RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿ : ಡಾ.ಪ್ರಭಾಕರ ಕೋರೆ ಆಗ್ರಹ

ಗೋಕಾಕ:ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿ : ಡಾ.ಪ್ರಭಾಕರ ಕೋರೆ ಆಗ್ರಹ 

ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಿ : ಡಾ.ಪ್ರಭಾಕರ ಕೋರೆ ಆಗ್ರಹ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 19 :

 
ಶೈಕ್ಷಣಿಕವಾಗಿ ಹಿಂದುಳಿದ ವೀರಶೈವ ಲಿಂಗಾಯತ ಸಮುದಾಯವನ್ನು ಹಿಂದುಳಿದ ವರ್ಗಗಳಿಗೆ ಸೇರಿಸಬೇಕೆಂದು ಮಾಜಿ ರಾಜ್ಯಸಭಾ ಸದಸ್ಯ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಭಾಕರ ಕೋರೆ ಹೇಳಿದರು.

ಶನಿವಾರದಂದು ನಗರದ ಕೆಎಲ್ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕ ಹಾಗೂ ಗೋಕಾಕ ತಾಲೂಕು ಘಟಕದ ಸಂಯುಕ್ತಾಶ್ರಯದಲ್ಲಿ ಎಸ್.ಎಸ್.ಎಲ್.ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೊರಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಸತ್ಕರಿಸಿ ಅವರು ಮಾತನಾಡುತ್ತಿದ್ದರು.

ಸಮುದಾಯದ ವಿದ್ಯಾರ್ಥಿಗಳು ಐಎಎಸ್ ,ಕೆಎಎಸ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆದರು ಸಹ ಹುದ್ದೆಯಿಂದ ವಂಚಿತರಾಗುತ್ತಿದ್ದಾರೆ . ಆದ್ದರಿಂದ ವೀರಶೈವ ಸಮಾಜವನ್ನು ಹಿಂದುಳಿದ ಸಮಾಜವೆಂದು ಘೋಷಿಸಲು ಮುಖ್ಯಮಂತ್ರಿ ಯಡಿಯೂರಪ್ಪ ಕ್ರಮ ಕೈಗೋಳಬೇಕು. ಶೈಕ್ಷಣಿಕವಾಗಿ ವಂಚಿತರಾಗಿದ್ದ ಅಂದಿನ ಸಮಾಜದ ಮುಖಂಡರು ಶಿಕ್ಷಣದ ಮಹತ್ವವನ್ನು ಅರಿತು ನೂರು ವರ್ಷಗಳ ಹಿಂದೆ ಕೆಎಲ್ಇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸದ್ದರು ಆ ಸಂಸ್ಥೆ ಇಂದು ಹೆಮ್ಮರವಾಗಿ ಬೆಳೆದು ದೇಶ ಮತ್ತು ವಿದೇಶಗಳಲ್ಲಿ ಶಿಕ್ಷಣ ನೀಡುತ್ತಿದ್ದೆ. ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ ಶಿಕ್ಷಣ ಕೊಡಿಸುವ ಕಾರ್ಯ ಸಮಾಜದ ಮುಖಂಡರು ಮಾಡಬೇಕು. ಪ್ರಸ್ತುತ ದಿನಮಾನದಲ್ಲಿ ಶಿಕ್ಷಣ ಅತ್ಯಾವಶ್ಯಕವಾಗಿದ್ದು, ಶಿಕ್ಷಣದ ಮಹತ್ವವನ್ನು ಅರಿತು ನಾವಿಂದು ಬದುಕಬೇಕಾಗಿದೆ. ವೀರಶೈವ ಸಮುದಾಯದ ಶೇಕಡಾ 35 ರಿಂದ 36 ಪ್ರತಿಶತ ಜನರು ಇನ್ನೂ ಸಹ ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇದನ್ನು ಅರಿತು ಮುಖಂಡರು ಕಾರ್ಯ ಮಾಡಬೇಕು. ವೀರಶೈವ ವಿದ್ಯಾರ್ಥಿನೀಯರಿಗಾಗಿ ಬೆಳಗಾವಿಯಲ್ಲಿ 1 ಎಕರೆ ಪ್ರದೇಶದಲ್ಲಿ ಉಚಿತ ಊಟ ಮತ್ತು ವಸತಿ ನಿಲಯವನ್ನು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಮುಂದಿನ ದಿನಗಳಲ್ಲಿ ಅದನ್ನು ಪ್ರಾರಂಭಿಸಿ ವೀರಶೈವ ವಿದ್ಯಾರ್ಥಿನೀಯರು ಶೈಕ್ಷಣಿಕವಾಗಿ ಮುಂದೆ ಬರಲು ಪ್ರೇರೆಪಿಸಲಾಗುವುದು ಎಂದ ಪ್ರಭಾಕರ ಕೋರೆ ಅವರು ಎಂಬಿಬಿಎಸ್, ಇಂಜಿನಿಯರಿಂಗ್ ಕೋರ್ಸಗಳ ಜೊತೆಗೆ
ವೃತ್ತಿಪರ ಕೋರ್ಸ ಗಳ ಬಗ್ಗೆ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ಮಾಡಿ ಸಮಾಜವನ್ನು ಉತ್ತಂಗಕ್ಕೆ ಏರಿಸಲು ಶ್ರಮಿಸಬೇಕಾಗಿದೆ. ಬಾಲ್ಯ ವಿವಾಹದಂತಹ ಅನಿಷ್ಟ ಪದ್ದತಿಗಳು ಇಂದಿಗೂ ವೀರಶೈವ ಜನರಲ್ಲಿ ಬೇರುರಿರುವದು ನಮ್ಮ ದೌರ್ಭಾಗ್ಯ . ಇಂತಹ ಅನಿಷ್ಟ ಮೂಢನಂಬಿಕೆಗಳಿಂದ ಹೊರಬಂದು ಸಮಾಜವನ್ನು ಗಟ್ಟಿ ಗೋಳಿಸಬೇಕು.ಒಂದು ಹೆಣ್ಣು ಮಗಳು ಶಿಕ್ಷಣ ಪಡೆದರೆ ಇಡೀ ಕುಟುಂಬವನ್ನು ಸುಶಿಕ್ಷಿತರನ್ನಾಗಿ ಮಾಡುತ್ತಾಳೆ ಈ ನೈಜತೆಯನ್ನು ಅರಿತು ನಾವು ಹೆಣ್ಣು ಮಕ್ಕಳಿಗೆ ಶಿಕ್ಷಣ ಕೊಡಿಸಲು ಮುಂದಾಗಬೇಕಾಗಿದೆ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅರುಣಾದೇವಿ ಎಸ್.ವಾಯ್ ವಿಧ್ಯೆ ಇಲ್ಲದ ಜೀವನ ಜೈಲು ಇದ್ದಂತೆ ಒಂದು ಶಿಕ್ಷಣ ಸಂಸ್ಥೆಯನ್ನು ತೆರೆದರೆ ಒಂದು ಜೈಲ್ಲನ್ನು ಮುಚ್ಚಿದಂತೆ. ಆ ನಿಟ್ಟಿನಲ್ಲಿ ದೇಶ ,ವಿದೇಶದಲ್ಲಿ ಕೆಎಲ್ಇ ಸಂಸ್ಥೆ ಇಂದು ಕಾರ್ಯ ಮಾಡುತ್ತಿದೆ ಇದು ಇಡೀ ದೇಶಕ್ಕೆ ಮಾದರಿಯಾಗಿದೆ. ಶಿಕ್ಷಣ ಪಡೆಯುವ ಭರದಲ್ಲಿ ವಿದ್ಯಾರ್ಥಿಗಳು ಧರ್ಮವನ್ನು ಮರೆಯದೆ ಬಸವಣ್ಣವರ ತತ್ವಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕು ಆಗ ಮಾತ್ರ ಸಮಾಜಕ್ಕೆ ಏನಾದರೂ ಮಾಡಲು ಸಾಧ್ಯ . ಶಿಕ್ಷಣದ ಜೊತೆಗೆ ಸಮಾಜವನ್ನು ಕಟ್ಟುವ ಕಾರ್ಯ ನಾವೆಲ್ಲರೂ ಮಾಡಬೇಕು ಎಂದರು.

ಜಯಾನಂದ ಮುನವಳ್ಳಿ ಮಾತನಾಡಿ ಎಸ್.ಎಸ್. ಎಲ್.ಸಿ ಹಾಗೂ ಪಿಯುಸಿಯಲ್ಲಿ 90% ಕ್ಕೂ ಹೆಚ್ಚು ವೀರಶೈವ ಲಿಂಗಾಯತ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿ ವರ್ಷ ಪುರಸ್ಕರಿಸಿ ಗೌರವಿಸುವುದರ ಜೊತೆಗೆ ವೀರಶೈವ ಮಹಾಸಭಾ ವತಿಯಿಂದ ಬೃಹತ್ ಉಚಿತ ಆರೋಗ್ಯ ಶಿಬಿರ ಹಾಗೂ ಸಾಮೂಹಿಕ ವಿವಾಹಗಳನ್ನು ಮಾಡುವ ಯೋಜನೆ ಹಮ್ಮಿಕೊಳ್ಳಲಾಗುವುದು ಎಲ್ಲರೂ ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಮನವಿ ಮಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ವಹಿಸಿದ ಗದುಗಿನ ಶಿವಾನಂದ ಬೃಹನ್ಮಠದ ಜಗದ್ಗುರು ಶ್ರೀ ಸದಾಶಿವಾನಂದಭಾರತಿ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡಾ 90% ರಷ್ಟು ಅಂಕ ಪಡೆದು ಉತ್ತಮ ಸಾಧನೆ ತೋರಿದ 110 ವಿದ್ಯಾರ್ಥಿಗಳನ್ನು ಸತ್ಕರಿಸಿ ಗೌರವಿಸಲಾಯಿತಲ್ಲದೆ ಪಿಯುಸಿಯಲ್ಲಿ ವ್ಯಾಸಂಗ ಮಾಡುವ ತಾಲೂಕಿನ ಎಲ್ಲ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ಕೆಎಲ್ಇ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿ ಸುಸಜ್ಜಿತ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಲಾಯಿತು.
ಅಧ್ಯಕ್ಷೆತೆಯನ್ನು ಜಿಲ್ಲಾ ಘಟಕದ ಅಧ್ಯಕ್ಷೆ ಶರಣೆ ರತ್ನಪ್ರಭಾ ಬೆಲ್ಲದ ವಹಿಸಿದ್ದರು.ಮಹಾಂತೇಶ ತಾಂವಶಿ ಸ್ವಾಗತಿಸಿದರು, ಸೋಮಶೇಖರ್ ಮಗದುಮ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.

ವೇದಿಕೆಯಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ,ಚೇತನ ಅಂಗಡಿ, ಜ್ಯೋತಿ ಭಾವಿಕಟ್ಟಿ , ಗುಳಪ್ಪ ಹೋಸಮನಿ, ವಿರಪಾಕ್ಷಪ್ಪ ಯಮಕನಮರಡಿ ಉಪಸ್ಥಿತರಿದ್ದರು.

Related posts: