ಗೋಕಾಕ:ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಸಂಗೀತವು ಮಹತ್ವದ ಪಾತ್ರ ವಹಿಸುತ್ತಿದೆ : ಅರುಣಾದೇವಿ ಎಸ್.ವಾಯ್
ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಸಂಗೀತವು ಮಹತ್ವದ ಪಾತ್ರ ವಹಿಸುತ್ತಿದೆ : ಅರುಣಾದೇವಿ ಎಸ್.ವಾಯ್
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 21 :
ಆಧ್ಯಾತ್ಮಿಕ ಜಾಗೃತಿ ಮೂಡಿಸುವಲ್ಲಿ ಸಂಗೀತವು ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ಅರುಣಾದೇವಿ ಎಸ್.ವಾಯ್ ಹೇಳಿದರು
ಇತ್ತೀಚೆಗೆ ನಗರದ ಕೆಎಲ್ಇ ಶಾಲಾ ಆವರಣದಲ್ಲಿ ಅಖಿಲ ಕರ್ನಾಟಕ ಗಾನಯೋಗಿ ಸಂಗೀತ ಪರಿಷತ್ತಿನ ಗೋಕಾಕ ತಾಲೂಕಾ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು
ಭಾರತೀಯ ಸಂಸ್ಕೃತಿಯಲ್ಲಿ ಸಂಗೀತ ಆಧ್ಯಾತ್ಮಿಕದ ಒಂದು ಭಾಗವಾಗಿದ್ದು, ಸಂಗೀತದ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶಗಳನ್ನು ಶರಣರು , ಸಂತರು ನೀಡಿದ್ದಾರೆ. ಈ ವೇದಿಕೆಯ ಮೂಲಕ ಧಾರ್ಮಿಕ ಜಾಗೃತಿ ಮೂಡಿಸುವದರೊಂದಿಗೆ ಉತ್ತಮ ಸಂಗೀತಗಾರರನ್ನು ರೂಪಿಸಿ ನಾಡಿಗೆ ಕೊಡುಗೆಯಾಗಿ ನೀಡುವಂತೆ ಕರೆ ನೀಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಗದುಗಿನ ಶ್ರೀ ಸದಾನಂದಭಾರತಿ ಮಹಾಸ್ವಾಮಿಗಳು ವಹಿಸಿದ್ದರು.
ವೇದಿಕೆಯ ಮೇಲೆ ಅಖಿಲ ಭಾರತ ವೀರಶೈವ ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪ್ರಭಾಕರ ಕೋರೆ, ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ, ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿ ಭಾವಿಕಟ್ಟಿ, ಯುವ ಘಟಕದ ಜಿಲ್ಲಾಧ್ಯಕ್ಷ ಚೇತನ ಅಂಗಡಿ , ತಾಲೂಕಾ ಘಟಕದ ಗೌರವಾಧ್ಯಕ್ಷ ಜಯಾನಂದ ಮುನವಳ್ಳಿ, ಅಧ್ಯಕ್ಷ ಸೋಮಶೇಖರ್ ಮಗದುಮ್ಮ , ಪರಿಷತ್ತಿನ ಅಧ್ಯಕ್ಷೆ ವಿದ್ಯಾ ಮಗದುಮ್ಮ ,ಕಾರ್ಯದರ್ಶಿ ಜಯಾ ಕಮತ, ಕಸಾಪಾ ಅಧ್ಯಕ್ಷ ಮಹಾಂತೇಶ ತಾಂವಶಿ ಇದ್ದರು.