ಗೋಕಾಕ:ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ : ಸಚಿವ ರಮೇಶ
ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ : ಸಚಿವ ರಮೇಶ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 3 :
ನಾನು ಮನಸ್ಸು ಮಾಡಿದರೆ 24 ತಾಸನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿ ಕ್ಷೇತ್ರಗಳು ಬಿಜೆಪಿ ತಕ್ಕೆಗೆ ತೆಗೆದುಕೊಳ್ಳಬಹುದು ಎಂದು ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಹೇಳಿದರು
ರವಿವಾರದಂದು ನಗರದ ಸಚಿವರ ಕಾರ್ಯಾಲಯದ ಆವರಣದಲ್ಲಿ ಭಾರತೀಯ ಜನತಾ ಪಾರ್ಟಿ ಗೋಕಾಕ ಮತಕ್ಷೇತ್ರದಿಂದ ನೂತನವಾಗಿ ಆಯ್ಕೆಯಾದ ಗ್ರಾಮ ಪಂಚಾಯತ ಸದಸ್ಯರಿಗೆ ಹಮ್ಮಿಕೊಂಡ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪಕ್ಷದಲ್ಲಿಯ ಕಾರ್ಯಕರ್ತರಲ್ಲಿಯ ಗೊಂದಲದಿಂದ ಚಿಕ್ಕೋಡಿ ಹಾಗೂ ನಿಪ್ಪಾಣಿಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿರಬಹುದು. ಕಾಂಗ್ರೆಸಿಗರು ಇದನ್ನೇ ದೊಡ್ಡ ಸಾಧನೆ ಎಂದು ಬಿಗಬಾರದು ನಾನು ಮನಸ್ಸು ಮಾಡಿದರೆ 24 ತಾಸಿನಲ್ಲಿ ಚಿಕ್ಕೋಡಿ ಮತ್ತು ನಿಪ್ಪಾಣಿಗಳನ್ನು ಬಿಜೆಪಿ ತೆಕ್ಕೆಗೆ ತಗೆದುಕೊಳ್ಳಬಹುದು ದೈರ್ಯಮಾಡಿ ಗಟ್ಟಿಯಾಗಿ ಬಿಜೆಪಿ ಪಕ್ಷ ಸೇರಿದ್ದೇನೆ
ನನ್ನ ಧೈರ್ಯವನ್ನು ಮೆಚ್ಚಿ ಕಾಂಗ್ರೆಸ್ ನಾಯಕರೆ ನನ್ನ ಕಾರ್ಯವನ್ನು ಅಭಿನಂದಿಸುತ್ತಿದ್ದಾರೆ.
ಸತತ 4 ನೇ ಬಾರಿ ಗೋಕಾಕ ಕ್ಷೇತ್ರದ ಎಲ್ಲ ಪಂಚಾಯಿತಿಗಳು ನಮ್ಮ ತೆಕ್ಕೆಗೆ ಬಂದಿವೆ. ಜಾರಕಿಹೊಳಿ ಕುಟುಂಬದ ಮೇಲೆ ಅಭಿಮಾನ ವಿಟ್ಟು ಕ್ಷೇತ್ರದ ಜನರು ಆರ್ಶಿವಾದ ಮಾಡುತ್ತಿರುವುದರಿಂದ ಇಂದು ನಾನು ಇಷ್ಟುದೊಡ್ಡ ನಾಯಕನಾಗಿ ಬೆಳೆಯಲು ಸಾಧ್ಯವಾಗಿದೆ.ಅಧಿಕಾರದ ಆಸೆಗಾಗಿ ನಾನು ಬಿಜೆಪಿ ಪಕ್ಷ ಸೇರಿಲ್ಲ ಅಭಿವೃದ್ಧಿಯ ಸಲುವಾಗಿ ಬಿಜೆಪಿ ಪಕ್ಷ ಸೇರಿದ್ದೇನೆ. ಮೊದಲಿನಿಂದಲೂ ಗೋಕಾಕ ಮತಕ್ಷೇತ್ರದಲ್ಲಿ ಜಾತಿ ಭೇದಭಾವ ಇಲ್ಲದೆ ಅಭಿವೃದ್ಧಿ ಮಾಡಲಾಗುತ್ತಿದೆ. ಚುನಾವಣೆಯಲ್ಲಿ ಸೋತ ಹಾಗೂ ಗೆದ್ದ ಅಭ್ಯರ್ಥಿಗಳು ನಮ್ಮವರೆ. ಮುಂದಿನ ದಿನಗಳಲ್ಲಿ ಸೋತು ಮತ್ತು ಗೆದ್ದ ಅಭ್ಯರ್ಥಿಗಳು ಪರಸ್ಪರ ಪ್ರೀತಿ ವಾತ್ಸಲ್ಯದಿಂದ ಬಾಳಬೇಕು.
ಒಳ್ಳೆಯ ಅಭ್ಯರ್ಥಿಗಳು ಆಯ್ಕೆಯಾಗಿ ಬರಬೇಕು ಎಂಬ ಉದ್ದೇಶದಿಂದ ಈ ಬಾರಿಯ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅವಿರೋಧ ಆಯ್ಕೆ ಮಾಡದೆ ಚುನಾವಣೆ ಸ್ವರ್ಧಿಸಲು ಅವಕಾಶ ಮಾಡಿಕೊಟ್ಟಿದ್ದು, ಮನಸ್ಸು ಮಾಡಿದರೆ ಎಲ್ಲ ಪಂಚಾಯಿತಿಗಳಿಗೆ ಅವಿರೋಧ ಆಯ್ಕೆ ಮಾಡಬಹುದಿತ್ತು ಎಂದು ಹೇಳಿದರು .
ಅಮಿತ ಶಾ ಅವರ ತತ್ವಾದರ್ಶಗಳನ್ನು ಮನಗಂಡು ನಾನು ಬಿಜೆಪಿ ಪಕ್ಷ ಸೇರಿದ್ದೇನೆ ಅಂತಹ ಧೀಮಂತ ನಾಯಕ ಬರುವ ಜ 16 ರಂದು ಬೆಳಗಾವಿಗೆ ಆಗಮಿಸುತ್ತಿದ್ದಾರೆ. ಅಂದು ಕನಿಷ್ಠವೆಂದರೆ 2 ಲಕ್ಷ ಜನ ಸೇರಿ ಜನತಾ ಪಕ್ಷದ ಶಕ್ತಿ ತೋರಿಸಬೇಕು ಎಂದು ಸಚಿವರ ಮನವಿ ಮಾಡಿಕೊಂಡರು .
ಮಂತ್ರಿ ಮತ್ತು ಶಾಸಕ ಮಾಡದ ಕಾರ್ಯ ಪಂಚಾಯಿತಿ ಸದಸ್ಯರು ಮಾಡಬಹುದು. ಸರಕಾರದ ಅನುದಾನ ನೇರವಾಗಿ ಬರುತ್ತದೆ ಅದನ್ನು ಸದುಪಯೋಗ ಪಡೆಸಿಕೊಂಡು ಗ್ರಾಮಗಳ ಅಭಿವೃದ್ಧಿ ಮಾಡಬೇಕು ಎಂದು ಕರೆ ನೀಡಿದ್ದಾರೆ.
ಬೆಳಗಾವಿ ಲೋಕಸಭೆ ಉಪ ಚುನಾವಣೆಯಲ್ಲಿ ಮಂಗಳಾ ಅಂಗಡಿಗೆ ಟಿಕೆಟ್ ನೀಡಬೇಕು ಎನ್ನುವುದು ನನ್ನ ವಯಕ್ತಿಕ ಅಭಿಪ್ರಾಯ ಆದರೆ ವರಿಷ್ಠರ ಯಾರಿಗೆ ಟಿಕೆಟ್ ನೀಡುತ್ತಾರೆ ಅವರ ಪರವಾಗಿ ಲೋಕಸಭೆ ಉಪ ಚುನಾವಣೆಯಲ್ಲಿ ಕಾರ್ಯ ಮಾಡೋಣಾ ಎಂದ ಸಚಿವರು ಗಟ್ಟಿ ಬಸವಣ್ಣ ಬಳಿ ನಿರ್ಮಿಸಲು ಉದ್ದೇಶಿಸಲಾಗಿರುವ ಡ್ಯಾಂ ನಿರ್ಮಾಣಕ್ಕೆ 1000 ಕೋಟಿ ಅನುದಾನ ಮಂಜೂರಾಗಿದ್ದು, ಶೀಘ್ರದಲ್ಲೇ ಟೆಂಡರ ಕರೆದು ಕಾಮಗಾರಿಯನ್ನು ಪ್ರಾರಂಭಿಸಲಾಗವುದಲ್ಲದೆ. ಅಮೇರಿಕಾ ಮಾದರಿಯಲ್ಲಿ ಗೋಕಾಕ ಫಾಲ್ಸ ಜಲಪಾತದ ಮುಂದೆ 350 ಕೋಟಿ ವೆಚ್ಚದಲ್ಲಿ ಗ್ಲಾಸ ಬ್ರೀಜ್ ಸೇತುವೆ ನಿರ್ಮಿಸಲಾಗುವುದು. ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬರುವ 2 ವರ್ಷದಲ್ಲಿ ಸಮಗ್ರ ಅಭಿವೃದ್ಧಿ ಮಾಡಿ ಗೋಕಾಕ ಹಾಗೂ ಬೆಳಗಾವಿ ಜಿಲ್ಲೆಯನ್ನು ಮಾದರಿ ಮಾಡಲಾಗುದು ಎಂದು ಸಚಿವ ರಮೇಶ ಜಾರಕಿಹೊಳಿ ಅವರು ಹೇಳಿದರು.
ನ್ಯಾಯವಾದಿ ಎಲ್.ಎಚ್ ಬಂಡಿ ಸ್ವಾಗತಿಸಿದರು.ಬಿಜೆಪಿ ಮುಖಂಡ ಎಸ್.ವ್ಹಿ ದೇಮಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು
ಇದೇ ಸಂದರ್ಭದಲ್ಲಿ ಗೋಕಾಕ ಮತಕ್ಷೇತ್ರದಲ್ಲಿ ನೂತನವಾಗಿ ಗ್ರಾಮ ಪಂಚಾಯಿತಿಗಳಿಗೆ ಆಯ್ಕೆಯಾದ ಸುಮಾರು 300 ಕ್ಕೂ ಹೆಚ್ಚು ಸದಸ್ಯರನ್ನು ಸಚಿವರು ಸತ್ಕರಿಸಿ , ಗೌರವಿಸಿದರು.
ವೇದಿಕೆಯಲ್ಲಿ ಮಾಜಿ ಶಾಸಕ ಎಂ.ಎಲ್ ಮುತ್ತೆನ್ನವರ , ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುಭಾಸ ಪಾಟೀಲ್, ಜಿಲ್ಲಾ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಶಫೀ ಜಮಾದಾರ, ನಗರ ಘಟಕದ ಅಧ್ಯಕ್ಷ ಭೀಮಶಿ ಭರಮನ್ನವರ, ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಮುಖಂಡರುಗಳಾದ ಶಾಮಾನಂದ ಪೂಜೇರಿ, ಬಸವರಾಜ ಹಿರೇಮಠ, ಸಿದ್ದಲಿಂಗ ದಳವಾಯಿ, ಡಿ.ಎಂ ದಳವಾಯಿ, ಸುರೇಶ ಪಾಟೀಲ್, ಸಿದ್ದಗೌಡ ಪಾಟೀಲ , ಜ್ಯೋತಿ ಕೋಲಾರ , ಶ್ರೀದೇವಿ ತಡಕೋಡ , ಪ್ರೇಮಾ ಭಂಡಾರಿ, ಗುಣಸಿಂಗ ರಜಪೂತ, ಸೇರಿದಂತೆ ಅನೇಕರು ಇದ್ದರು