RNI NO. KARKAN/2006/27779|Monday, December 23, 2024
You are here: Home » breaking news » ಗೋಕಾಕ:ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ : ಎಮ್.ಬಿ.ಪಾಟೀಲ

ಗೋಕಾಕ:ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ : ಎಮ್.ಬಿ.ಪಾಟೀಲ 

ಕಠಿಣ ಪರಿಶ್ರಮದಿಂದ ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ : ಎಮ್.ಬಿ.ಪಾಟೀಲ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜ 21 :

 
ಕಠಿಣ ಪರಿಶ್ರಮದಿಂದ ತಮ್ಮಲ್ಲಿಯ ಪ್ರವೃತ್ತಿಗಳನ್ನು ವೃತ್ತಿಗಳನ್ನಾಗಿಸಿಕೊಂಡು ವಿದ್ಯಾರ್ಥಿಗಳು ಬದುಕನ್ನು ಕಟ್ಟಿಕೊಳ್ಳುವಂತೆ ಶಿಕ್ಷಣ ಇಲಾಖೆಯ ಕ್ಷೇತ್ರ ಸಮನ್ವಯ ಅಧಿಕಾರಿ ಎಮ್.ಬಿ.ಪಾಟೀಲ ಹೇಳಿದರು.
ಗುರುವಾರದಂದು ನಗರದ ಎಲ್‍ಇಟಿಯ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಪದವಿ ಮಹಾವಿದ್ಯಾಲಯದ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಪಠ್ಯೇತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಮಾನಸಿಕ ಹಾಗೂ ದೈಹಿಕವಾಗಿ ಸದೃಢರಾಗಿ ಸಾಧನೆ ಮಾಡಲು ಸಹಕಾರಿಯಾಗುತ್ತದೆ. ಕ್ರೀಡಾ ಹಾಗೂ ಸಾಂಸ್ಕøತಿಕ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಹೆಚ್ಚಿನ ಅವಕಾಶದ ಜೊತೆಗೆ ಸಮಾಜದಲ್ಲಿ ಉನ್ನತ ಸ್ಥಾನವನ್ನು ಹೊಂದಲು ಅನುಕೂಲವಾಗುತ್ತದೆ. ಸರ್ಕಾರ ಖೇಲ್ ಇಂಡಿಯಾದಂತಹ ಹಲವಾರು ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳಲ್ಲಿನ ಪ್ರತಿಭೆಯನ್ನು ಪ್ರೋತ್ಸಾಹಿಸುತ್ತಿದೆ. ವಿದ್ಯಾರ್ಥಿಗಳು ಸಾಧನೆಯ ಕಿಚ್ಚುನ್ನು ತಮ್ಮಲ್ಲಿ ಬೆಳೆಸಿಕೊಂಡು ತಮ್ಮಲ್ಲಿಯ ಶಕ್ತಿ ಹಾಗೂ ಸಮಯದ ಸದುಪಯೋಗದಿಂದ ಸಾಧಕರಾಗಿರೆಂದು ಹಾರೈಸಿದರು.
ಕಾರ್ಯಕ್ರಮವನ್ನು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸನತ ಜಾರಕಿಹೊಳಿ ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಮಹಾವಿದ್ಯಾಲಯದಿಂದ ಯುನಿವರ್ಸಸಿಟಿ ಬ್ಲೂ ಆಗಿ ಆಯ್ಕೆಯಾದ ಮಂಜುನಾಥ ಹೊನಕುಪ್ಪಿ ಹಾಗೂ ರಾಹುಲ ಗೂಗಿಕೊಳ್ಳಮಠ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.
ವೇದಿಕೆ ಮೇಲೆ ಪ್ರಾಚಾರ್ಯ ಆಯ್.ಎಸ್.ಪವಾರ, ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳ ಮುಖ್ಯಸ್ಥರಾದ ಬಿ.ಬಿ.ಗುಡ್ಡದಮನಿ, ಎಸ್.ಎಮ್.ಖಾನಾಪೂರ, ವಿದ್ಯಾರ್ಥಿ ಪ್ರತಿನಿಧಿಗಳಾದ ಅನ್ನಪೂರ್ಣಾ ಮಮದಾಪೂರ, ಜ್ಯೋತಿ ದೇಸಾಯಿ, ಅಂಬಿಕಾ ಚಿಕ್ಕೋಡಿ ಇದ್ದರು.
ಐಶ್ವರ್ಯಾ ಮನಗೊಳಿ ಮತ್ತು ರಾಜಶ್ರೀ ಜೊತೆನ್ನವರ ಸ್ವಾಗತಿಸಿದರು, ಉಪನ್ಯಾಸಕ ಶಿವಾನಂದ ತಿಪ್ಪನವರ ನಿರೂಪಿಸಿದರು, ಹಣಮಂತ ತೋಟಗಿ ವಂದಿಸಿದರು.

Related posts: