ಜನಾಂಗವಾಗಿದೆ. ಶೈಕ್ಷಣಿಕವಾಗಿ, ಆರ್ಥಿಕವಾಗಿ, ಔದ್ಯೋಗಿಕವಾಗಿ ತೀರಾ ಹಿಂದೂಳಿದಿದೆ. ಯುವಕರಿಗೆ, ನೌಕರರಿಗೆ, ಉದ್ಯೋಗಿಗಳಿಗೆ, ರಾಜಕಾರಣಿಯವರಿಗೂ ಮೀಸಲಾತಿಯಿಂದಾಗಿ ಅನುಕೂಲವಾಗುತ್ತದೆ ಎಂದರು.
ಪರಿಶಿಷ್ಠ ಪಂಗಡ ಮೀಸಲಾತಿ ಪಡೆಯಲು ಮೂಲವಾಗಿ ಬೇಕಾಗುವ ಅರ್ಹತೆಗಳು ಕುರುಬ ಸಮುದಾಯ ಹೊಂದಿದೆ. ಗುಡ್ಡಗಾಡು, ಜನವಸತಿ ರಹಿತ ಪ್ರದೇಶಗಳಲ್ಲಿ ಕುರಿ ಸಾಕಾಣಿಕೆ ಇತರೆ ಕೆಲಸ ಮಾಡುತ್ತ ನಾಗರೀಕ ಸಮಾಜದಿಂದ ದೂರವಿರುತ್ತದೆ. ಆದ್ದರಿಂದ ನವೆಂಬರ 29 ರಂದು ಬಾಗಲಕೋಟೆಯಲ್ಲಿ ಜರುಗುವ ಎಸ್.ಟಿ ಮೀಸಲಾತಿ ಹೋರಟದಲ್ಲಿ ಪ್ರತಿ ಗ್ರಾಮ ಘಟಕಗಳಿಂದ ಭಾಗವಹಿಸಬೇಕು. ರಾಜ್ಯವ್ಯಾಪ್ತಿಯಲ್ಲಿ ರಾಯಚೂರ, ಕಲಬುರ್ಗಿ, ದಾವಣಗೇರಿ, ಮೈಸೂರ ಭಾಗಗಳಲ್ಲಿ ಮೀಸಲಾತಿ ಹೋರಾಟದ ಸಮಾವೇಶ ಮಾಡಲಾಗುವದು. ನಂತರದಲ್ಲಿ ಜನೇವರಿ 15 ರಿಂದ ಫೆ. 7ರವರೆಗೆ ಕಾಗಿನೆಲೆಯಿಂದÀ ಶ್ರೀಗಳ ನೇತೃತ್ವದಲ್ಲಿ ಪಕ್ಷಾತೀತವಾಗಿ ಪಾದಯಾತ್ರೆ ಮೂಲಕ ಬೆಂಗಳೂರಿನಲ್ಲಿ ಫೆ. 7 ರಂದು ಬೃಹತ್ ಸಮಾವೇಶ ನಡೆಸಲಾಗುವದು. ಸರಕಾರವು ನಮ್ಮ ಮನವಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸದಿದ್ದರೆ ರಾಜ್ಯಾದ್ಯಂತ ಉಗ್ರ ರೂಪದ ಹೋರಾಟ ಕೈಗೋಳ್ಳಲಾಗುವದು ಎಂದು ಎಚ್ಚರಿಕೆ ನೀಡಿದರು.
ನಿವೃತ್ತ ಪ್ರಾಚಾರ್ಯ ಪ್ರೋ. ಎಸ್.ಎಮ್ ಕಮದಾಳ ಮಾತನಾಡಿ, ಸಮಾಜದಲ್ಲಿ ಒಗ್ಗಟ್ಟಿನ ಅವಶ್ಯಕತೆ ಇದೆ. ಸಮುದಾಯದ ಪ್ರಗತಿಯಲ್ಲಿ ಶಿಕ್ಷಣ ಉದ್ಯೋಗ, ಸಾಮಾಜಿಕ ಪರಿಕಲ್ಪಣೆ ಅತ್ಯುಪಯುಕ್ತವಾಗಿದೆ. ನಮ್ಮ ಹಕ್ಕಾಗಿರುವ ಎಸ್.ಟಿ ಮೀಸಲಾತಿ ಉಪಯುಕ್ತವಾಗಿದೆ. ಕುರುಬ ಸಮುದಾಯದ ಪ್ರತಿಯೊಬ್ಬರು ಹೋರಾಟದಲ್ಲಿ ಪಾಲ್ಗೊಂಡು ಯಶಸ್ವಿಗೋಳಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ತಾಲೂಕಾಧ್ಯಕ್ಷ ಡಾ.ಎಸ್.ಎಸ್ ಪಾಟೀಲ ಮಾತನಾಡಿ, ಎಸ್.ಟಿ ಮೀಸಲಾತಿಯಿಂದಾಗುವ ಅನುಕೂಲಗಳು, ಸಮಾಜಕ್ಕೆ ದೊರೆಯುವ ಸೌಲಭ್ಯಗಳ ಕುರಿತು ವಿವರಿಸಿದರು.
ಪೂರ್ವಬಾವಿ ಸಭೆಯಲ್ಲಿ ಪುರಸಭೆ ಅಧ್ಯಕ್ಷ ಹನಮಂತ ಗುಡ್ಲಮನಿ, ಭೂ ನ್ಯಾಯ ಮಂಡಳಿ ಸದಸ್ಯ ಭೀಮಶಿ ಮಗದುಮ, ನಿವೃತ್ತ ಪ್ರಧಾನ ಗುರು ಕೆ.ಆರ್ ಕೊತ್ತಲ, ತಾಲೂಕಾ ಉಪಾಧ್ಯಕ್ಷ ಬಸಪ್ಪ ಸಾರಾಪೂರ, ಪ್ರಕಾಶ ಪಾಟೀಲ, ಭೀಮಶಿ ಕಾರದಗಿ, ಸಂತೋಷ ಬಸಳಿಗುಂದಿ, ಸಂಗಪ್ಪ ಸೂರಣ್ಣವರ, ಪ್ರಕಾಶ ಅಕ್ಕಡಿ, ಲಕ್ಕಪ್ಪ ಅವರಾದಿ, ಸಂತೋಷ ಕಮತಿ ಹಾಗೂ ಕುರುಬ ಸಮುದಾಯದವರು ಉಪಸ್ಥಿತರಿದ್ದರು.

Related posts: