ಗೋಕಾಕ:ಕೆ.ಪಿ.ಎಸ್.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ :ಶಿವಲಿಂಗ ಪಾಟೀಲ ಮನೆ ಹಾಗೂ ಅಂಗಡಿಯ ಮೇಲೆ ಸಿಸಿಬಿ ದಾಳಿ
ಕೆ.ಪಿ.ಎಸ್.ಸಿ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ :ಶಿವಲಿಂಗ ಪಾಟೀಲ ಮನೆ ಹಾಗೂ ಅಂಗಡಿಯ ಮೇಲೆ ಸಿಸಿಬಿ ದಾಳಿ
ನಮ್ಮ ಬೆಳಗಾವಿ ಇ – ವಾರ್ತೆ,ಗೋಕಾಕ ಫೆ 23 :
ಕೆಪಿಎಸ್ ಸಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದಲ್ಲಿ ಬಂಧನವಾಗಿರುವ ಗೋಕಾಕದ ಶಿವಲಿಂಗ ಪಾಟೀಲ ಅವರ ಮಾಲೀಕತ್ವದ ಮನೆ ಹಾಗೂ ಪರ್ನೆಚೇರ್ ಅಂಗಡಿ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ.
ಜ.24 ರಂದು ಎಫ್ ಡಿಎ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿತ್ತು. ಈ ಪ್ರಕರಣದಲ್ಲಿ ಪೊಲೀಸರು 11 ಜನರನ್ನು ಬಂಧಿಸಿ, ತನಿಖೆ ನಡೆಸಿದ್ದರು. ಆರೋಪಿಗಳು ಬಾಯಿಬಿಟ್ಟ ಮಾಹಿತಿ ಪ್ರಕಾರ ಗೋಕಾಕದ ಶಿವಲಿಂಗ ಅವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿ, ಇತ್ತೀಚೆಗೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಮಂಗಳವಾರದಂದು ಅವರ ಮನೆ ಹಾಗೂ ಸಂಗನಕೇರಿ ಗ್ರಾಮದಲ್ಲಿರುವ ಎಸ್.ಎಂ.ಕೆ ಮಾರ್ಟ್ ಎಂಬ ಹೆಸರಿನ ಅಂಗಡಿಯ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.