ಗೋಕಾಕ:ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯವಾಗಿದೆ : ಐಪಿಎಸ್ ರವಿ ಚಣ್ಣನ್ನವರ
ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯವಾಗಿದೆ : ಐಪಿಎಸ್ ರವಿ ಚಣ್ಣನ್ನವರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 1
ಯುವ ಜನತೆಗೆ ಜ್ಞಾನಾರ್ಜನೆ ಮುಖ್ಯವಾಗಿದೆ ಅದನ್ನು ಕಲಿಯಬೇಕು. ನಾನು ಸ್ವಾಮಿ ವಿವೇಕಾನಂದ, ಚಂದ್ರಶೇಖರ ಆಝಾದ, ಭಗತ್‍ಸಿಂಗ್ ಅವರ ತತ್ವಾರ್ದಶಗಳನ್ನು ಬೆಳೆಸಿಕೊಂಡಿದ್ದೇನೆ ಎಂದು ಐಪಿಎಸ್ ರವಿ ಚಣ್ಣನ್ನವರ ಹೇಳಿದರು.
ಸೋಮವಾರದಂದು ನಗರದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠ ಆವರಣದಲ್ಲಿ ಇಲ್ಲಿನ ಶ್ರೀ ಶೂನ್ಯ ಸಂಪಾದನ ಮಠದ 16 ನೇ ಶರಣ ಸಂಸ್ಕøತಿ ಉತ್ಸವದ ಯುವ ಸಮಾವೇಶವನ್ನುದ್ದೇಶಿಸಿ ಅವರು ಮಾತನಾಡಿದರು.
ಸಾಧನೆಗೆ ಅಸಾಧ್ಯವಾದದ್ದು ಯಾವುದೂ ಇಲ್ಲ, ಸಾಧನೆ ಮಾಡುವ ಛಲ ಇರಬೇಕು. ವಿದ್ಯಾರ್ಜನೆಯೇ ನನ್ನ ಕಸಬು ನನ್ನಿಂದ ಏನೂ ಆಗುವುದಿಲ್ಲ ಎಂದು ತಾತ್ಸಾರ ಭಾವನೆ ಬರಬಾರದು. ನನ್ನಿಂದ ಎಲ್ಲವೂ ಸಾಧ್ಯವೆಂದು ಭಾವಿಸಬೇಕು. ಮನುಷ್ಯನ್ನು ಸೋಲಿಸುವ ವಸ್ತು ಜಗತ್ತಿನಲ್ಲಿ ಇಲ್ಲ. ಪ್ರಯತ್ನ ಮಾಡಿದರೇ ಏನ ಬೇಕಾದರೂ ಸಾಧಿಸಬಹುದು. ಶಾಸ್ತ್ರದಲ್ಲಿ 10 ಗುಣಗಳನ್ನು ಇದ್ದು ಅವುಗಳನ್ನು ಕಲಿಯಬೇಕು.ಅಂತೆ-ಕಂತೆಗಳನ್ನು ನಂಬಿ ಬದುಕಬಾರದು.ಯುವ ಸಮುದಾಯ ಮೊಬೈಲ, ಫೇಸ್‍ಬುಕ್, ಟ್ವಿಟರ್‍ಗಳಿಂದ ದೂರವಿರಬೇಕು. ನಿನ್ನನ್ನು ನೀನು ಪ್ರೀತಿಸು,ನಾನೇ ವಿಶೇಷ ಎಂದು ಬದುಕಬೇಕು. ಎಲ್ಲರಿಗೂ ಸಮಯ ಪ್ರಜ್ಞೆ ಅತೀ ಅವಶ್ಯವಾಗಿದೆ. ಕಳೆದ 12ನೇ ಶತಮಾನದಲ್ಲಿ ಬಸವಣ್ಣನವರು ಅನುಭವ ಮಂಟಪ ಮಾಡಿದ್ದರು. ಈಗಲೂ ಮನೆ ಮನೆಯಲ್ಲಿ ಅನುಭವ ಮಂಟಪ ಮಾಡಬೇಕು.ನನಗೆ ರವೀಂದ್ರ ಆರ್.ಪಟ್ಟಣ ಗುರುಗಳಾಗಿದ್ದರು. ಅವರ ಮಾರ್ಗದರ್ಶನದಲ್ಲಿ ನಾನು ಬೆಳೆದಿದ್ದು. ಇಲ್ಲಿಯವರೆಗೂ ನಾನು ಖ್ಯಾತ ಸಂಗೀತಗಾರ ಡಾ: ಗುರುರಾಜ ಕರ್ಜಗಿ ಅವರ ಸಂಗೀತ ಕೇಳುತ್ತೇನೆ. ಪೊಲೀಸ ಕಷ್ಟಗಳಿಗೆ ಸ್ಪಂದಿಸುವ ಸಲುವಾಗಿ ನಾನು ಪೊಲೀಸ ಇಲಾಖೆಯಲ್ಲಿ ಸೇವೆ ಮಾಡುತ್ತಿದ್ದೇನೆ. ಬಡತನ ಶಾಪವಲ್ಲ, ಶಿಕ್ಷಣ ಪಡೆಯಬೇಕು.ಜ್ಞಾನಾರ್ಜನೆ ಪಡೆಯಬೇಕು. ಯಾವುದೇ ಹುದ್ದೆಯಾಗಲಿ ಸೇರಿ ಆರ್ಥಿಕ ಸಬಲತೆ ಹೊಂದಬೇಕು.ಹೃದಯದಿಂದ ಮಾತನಾಡಿದರೇ ಜಗತ್ತೇ ಕೇಳುತ್ತಿದೆ. ತಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಬೆಳಿಸಬೇಕು. ಶರಣರ ತತ್ವಗಳನ್ನು ಪಾಲಿಸಬೇಕು, ಸಂಸ್ಕಾರ,ಸಂಸ್ಕøತಿ ಕಲಿಯುವಂತಹ ಕಾರ್ಯ ಮನೆ ಮನೆಗೆ ಮುಟ್ಟುವ ಕಾರ್ಯ ಈ ವೇದಿಕೆ ನಡೆಯಲಿ ಎಂದ ಅವರು ತಮ್ಮ ಬಾಲ್ಯ ಶಿಕ್ಷಣದ ನೆನಪುಗಳನ್ನು ಸ್ಮರಿಸಿಕೊಂಡರು.
ಇದೇ ಸಂದರ್ಭದಲ್ಲಿ ಶ್ರೀಮಠದಿಂದ ರವಿ ಚಣ್ಣನ್ನವರ ಅವರನ್ನು ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಮರಡಿಮಠದ ಶ್ರೀ ಮ.ಘ.ಚ ಪವಾಡೇಶ್ವರ ಮಹಾಸ್ವಾಮಿಗಳು ವಹಿಸಿ ಆಶೀರ್ವಚನ ನೀಡಿದರು. ಸಾನಿಧ್ಯವನ್ನು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿದ್ದರು. ಅಧ್ಯಕ್ಷತೆಯನ್ನು ರಾಜ್ಯ ಸಭಾ ಸದಸ್ಯ ಹಾಗೂ ಶರಣ ಸಂಸ್ಕೃತಿ ಉತ್ಸವ ಸಮಿತಿ ಅಧ್ಯಕ್ಷ ಈರಣ್ಣ ಕಡಾಡಿ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ಪ್ರಶಾಂತ ಕುರಬೇಟ, ಲಕ್ಕಪ್ಪ ಗೌಡರ, ಕೀರ್ತಿ ಸಸಾಲಟ್ಟಿ, ಪವಿತ್ರಾ ಹತ್ತರವಾಟ, ರಿಯಾಜ ನದಾಫ್, ಸ್ನೇಹಲ್ ಗರಗಟ್ಟಿ, ಮಾಲಾ ಐದುಡ್ಡಿ ಇದ್ದರು.
ಇದೇ ಸಂದರ್ಭದಲ್ಲಿ ಸಮಾಜದ ವಿವಿಧ ರಂಗಗಳಲ್ಲಿ ಸೇವೆ ಸಲ್ಲಿಸಿದ ಶರಣರಿಗೆ ಮತ್ತು ದಾಸೋಹ ಮೂರ್ತಿಗಳಾದ ಚಂದ್ರಶೇಖರ ಕೊಣ್ಣೂರ, ಪ್ರಸನ್ ತಂಬಾಕೆ, ಮಗನನಾಲ್ ಪಟೇಲ ಅವರನ್ನು ಗೌರವಿಸಿ,ಸನ್ಮಾನಿಸಲಾಯಿತು. ಪ್ರಾಸ್ತಾವಿಕವಾಗಿ ವಿವೇಕ ಜತ್ತಿ ಮಾತನಾಡಿದರು.
ಎಸ್.ಕೆ.ಮಠದ ಸ್ವಾಗತಿಸಿ,ನಿರೂಪಿಸಿದರು.ಆರ್.ಎಲ್.ಮಿರ್ಜಿ ವಂದಿಸಿದರು.