RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಕಲಾವಿದರಿಗೆ ಕೀಳರಿಮೆ ಇರಬಾರದು : ಡಾ.ಸಿ.ಕೆ ನಾವಲಗಿ ಅಭಿಮತ

ಗೋಕಾಕ:ಕಲಾವಿದರಿಗೆ ಕೀಳರಿಮೆ ಇರಬಾರದು : ಡಾ.ಸಿ.ಕೆ ನಾವಲಗಿ ಅಭಿಮತ 

ಕಲಾವಿದರಿಗೆ ಕೀಳರಿಮೆ ಇರಬಾರದು : ಡಾ.ಸಿ.ಕೆ ನಾವಲಗಿ ಅಭಿಮತ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 16 :

 

ಜಾನಪದ ಕಲೆ ಶ್ರೀಮಂತಿಕೆಯಿಂದ ಕೂಡಿದ್ದು, ಕಲಾವಿದರಲ್ಲಿ ಮೇಲು ಕೀಳಿಲ್ಲ ಹಾಗೂ ಕಲಾವಿದರಿಗೆ ಕೀಳರಿಮೆ ಇರಬಾರದು ಎಂದು ಜಾನಪದ ವಿದ್ವಾಂಸ ಹಾಗೂ ಕರ್ನಾಟಕ ಜಾನಪದ ಪರಿಷತ್ತು ಬೆಳಗಾವಿ ಜಿಲ್ಲಾ ಅದ್ಯಕ್ಷ ಡಾ. ಸಿ, ಕೆ, ನಾವಲಗಿ ಹೇಳಿದರು.

ಬುಧವಾರದಂದು ನಗರದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದಲ್ಲಿ ಕರ್ನಾಟಕ ಜಾನಪದ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕ್ರತೆ ಅರಭಾವಿಯ ಕೆಂಪವ್ವಾ ಹರಿಜನ ಅವರ ಅಭಿನಂದನ ಸಮಾರಂಭದ ಅದ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು

ಜಾನಪದ ಕಲಾವಿದರ ಬದುಕು ವಿಷಯ ಕುರಿತು ಕರ್ನಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಜಯಾನಂದ ಮಾದರ ಉಪನ್ಯಾಸ ನೀಡಿದರು.

ಗೋಕಾಕ ತಾಲೂಕಾ ಕರ್ನಾಟಕ ಜಾನಪದ ಪರಿಷತ್ತು ಬೆಳಗಾವಿ ಅಧ್ಯಕ್ಷ ಮಲ್ಲಿಕಾರ್ಜುನ ಈಟಿ ಹಾಗೂ ಹಿರಿಯ ಮಕ್ಕಳ ಸಾಹಿತಿ ಲಕ್ಷ್ಮಣ ಚೌರಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಶಿಂಗಳಾಪುರದ ಕಲಾವತಿ ಚೌಗಲಾ ಹಾಗೂ ಸಂಗಡಿಗರಿಂದ ಸಂಪ್ರದಾಯ ಪದಗಳು ಜರುಗಿದವು. ಇದೇ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ರಕ್ಷಣ ಸೇನೆ, ಗೋಕಾಕ ಗೆಳೆಯರ ಬಳಗ ಹಾಗೂ ಸಿದ್ದಾರ್ಥ ಪೈನ್ ಆರ್ಟ ಕಾಲೇಜ ಸಿಬ್ಬಂದಿ ಬಳಗದವರಿಂದ ಕೆಂಪವ್ವಾ ಹರಿಜನ ಅವರನ್ನು ಸತ್ಕರಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಶಿವಲಿಂಗಪ್ಪಬಾಗೇವಾಡಿ, ಕೆಂಪಣ್ಣಾ ಅಂಬಿ, ಹೊನ್ನಪ್ಪಾ ಗೊರವ ,ಜೆ, ಕೆ ಕಾಡೇಶಕುಮಾರ , ವಿದ್ಯಾ ರಡ್ಡಿ , ಲಕ್ಷಣ ಸೊಂಟಕ್ಕಿ , ವಿನೂತಾ ನಾವಲಗಿ ರತ್ನವ್ವಾ ಹರಿಜನ ಹಾಗೂ ಚಿತ್ರಕಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಹಿರಿಯ ಕಲಾವಿದ ಈಶ್ವರಚಂದ್ರ ಬೆಟಗೇರಿ ಸ್ವಾಗತಿಸಿ ನಿರೂಪಿಸಿದರು, ಆನಂದ ಸೋರಗಾವಿ ವಂದಿಸಿದರು

Related posts: