RNI NO. KARKAN/2006/27779|Saturday, October 19, 2024
You are here: Home » breaking news » ಘಟಪ್ರಭಾ:ಫಾರ್ಮಸಿ ಕಾಲೇಜಿನ ಕನಸು ಈಗ ನನಸಾಗಿದೆ : ಡಿ ಫಾರ್ಮಸಿ ಕೋರ್ಸ ಪ್ರಾರಂಭೋತ್ಸವದಲ್ಲಿ ಬಿ.ಆರ್.ಪಾಟೀಲ ಸಂತಸ

ಘಟಪ್ರಭಾ:ಫಾರ್ಮಸಿ ಕಾಲೇಜಿನ ಕನಸು ಈಗ ನನಸಾಗಿದೆ : ಡಿ ಫಾರ್ಮಸಿ ಕೋರ್ಸ ಪ್ರಾರಂಭೋತ್ಸವದಲ್ಲಿ ಬಿ.ಆರ್.ಪಾಟೀಲ ಸಂತಸ 

ಫಾರ್ಮಸಿ ಕಾಲೇಜಿನ ಕನಸು ಈಗ ನನಸಾಗಿದೆ : ಡಿ ಫಾರ್ಮಸಿ ಕೋರ್ಸ ಪ್ರಾರಂಭೋತ್ಸವದಲ್ಲಿ ಬಿ.ಆರ್.ಪಾಟೀಲ ಸಂತಸ 
ಘಟಪ್ರಭಾ ಸೆ 7: ಇಲ್ಲಿಯ ಶ್ರೀ ಜೆ.ಜಿ.ಸಹಕಾರಿ ಆಸ್ಪತ್ರೆ ಸೊಸಾಯಿಟಿಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಸನ್. 2017-18 ಸಾಲಿನ ಫಾರ್ಮಸಿ ಕಾಲೇಜದ ಡಿ ಫಾರ್ಮಸಿ ಕೋರ್ಸಿನ ಪ್ರಾರಂಭೋತ್ಸವ ಸಮಾರಂಭ ಜರುಗಿತು.

ಸಂಸ್ಥೆ ಚೇರಮನ್ ಬಿ.ಆರ್.ಪಾಟೀಲ (ನಾಗನೂರ) ಅವರು ಜ್ಯೋತಿ ಬೆಳಗಿಸವ ಮೂಲಕ ಉದ್ಘಾಟಿಸಿ ಮಾತನಾಡಿ ನಮ್ಮ ಜೆಜಿ ಸಹಕಾರಿ ಆಸ್ಪತ್ರೆಯ ಸೊಸಾಯಿಟಿಯು ಹಲವು ವರ್ಷಗಳಿಂದ ಪ್ರಾರಂಭಿಸಲು ಪ್ರಯತ್ನಿಸುತ್ತಿರುವ ಫಾರ್ಮಸಿ ಕಾಲೇಜಿನ ಕನಸು ಈಗ ನನಸಾಗಿದೆ. ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಹಿತದೃಷ್ಠಿಯಿಂದ ಸಂಸ್ಥೆಯು ಕಾರ್ಯ ನಿರ್ವಹಿಸುತ್ತಾ ಬಂದಿದೆ. ಸಂಸ್ಥೆಯ ಅಭಿವೃದ್ದಿಗೆ ಎಲ್ಲರ ಸಹಕಾರ, ಪ್ರಯತ್ನ ಮುಖ್ಯವಾಗಿದೆ ಎಂದರು.

ವೈದ್ಯಕೀಯ ನಿರ್ದೇಶಕ ಡಾ| ಸಿ.ಎಸ್.ಬಣಕಾರ ಮಾತನಾಡಿ ಕರ್ನಾಟಕ ಸರ್ಕಾರ ಮತ್ತು ಭಾರತ ಸರ್ಕಾರ ಫಾರ್ಮಸಿ ಕೌನ್ಸಿಲ್ ಆಫ್ ನವದೆಹಲಿ ಇವರಿಂದ ಈ ಡಿ.ಫಾರ್ಮಸಿ ಮಂಜೂರಾತಿ ದೊರಕಿದೆ. ಸಂಸ್ಥೆ ಮತ್ತು ಆಡಳಿತ ಮಂಡಳಿಯ ಪರಿಶ್ರಮವೇ ಕಾರಣ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ವೈಸ್ ಚೇರಮನ್ ಎ.ಎನ್. ಕರಲಿಂಗಣ್ಣವರ. ನಿರ್ದೇಶಕರುಗಳಾದ ಸಿ.ಎ. ಕಾಡದವರ, ಎ.ಎಸ್. ಬಡಕುಂದ್ರಿ, ಆಯ್.ಆಯ್.ನೇರ್ಲಿ, ಎಸ್.ಎಸ್.ಪಾಟೀಲ, ಬಿ.ಎಮ್ ಬಂಡಿ, ಬಿ.ಎಚ್. ಇನಾಮದಾರ, ಆಯರ್ವೇದ ಮೇಡಿಕಲ್ ಕಾಲೇಜಿನ ಪ್ರಿನ್ಸಿಪಾಲ ಜೆ.ಕೆ.ಶರ್ಮಾ ಹಾಗೂ ಸಿಬ್ಬಂದಿ ಮತ್ತು ವಿದ್ಯಾರ್ಥಿ, ವಿದ್ಯಾರ್ಥಿನಿಯರು ಸೇರಿದಂತೆ ಅನೇಕರು ಇದ್ದರು. ಫಾರ್ಮಸಿ ಕಾಲೇಜಿನ ಪ್ರೀನ್ಸಿಪಾಲ ಡಾ| ವಿ.ಎ.ಕಂಗ್ರಾಲಕರ ಸ್ವಾಗತಿಸಿದರು. ಮ್ಯಾನೇಜರ ಎಲ್.ಎಸ್.ಹಿಡಕಲ್ ನಿರೂಪಿಸಿ, ವಂದಿಸಿದರು.

Related posts: