RNI NO. KARKAN/2006/27779|Friday, October 18, 2024
You are here: Home » breaking news » ಗೋಕಾಕ:ಶ್ರೀರಾಮ ಮಂದಿರದ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಸಹಕರಿಸಿ : ಸಚಿವ ರಮೇಶ

ಗೋಕಾಕ:ಶ್ರೀರಾಮ ಮಂದಿರದ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಸಹಕರಿಸಿ : ಸಚಿವ ರಮೇಶ 

ಶ್ರೀರಾಮ ಮಂದಿರದ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ಸಹಕರಿಸಿ : ಸಚಿವ ರಮೇಶ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 15 :

 

ಭಾರತೀಯರ ಬಹುದಿನಗಳ ಬೇಡಿಕೆಯಾಗಿದ್ದ ಶ್ರೀರಾಮ ಮಂದಿರದ ನಿರ್ಮಾಣದ ಕಾರ್ಯದಲ್ಲಿ ಎಲ್ಲರೂ ತನು,ಮನ,ಧನದಿಂದ ಸಹಕಾರ ನೀಡಿ ತಮ್ಮ ಅಳಿಲು ಸೇವೆಯನ್ನು ಮಾಡಬೇಕೆಂದು ಜಲಸಂಪನ್ಮೂಲ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಶುಕ್ರವಾರದಂದು ನಗರದ ಮೆರಕನಟ್ಟಿ ಶ್ರೀ ಲಕ್ಷ್ಮೀ ದೇವಸ್ಥಾನದ ಆವರಣದಲ್ಲಿ ಅಯೋಧ್ಯೆಯಲ್ಲಿ ಪ್ರಭು ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ಸಮಪರ್ಣಾ ನಿಧಿ ಅಭಿಯಾನ ಚಾಲನೆ ನೀಡಿ ಮಾತನಾಡಿದ ಅವರು, ಪ್ರತಿಯೊಬ್ಬರ ಭಾರತೀಯರ ಸೇವೆ ಈ ಮಂದಿರ ನಿರ್ಮಾಣದಲ್ಲಿ ಜಾತಿ, ಮತ, ಪಂಥ ಬೇದ ಮರೆತು ಎಲ್ಲರು ಒಂದಾಗಿ ಈ ಅಭಿಯಾನವನ್ನು ಯಶಸ್ವಿಗೊಳಿಸುವಂತೆ ವಿನಂತಿಸಿದರು.
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಆದಷ್ಟು ಬೇಗ ನಿರ್ಮಾಣವಾಗಿ ಜಗತ್ತಿನಲ್ಲಿ ಶ್ರೇಷ್ಠ ಮಂದಿರವಾಗಲಿದೆ. ಮರ್ಯಾದಾ ಪುರುಷೋತ್ತಮ ಭಾರತೀಯರ ಆರಾಧ್ಯ ದೈವ ಶ್ರೀರಾಮನ ಆದರ್ಶಗಳು ಎಲ್ಲರಿಗೂ ಸರ್ವಕಾಲಕ್ಕೂ ಮಾರ್ಗದರ್ಶಿಗಳಾಗಿದ್ದು. ಅವುಗಳನ್ನು ನಾವೆಲ್ಲ ಪ್ರತಿನಿತ್ಯ ಆಚರಿಸುವ ಮೂಲಕ ರಾಮರಾಜ್ಯವನ್ನು ನಿರ್ಮಿಸೋಣವೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಗ್ರಾಮದೇವತೆಯರ ಜಾತ್ರಾ ಕಮೀಟಿಯ ಅಧ್ಯಕ್ಷರು ಆಗಿರುವ ಸಚಿವ ರಮೇಶ ಜಾರಕಿಹೊಳಿ ಅವರು ಕಮೀಟಿಯ ಪರವಾಗಿ ಶ್ರೀರಾಮ ಮಂದಿರ ನಿರ್ಮಾಣಕ್ಕೆ 1 ಲಕ್ಷ ರೂಗಳ ನಿಧಿಯನ್ನು ಸಮರ್ಪಿಸಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು.
ಸಂದರ್ಭದಲ್ಲಿ ಮುಖಂಡರಾದ ಎಮ್.ಡಿ.ಚುನಮರಿ, ಎಮ್.ವಾಯ್.ಹಾರುಗೇರಿ, ವಿಜಯಕುಮಾರ ಖಾರೆಪಾಟಣ, ಸದಾಶಿವ ಗುದಗಗೋಳ, ಜಯಾನಂದ ಹುಣಚ್ಯಾಳಿ, ಮಹಾಂತೇಶ ತಾವಂಶಿ, ಶಾಮಾನಂದ ಪೂಜೇರಿ ಸೇರಿದಂತೆ ಅನೇಕರು ಇದ್ದರು.

Related posts: