ಗೋಕಾಕ:ಕನ್ನಡ ಹೋರಾಟದಲ್ಲಿ ಉತ್ತರ ಕರ್ನಾಟಕದವರ ಪಾತ್ರ ಮಹತ್ವದಾಗಿದೆ : ಜಲಸಂಪನ್ಮೂಲ ಸಚಿವ ರಮೇಶ ಅಭಿಮತ
ಕನ್ನಡ ಹೋರಾಟದಲ್ಲಿ ಉತ್ತರ ಕರ್ನಾಟಕದವರ ಪಾತ್ರ ಮಹತ್ವದಾಗಿದೆ : ಜಲಸಂಪನ್ಮೂಲ ಸಚಿವ ರಮೇಶ ಅಭಿಮತ
ಕಲಾಶ್ರೀ ಶ್ರೀ ನಿಂಗಯ್ಯಸ್ವಾಮಿ ಪೂಜಾರಿ ವೇದಿಕೆ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 27 :
ಕನ್ನಡ ಹೋರಾಟದಲ್ಲಿ ಉತ್ತರ ಕರ್ನಾಟಕದವರ ಪಾತ್ರ ಮಹತ್ವದಾಗಿದೆ.ಕನ್ನಡ ನಾಡಲ್ಲಿ ಹುಟ್ಟಿರುವುದು ನಮ್ಮ ಪುಣ್ಯ. ಕನ್ನಡದಲ್ಲಿ ಮಾತನಾಡುವುದಕ್ಕೆ ಸಂತೋಷವಾಗುತ್ತದೆ ಎಂದು ಜಲ ಸಂಪನ್ಮೂಲ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಹೇಳಿದರು.
ಅವರು ಶನಿವಾರದಂದು ಇಲ್ಲಿಯ ನ್ಯೂ ಇಂಗ್ಲೀಷ ಸ್ಕೂಲ ಆವರಣದಲ್ಲಿ ಜರುಗಿದ 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕನ್ನಡ ಒಂದು ಮೃದವಾದ ಭಾಷೆ ,ಕನ್ನಡ ಎಲ್ಲಾ ಜಾತಿ ಧರ್ಮನು ಪ್ರೀತಿ ಮಾಡುವ ಭಾಷೆಯಾಗಿದ್ದು, ಕೆಳ ಹಂತದಿಂದ ಬೆಳೆದು ಬಂದು ದೊಡ್ಡ ಭಾವನೆಗಳನ್ನು ಉಳ್ಳ ಕನ್ನಡಿಗರು ವಿಶಾಲ ಹೃದಯದವರಾಗಿದ್ದಾರೆ.
ಗಡಿ ಭಾಗದಲ್ಲಿ ಇಂತಹ ಕನ್ನಡ ಸಾಹಿತ್ಯ ಸಮ್ಮೇಳನಗಳು ಹೆಚ್ಚು ಹೆಚ್ಚಾಗಿ ನಡೆಯಬೇಕು. ಕನ್ನಡ ಭಾಷೆಗೆ ಸಾವಿರಾರು ವರ್ಷಗಳ ಇತಿಹಾಸವಿದೆ. ಕನ್ನಡ ಭಾಷೆಗೆ ಜಾತಿ,ಧರ್ಮಪ್ರೀತಿ ಮಾಡುವುದೇ ಕನ್ನಡ. ನಾನು ಕೂಡಾ ಸರ್ಕಾರಿ ಶಾಲೆಯಲ್ಲಿ ಕಲಿಯಲ್ಲಿ ವಿದ್ಯೆ ಕಲಿತ್ತಿದ್ದೇನೆ. ಸರ್ಕಾರಿ ಆಸ್ಪತ್ರೆಯಲ್ಲಿ ನನ್ನ ಮೊಮ್ಮಗ ಹುಟ್ಟಿದ್ದಾನೆ. ಅಮೇರಿಕಾ,ಲಂಡನ್ ದೇಶಗಳಿಗೆ ಹೋದಾಗ ಕರ್ನಾಟಕದವರು ಎಂದಾಗ ಮೊದಲು ಬೆಂಗಳೂರು ಅಂತಾ ಕೇಳುತ್ತಿರುವುದನ್ನು ಕೇಳಿ ಸಂತೋಷದಾಯಕವಾಗಿದೆ. ಸರ್ಕಾರದ ಬಜೆಟ್ ನಲ್ಲಿ 50 ಕೋಟಿ ಅನುದಾನ ನೀಡಬೇಕು ಅಂತಾ ಗೋಕಾಕ ಜನತೆ ಮನವಿ ಮಾಡಿದ್ದೀರಿ ಆದರೆ ನನಗೆ ಮನವಿ ಮಾಡುವದಕ್ಕಿಂತ ಆದೇಶ ಮಾಡಬೇಕು. ಅದು ನಿಮಗೆ ಹಕ್ಕಿದೆ. ಸಾಹಿತ್ಯ ಭವನ ,ಸಭಾ ಭವನ ಮಂಜೂರು ಮಾಡುತ್ತೇನೆ ಎಂದು ಭರವಸೆ ನೀಡಿದರು.
ಬಿ.ಎಸ್.ಯಡಿಯೂರಪ್ಪನವರ ಸಚಿವ ಸಂಪುಟದಲ್ಲಿ ಜಲಸಂಪನ್ಮೂಲ ಸಚಿವನಾಗಿದ್ದು ನನಗೆ ಹೆಮ್ಮೆಯಾಗಿದೆ. ಅವರ ಸರ್ಕಾರದಲ್ಲಿ ಹೈದರಾಬಾದ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಎಲ್ಲೆಡೆ ನೀರಾವರಿ ಒದಗಿಸುವುದಾಗಿ ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ನಗರದ ಶೂನ್ಯ ಸಂಪಾದನಾ ಮಠದ ಪೂಜ್ಯ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜಿ ವಹಿಸಿ ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಹಿರಿಯ ಜಾನಪದ ವಿದ್ವಾಂಸರು ಹಾಗೂ ಸಮ್ಮೇಳನದ ಸರ್ವಾಧ್ಯಕ್ಷ ಡಾ: ಸಿ.ಕೆ.ನಾವಲಗಿ, ನಿಕಟಪೂರ್ವ ಅಧ್ಯಕ್ಷ ಮಹಾಲಿಂಗ ಮಂಗಿ, ವಿಧಾನ ಪರಿಷತ್ ಸದಸ್ಯ ಮಹಾಂತೇಶ ಕವಟಗಿಮಠ, ನಗರಸಭೆ ಅಧ್ಯಕ್ಷ ಜಯಾನಂದ ಹುಣಶಾಳ, ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ, ಪ್ರೋ: ಚಂದ್ರಶೇಖರ ಅಕ್ಕಿ, ಸಿದ್ದಲಿಂಗಪ್ಪ ದಳವಾಯಿ, ಜಯಾನಂದ ಮುನವಳ್ಳಿ, ಡಿಡಿಪಿಐ ಗಜಾನನ ಮನ್ನಿಕೇರಿ, ಮೂಡಲಗಿ ಬಿಇಒ ಅಜೀತ ಮನ್ನಿಕೇರಿ, ಗೋಕಾಕ ಬಿಇಒ ಜಿ.ಬಿ.ಬಳಗಾರ , ಸರೋಜನಿ ಪಂಚಗಾಂವಿ, ಪ್ರೋ: ಗಂಗಾಧರ ಮಳಗಿ, ನಗರಸಭೆ ಪೌರಾಯುಕ್ತ ಶಿವಾನಂದ ಹಿರೇಮಠ, ಡಿವೈಎಸ್‍ಪಿ ಜಾವೇದ ಇನಾಮದಾರ, ನಗರಸಭೆ ಉಪಾಧ್ಯಕ್ಷ ಬಸವರಾಜ ಆರೆನ್ನವರ, ಕಸಾಪ ತಾಲೂಕಾಧ್ಯಕ್ಷ ಮಹಾಂತೇಶ ತಾಂವಶಿ ಸೇರಿದಂತೆ ಹಿರಿಯ ಸಾಹಿತಿಗಳು, ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಇತರರು ಇದ್ದರು.
ರಾಮಪ್ಪ ಮಿರ್ಜಿ ಸ್ವಾಗತಿಸಿದರು. ಶೈಲಾ ಕೊಕ್ಕರಿ ನಿರೂಪಿಸಿದರು. ಬಸವರಾಜ ಹಣಮಂತಗೋಳ ವಂದಿಸಿದರು.