RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕಾಂಗ್ರೆಸ ಪಕ್ಷ ತನ್ನದೇ ಆದ ಇತಿಹಾಸ ಹೊಂದಿದ್ದೆ : ಶಾಸಕ ಸತೀಶ

ಗೋಕಾಕ:ಕಾಂಗ್ರೆಸ ಪಕ್ಷ ತನ್ನದೇ ಆದ ಇತಿಹಾಸ ಹೊಂದಿದ್ದೆ : ಶಾಸಕ ಸತೀಶ 

ಕಾಂಗ್ರೆಸ ಪಕ್ಷ ತನ್ನದೇ ಆದ ಇತಿಹಾಸ ಹೊಂದಿದ್ದೆ : ಶಾಸಕ ಸತೀಶ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ.28-

 
ಕಾಂಗ್ರೆಸ ಪಕ್ಷ ತನ್ನದೇ ಆದ ಇತಿಹಾಸ ಹೊಂದಿದ್ದು ಅದನ್ನು ಇಂದಿನ ಯುವಪೀಳಿಗೆಗೆ ತಿಳಿಸುವ ಕಾರ್ಯ ಆಗಬೇಕಾಗಿದೆ ಎಂದು ಶಾಸಕ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು.
ಅವರು ಸೋಮವಾರದಂದು ತಮ್ಮ ಕಚೇರಿ ಹಿಲ್ ಗಾರ್ಡನ್‍ದಲ್ಲಿ 136ನೇ ಕಾಂಗ್ರೆಸ ಸಂಸ್ಥಾಪನಾ ದಿನಾಚರಣೆ ಅಂಗವಾಗಿ ಗೋಕಾಕ ಮತಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡುತ್ತಿದ್ದರು.
ದೇಶಕ್ಕೆ ಸ್ವಾತಂತ್ರ್ಯ ದೊರೆಯಬೇಕು ಎಂದು 1885ರಲ್ಲಿ ಕಾಂಗ್ರೆಸವನ್ನು ಸ್ಥಾಪಿಸಲಾಯಿತು. ಅದರ ಮೂಲ ಉದ್ದೇಶ ಅಹಿಂಸಾತ್ಮಕ ಹೋರಾಟದಿಂದ ದೇಶಕ್ಕೆ ಸ್ವಾತಂತ್ರ್ಯ ದೊರೆಯಬೇಕೆಂಬ ಉದ್ದೇಶ ಹೊಂದಲಾಗಿತ್ತು. ದೇಶಕ್ಕೆ ಸ್ವಾತಂತ್ರ್ಯ ದೊರಕಿದ ನಂತರ ಅಭಿವೃದ್ಧಿಯೇ ಅದರ ಮುಖ್ಯ ಉದ್ದೇಶವಾಯಿತು. ದೇಶದಲ್ಲಿ ಕಾಂಗ್ರೆಸ ಸರಕಾರ ರಚನೆಯಾದ ಬಳಿಕ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದವು. ದೇಶಕ್ಕೆ ಸಮಾನತೆ ನೀಡುವ ಸಂವಿಧಾನ ರಚನೆ, ಬೃಹತ್ ಆಣೆಕಟ್ಟುಗಳ ನಿರ್ಮಾಣ, ಭಾರತೀಯ ಸೇನೆಯ ಅಧುನೀಕರಣ, ಸಾರ್ವಜನಿಕ ಕ್ಷೇತ್ರಗಳಲ್ಲಿ ಉದ್ದಿಮೆ ಸ್ಥಾಪನೆ, ಕಾಲೇಜುಗಳ ಸ್ಥಾಪನೆ, ವಿಶ್ವವಿದ್ಯಾಲಯಗಳ ಸ್ಥಾಪನೆ ಸೇರಿದಂತೆ ಅನೇಕ ಅಭಿವೃದ್ಧಿ ಕಾರ್ಯಗಳು ದೇಶದ ಪ್ರಥಮ ಪ್ರಧಾನಿ ಜವಾಹರಲಾಲ ನೆಹರೂ ಅವರ ಆಡಳಿತದಲ್ಲಿ ನಡೆದವು. ಅದರ ನಂತರ ಕೂಡಾ ಕಾಂಗ್ರೆಸ ಆಢಳಿತದಲ್ಲಿ ದೇಶದ ಅಭಿವೃದ್ಧಿ ಕಾರ್ಯಗಳು ನಡೆದವು. ಆದರೆ ಕೇಂದ್ರದಲ್ಲಿ ಬಿಜೆಪಿ ಸರಕಾರ ಬಂದ ಕೂಡಲೇ ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದ್ದು ದುರ್ದೈವ. ಕಾಂಗ್ರೆಸ್ಸಿಗರು 70 ವರ್ಷಗಳಲ್ಲಿ ಏನೂ ಮಾಡಿಲ್ಲ ಎಂದು ಬಿಜೆಪಿ ಹೇಳುತ್ತ 7 ವರ್ಷಗಳಲ್ಲಿ ಇಡೀ ವ್ಯವಸ್ಥೆಯನ್ನೇ ಹಾಳು ಮಾಡಿ ಸಾರ್ವಜನಿಕ ಕ್ಷೇತ್ರಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ.
ದೇಶ ಭಕ್ತಿ ಬಗ್ಗೆ ದೊಡ್ಡದಾಗಿ ಮಾತನಾಡುವ ಬಿಜೆಪಿಯ ಯಾವ ಮುಖಂಡನೂ ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗವಹಿಸಿಲ್ಲ. ಈಗ ಬಂದು ದೇಶಭಕ್ತಿ ಮಾತನಾಡುವದು ಹಾಸ್ವಾಸ್ಪದ ಎಂದ ಸತೀಶ ಜಾರಕಿಹೊಳಿ ಅವರು ಸರ್ಜಿಕಲ್ ಸ್ಟ್ರಾಯಿಕ, ಗೋಹತ್ಯೆ ನಿಷೇಧ, ಲವ್ ಜೆಹಾದ್ ಎಂದು ಹೇಳುತ್ತ ಜನರನ್ನು ಮೋಸ ಮಾಡಿ ಯುವರನ್ನು ದಾರಿ ತಪ್ಪಿಸುತ್ತಿದ್ದಾರೆ.
ಕಪ್ಪು ಹಣದ ನೆಪದಲ್ಲಿ ನೋಟು ರದ್ದತಿ ಮಾಡಿ ದೇಶದ ಜನತೆಯನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಕೊರೋನಾ ಹೆಸರಿನಲ್ಲಿ ರೈಲು ಸ್ಥಗಿತಗೊಳಿಸಿದ್ದರೂ ಈಗ ಎಲ್ಲವೂ ಪ್ರಾರಂಭವಾದರೂ ರೈಲುಗಳ ಸಂಚಾರ ಪುನರಾರಂಭಿಸಿಲ್ಲ. ಈಗ ರೈಲು ಬಂದ್ ಮಾಡಿ ಅದು ಹಾನಿಯಲ್ಲಿದೆ ಎಂದು ಹೇಳಿ ಖಾಸಗಿ ಬಂಡವಾಳಶಾಹಿಗಳಿಗೆ ಮಾರಾಟ ಮಾಡಲು ಯತ್ನಿಸುತ್ತಿದ್ದಾರೆಂದು ಶಾಸಕ ಸತೀಶ ಜಾರಕಿಹೊಳಿ ಆರೋಪಿಸಿದರು.
ಬಡವರು ಬಡವರಾಗಿಯೇ ಉಳಿಯಬೇಕೆಂಬ ಹಿಡನ್ ಅಜೆಂಡಾ ಹೊಂದಿರುವ ಬಿಜೆಪಿ ಬಂಡವಾಳ ಶಾಹಿಗಳ “ರಾಯಭಾರಿ’’ಯಂತೆ ಕೆಲಸ ಮಾಡುತ್ತಿದೆ ಎಂದೂ ಅವರು ಆರೋಪಿಸಿದರು.
ರಾಹುಲ ಜಾರಕಿಹೊಳಿ, ಪ್ರಿಯಾಂಕಾ ಜಾರಕಿಹೊಳಿ, ಕಾಂಗ್ರೆಸ ಗ್ರಾಮೀಣ ಘಟಕದ ಅಧ್ಯಕ್ಷ ಪ್ರಕಾಶ ಡಾಂಗೆ, ಬಸನಗೌಡ ಹೊಳೆಯಾಚಿ, ಶಂಕರ ಗಿಡ್ನವರ, ಬಾಲಾಜಿ ಸಾವಳಗಿ, ಪರಸಪ್ಪ ಚೂನನ್ನವರ, ಇಮ್ರಾನ ತಪಕೀರ, ಅಜ್ಜಪ್ಪ ಕರನಿಂಗ ಸೇರಿದಂತೆ ಕ್ಷೇತ್ರದಿಂದ ಬಂದ ಕಾರ್ಯಕರ್ತರು ಇದ್ದರು.
ಇದೇ ಸಂದರ್ಭದಲ್ಲಿ ಸಂವಿಧಾನ ಘೋಷಣೆ ಪ್ರತಿಜ್ಞಾವಿಧಿ ಬೋಧಿಸಲಾಯಿತು.
ನ್ಯಾಯವಾದಿ ಬಿ.ಕೆ.ಕಂಟಿಕಾರ ಸ್ವಾಗತಿಸಿದರು. ವಿವೇಕ ಜತ್ತಿ ನಿರೂಪಿಸಿ, ವಂದಿಸಿದರು.

Related posts: