RNI NO. KARKAN/2006/27779|Saturday, December 14, 2024
You are here: Home » breaking news » ಗೋಕಾಕ:ಜನಸೇವಕ ಸಮಾವೇಶ ಕುರಿತು ನಾಳೆ ಪೂರ್ವಭಾವಿ ಸಭೆ : ಶಫೀ ಜಮಾದಾರ

ಗೋಕಾಕ:ಜನಸೇವಕ ಸಮಾವೇಶ ಕುರಿತು ನಾಳೆ ಪೂರ್ವಭಾವಿ ಸಭೆ : ಶಫೀ ಜಮಾದಾರ 

ಜನಸೇವಕ ಸಮಾವೇಶ ಕುರಿತು ನಾಳೆ ಪೂರ್ವಭಾವಿ ಸಭೆ :   ಶಫೀ ಜಮಾದಾರ

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 14 :

ಜನವರಿ 17 ರಂದು ಬೆಳಗಾವಿಯಲ್ಲಿ  ಜರಗಲಿರುವ ಜನಸೇವಕ ಸಮಾವೇಶದ ಯಶಸ್ಸಿ ಕುರಿತು ಚರ್ಚಿಸಲು ನಾಳೆ ದಿ. 15 ರಂದು ಮುಂಜಾನೆ 10:30 ಕ್ಕೆ ನಗರದ ಅಬ್ದುಲಕಲಾಂ ಕಾಲೇಜಿನ ಸಭಾಂಗಣದಲ್ಲಿ ಗೋಕಾಕ ನಗರ , ಗೋಕಾಕ ಗ್ರಾಮೀಣ ಹಾಗೂ ಅರಭಾವಿ ಮಂಡಲದ  ಅಲ್ಪಸಂಖ್ಯಾತರ ಮೋರ್ಚಾ ಹಾಗೂ ಅಲ್ಪಸಂಖ್ಯಾತ ಮುಖಂಡರ ಪೂರ್ವಭಾವಿ ಸಭೆ ಕರೆಯಲಾಗಿದೆ ಎಂದು  ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶಫೀ ಜಮಾದಾರ ತಿಳಿಸಿದ್ದಾರೆ

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಲಿರುವ ಜನಸೇವಕ ಸಮಾವೇಶದ ಯಶಸ್ವಿಗಾಗಿ ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಅವರು ಹಗಲಿರುಳು ಶ್ರಮವಹಿಸುತ್ತಿದ್ದು, ಜಿಲ್ಲೆಯ ಎಲ್ಲ ಅಲ್ಪಸಂಖ್ಯಾತ ಮುಖಂಡರುಗಳು ಈ ಸಮಾವೇಶದಲ್ಲಿ ಭಾಗವಹಿಸಿ ಸಚಿವ ರಮೇಶ ಜಾರಕಿಹೊಳಿ ಅವರ ಕೈ ಬಲ ಪಡಿಸಬೇಕು. ಈ ಕುರಿತು ಚರ್ಚಿಸಲು ನಾಳೆ ಸಭೆ ಕರೆಯಲಾಗಿದ್ದು, ಗೋಕಾಕ ನಗರ , ಗ್ರಾಮೀಣ ಹಾಗೂ ಅರಭಾವಿ ಮಂಡಲದ ಅಲ್ಪಸಂಖ್ಯಾತ ಮೋರ್ಚಾದ ಎಲ್ಲ ಪದಾಧಿಕಾರಿಗಳು, ಅಲ್ಪಸಂಖ್ಯಾತ ಮುಖಂಡರುಗಳು ಈ ಸಭೆಯಲ್ಲಿ ಭಾಗವಹಿಸಬೇಕೆಂದು  ಅಲ್ಪಸಂಖ್ಯಾತ ಮೋರ್ಚಾದ ಜಿಲ್ಲಾಧ್ಯಕ್ಷ ಶಫೀ ಜಮಾದರ ಕೋರಿದ್ದಾರೆ.

Related posts: