RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಜೈಲರ್ ಅಂಬರೀಷ್ ಅವರ ಕೋರೊನಾ ಮತ್ತು ಇತರೆ ಕವಿತೆಗಳ ಕವನ ಸಂಕಲನ ಬಿಡುಗಡೆ

ಗೋಕಾಕ:ಜೈಲರ್ ಅಂಬರೀಷ್ ಅವರ ಕೋರೊನಾ ಮತ್ತು ಇತರೆ ಕವಿತೆಗಳ ಕವನ ಸಂಕಲನ ಬಿಡುಗಡೆ 

ಜೈಲರ್ ಅಂಬರೀಷ್ ಅವರ ಕೋರೊನಾ ಮತ್ತು ಇತರೆ ಕವಿತೆಗಳ ಕವನ ಸಂಕಲನ ಬಿಡುಗಡೆ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 9 :

 

ಜಗತ್ತನೇ ತಲ್ಲಣಗೊಳಿಸಿದ ಕೋರೊನಾ ಇಡೀ ಮನುಕುಲವನ್ನೇ ತನ್ನ ಕಬಂಧ ಬಾಹುಗಳಲ್ಲಿ ಬಂಧಿಸಿ, ದೈವತ್ವದ ಆಸ್ತಿತ್ವಕ್ಕೂ ಪ್ರಶ್ನೆ ಮೂಡಿಸಿದೆ ಎಂದು ಇಲ್ಲಿಯ 12ನೇ ಅಧಿಕ ಜಿಲ್ಲಾ ಹಾಗೂ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ವಿಜಯಕುಮಾರ ಎಮ್.ಎ ಅವರು ಹೇಳಿದರು.
ಬುಧವಾರದಂದು ಇಲ್ಲಿಯ ಉಪ ಕಾರಾಗೃಹದ ಆವರಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ನ್ಯಾಯವಾದಿಗಳ ಸಂಘ, ಕಾರಾಗೃಹ ಇಲಾಖೆ ಮತ್ತು ಪೋಲಿಸ್ ಇಲಾಖೆಯ ಸಹಯೋಗದಲ್ಲಿ ಹಮ್ಮಿಕೊಂಡ ಪೋಲಿಸ್-ಕಾರಾಗೃಹ ಸಿಬ್ಬಂದಿಗಳ ತರಬೇತಿ ಕಾರ್ಯಾಗಾರ, ವಿಶ್ವ ಏಡ್ಸ್ ದಿನಾಚರಣೆ, ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಹಾಗೂ ಕೋರೊನಾ ಮತ್ತು ಇತರೆ ಕವಿತೆಗಳ ಸಂಗ್ರಹದ ಕವನ ಸಂಕಲನ ಬಿಡುಗಡೆ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕೋರೊನಾ ಜಗತನ್ನು ತಲ್ಲಣಗೊಳಿಸಿ, ನಾವು ಯಾವ ರೀತಿಯಾಗಿ ಜೀವನ ಸಾಗಿಸಬೇಕೆಂದು ಕಲಿಸಿದೆ. ಅದನ್ನು ಅರಿತುಕೊಂಡು ಮುಂಜಾಗ್ರತೆಯ ಕ್ರಮಗಳನ್ನು ಚಾಚು ತಪ್ಪದೇ ಪಾಲಿಸಬೇಕು. ಕೋರೊನಾ ಮತ್ತು ಇತರೆ ಕವಿತೆಗಳ ಕವನ ಸಂಕಲನ ಕವಿಯ ಆತಂಕವನ್ನು ತೆರೆದಿಟ್ಟಿದೆಯಲ್ಲದೇ ಸಮಾಜದ ವಿಭಿನ್ನ ಚಿತ್ರಣಗಳನ್ನು ಕಟ್ಟಿಕೊಟ್ಟಿದೆ ಎಂದು ತಿಳಿಸಿದರು.
ಡಿವಾಯ್‍ಎಸ್‍ಪಿ ಜಾವೀದ್ ಇನಾಮದಾರ ಅವರು ಮಾತನಾಡಿ, ಪದಗಳ ಜೋಡಣೆ ಕಾವ್ಯವಲ್ಲ, ಬರೆದೆಲ್ಲವೂ ಕಾವ್ಯವಲ್ಲ, ಸರಳ ಭಾವ ಭಾಷೆಯ ತಮ್ಮ ಎದೆಯಾಳದ ಮಾತು ಅಕ್ಷರವಾಗಿ ಕವಿತೆಯಾಗಬೇಕು. ಸಾಹಿತ್ಯವು ಸಮಾಜದ ಪ್ರತಿಬಿಂಬದ ಜೊತೆಗೆ ಗತಿಬಿಂಬವಾಗುವ ಈ ನಿಟ್ಟಿನಲ್ಲಿ ಇಲ್ಲಿಯ ಉಪಕಾರಾಗೃಹದ ಅಧೀಕ್ಷಕರಾದ ಅಂಬರೀಷ ಪೂಜಾರಿ ಅವರು ತಮ್ಮ ಕವನ ಸಂಕಲನದಲ್ಲಿ ಎಲ್ಲವುಗಳನ್ನು ತೆರೆದಿಟ್ಟಿದ್ದಾರೆಂದು ತಿಳಿಸಿದರು.
ಮಾನವ ಹಕ್ಕುಗಳ ಕುರಿತು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಯು.ಬಿ.ಶಿಂಪಿ ಅವರ ಮಾತನಾಡಿದರೇ ಏಡ್ಸ್ ದಿನಾಚರಣೆ ಕುರಿತು ಸಾಧಿ ಸಂಸ್ಥೆಯ ಧಾರವಾಡ ವಲಯ ಯೋಜನಾ ವ್ಯವಸ್ಥಾಪಕ ವೀರಪ್ಪ ತೇಗೂರ ಉಪನ್ಯಾಸ ನೀಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಪಕಾರಾಗೃಹದ ಅಧೀಕ್ಷಕ ಅಂಬರೀಷ ಪೂಜಾರಿ ಅವರು ವಹಿಸಿದ್ದರು.
ಉಪ-ಕಾರಾಗೃಹದ ಸಹಾಯಕ ಜೈಲರ್ ಎಮ್.ಕೆ.ನೆಲಧರಿ ಸ್ವಾಗತಿಸಿದರು, ಮುಖ್ಯ ವೀಕ್ಷಕ ಶಕೀಲ ಜಕಾತಿ ನಿರೂಪಿಸಿ ವಂದಿಸಿದರು.
ಕಾರ್ಯಕ್ರಮದ ನಂತರ ಸಿಬ್ಬಂದಿಗಳಿಗೆ ಒತ್ತಡ ನಿರ್ವಹಣೆ ಮತ್ತು ಮಾನಸಿಕ ಆರೋಗ್ಯ ಕುರಿತು ಬೆಳಗಾವಿಯ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ಹಾಗೂ ಮನೋವೈದ್ಯ ಡಾ. ಸುಮಿತ ದುರ್ಗೋಜಿ ಅವರು ಪೋಲಿಸ್, ನ್ಯಾಯಾಂಗ, ಕಾರಾಗೃಹ, ಆರೋಗ್ಯ ಇಲಾಖೆಯ ಸಿಬ್ಬಂದಿಗಳಿಗೆ ಕಾರ್ಯಾಗಾರ ನಡೆಸಿದರು

Related posts: