RNI NO. KARKAN/2006/27779|Wednesday, November 6, 2024
You are here: Home » breaking news » ಗೋಕಾಕ:ಪರಿಷತ್ತಗಳು,ಸಮಾರಂಭಗಳು,ಸಾಹಿತಿಗಳು, ಸಾಹಿತ್ಯಗಳು ,ಸಂಘಟನೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ : ಸಾಹಿತಿ ರಾಗಂ ವಿಷಾದ

ಗೋಕಾಕ:ಪರಿಷತ್ತಗಳು,ಸಮಾರಂಭಗಳು,ಸಾಹಿತಿಗಳು, ಸಾಹಿತ್ಯಗಳು ,ಸಂಘಟನೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ : ಸಾಹಿತಿ ರಾಗಂ ವಿಷಾದ 

ಪರಿಷತ್ತಗಳು,ಸಮಾರಂಭಗಳು,ಸಾಹಿತಿಗಳು, ಸಾಹಿತ್ಯಗಳು ,ಸಂಘಟನೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿವೆ : ಸಾಹಿತಿ ರಾಗಂ ವಿಷಾದ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಫೆ 28 :

 
ಪರಿಷತ್ತಗಳು , ಸಮಾರಂಭಗಳು , ಸಾಹಿತಿಗಳು , ಸಾಹಿತ್ಯಗಳು ,ಸಂಘಟನೆಗಳು ತಮ್ಮ ಮೌಲ್ಯಗಳನ್ನು ಕಳೆದುಕೊಳ್ಳುತ್ತಿರುವ ಸಮಯದಲ್ಲಿ ಯಾರು ಪರಿವರ್ತನೆಯಾಗಬೇಕು ಎಂಬುದು ಸಮಾಜದಲ್ಲಿ ದೊಡ್ಡ ಪ್ರಶ್ನೆಯಾಗಿದೆ ಎಂದು ರಾಜಶೇಖರಯ್ಯ ಮಠಪತಿ ( ರಾಗಂ) ಹೇಳಿದರು.
ರವಿವಾರದಂದು ನಗರದ ಉಪ ಕಾರಾಗೃಹದಲ್ಲಿ ಜರುಗಿದ ಉಪ ಕಾರಾಗೃಹ , ಚುಟುಕು ಸಾಹಿತ್ಯ ಪರಿಷತ್ ಮತ್ತು ಕನ್ನಡ ಸಾಹಿತ್ಯ ಪರಿಷತ್ ಗೋಕಾಕ ಇವುಗಳ ಸಂಯುಕ್ತಾಶ್ರಯದಲ್ಲಿ ಬಂಧಿಗಳ ಮನಃ ಪರಿವರ್ತನೆ ಮತ್ತು ರಾಗಂ ಅವರು ರಚಿಸಿದ ದಂಡಿ ಕಾದಂಬರಿ ಬಿಡುಗಡೆ ಸಮಾರಂಭದಲ್ಲಿ ಬಂಧಿಗಳ ಮನ ಪರಿವರ್ತನೆ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು

ಸಾಮಾಜಕ್ಕೆ ಬೇಕಾಗಿರುವುದು ಹೃದಯವಂತ ವ್ಯಕ್ತಿಗಳು ಬೇಕಾಗಿದ್ದಾರೆ. ಅಂತಹ ವ್ಯಕ್ತಿಗಳಿಂದ ಸಮಾಜ ಮತ್ತು ಸಮಾಜದಲ್ಲಿ ಬಾಳಿ ಬುದಕುತ್ತಿರುವ ಜನರ ಮನ ಪರಿವರ್ತನೆಯಾಗಲು ಸಾಧ್ಯ . ಮನುಷ್ಯನ ಆಲೋಚನೆ ಬದಲಾಗದರೆ ಮಾತ್ರ ಬದುಕು ಬದಲಾಗುತ್ತದೆ. ಸಮಾಜದಲ್ಲಿ ಪರಸ್ಪರ ಪ್ರೀತಿ , ವಿಶ್ವಾಸದಿಂದ ಸ್ವಾರ್ಥವನ್ನು ಬಿಟ್ಟು ತುಳಿತಕ್ಕೆ ಒಳಗಾಗಿರುವವರನ್ನು ಸಮಾಜದ ಮುಖ್ಯ ವಾಹಿನಿಗೆ ತರಲು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಸಮಾಜವನ್ನು ಗಟ್ಟಿಯಾಗಿ ಕಟ್ಟಲು ಸಾಧ್ಯ ಎಂದು ರಾಗಂ ಮನುಷ್ಯ ಮತ್ತು ಮನಸ್ಸು ಬದಲಾಗಬೇಕು ಎಂದು ಹೇಳಿದರು

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಸಾಹಿತಿ ಚಂದ್ರಶೇಖರ್ ಅಕ್ಕಿ ವಹಿಸಿದ್ದರು

ಈ ಸಂದರ್ಭದಲ್ಲಿ ಉಪ ಕಾರಾಗೃಹದ ಅಧೀಕ್ಷಕ ಅಂಬರೀಷ್ ಪೂಜಾರಿ, ಹಿರಿಯ ಸಾಹಿತಿಗಳಾದ ಡಾ.ಸಿ.ಕೆ ನಾವಲಗಿ, ಮಹಾಲಿಂಗ ಮಂಗಿ, ಮಹಾಂತೇಶ ತಾಂವಶಿ, ಪ್ರೋ ಜಿ.ಜಿ.ಮಠಪತಿ, ಶ್ರೀಮತಿ ಪದ್ಮಶ್ರೀರಾಗಂ ,ರಂಗ ಕಲಾವಿದೆ ಮಾಲತಿಶ್ರೀ , ಶ್ರೀಮತಿ ಸವಿತಾ ಯಾಜಿ ಸೇರಿದಂತೆ ಇತರರು ಇದ್ದರು.
ಕಾರ್ಯಕ್ರಮವನ್ನು ಶ್ರೀಮತಿ ರಾಜೇಶ್ವರಿ ಒಡೆಯರ ನಿರೂಪಿಸಿದರು , ಶಕೀಲ ಜಕಾತಿ ವಂದಿಸಿದರು.

Related posts: