RNI NO. KARKAN/2006/27779|Thursday, December 12, 2024
You are here: Home » breaking news » ಗೋಕಾಕ:ಸಿ.ಡಿ ಪ್ರಕರಣದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ತನಿಖೆಗೆ ಆದೇಶಿಸುವಂತೆ ಮುಸ್ಲಿಂ ಮುಖಂಡರ ಒತ್ತಾಯ

ಗೋಕಾಕ:ಸಿ.ಡಿ ಪ್ರಕರಣದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ತನಿಖೆಗೆ ಆದೇಶಿಸುವಂತೆ ಮುಸ್ಲಿಂ ಮುಖಂಡರ ಒತ್ತಾಯ 

ಸಿ.ಡಿ ಪ್ರಕರಣದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ತನಿಖೆಗೆ ಆದೇಶಿಸುವಂತೆ ಮುಸ್ಲಿಂ ಮುಖಂಡರ ಒತ್ತಾಯ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 5 :
ಶಾಸಕ ರಮೇಶ ಜಾರಕಿಹೊಳಿ ಅವರ ಸಿ.ಡಿ ಪ್ರಕರಣದ ಬಗ್ಗೆ ಸಂಬಂಧಪಟ್ಟ ಇಲಾಖೆಯಿಂದ ತನಿಖೆಗೆ ಆದೇಶ ಮಾಡಿ, ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರಿಸಬೇಕೆಂದು ಆಗ್ರಹಿಸಿ ಮುಖ್ಯಮಂತ್ರಿ ಯಡಿಯೂರಪ್ಪ ನವರಿಗೆ ತಹಶೀಲ್ದಾರ ಮುಖಾಂತರ ಇಲ್ಲಿಯ ಅಂಜುಮನ್ ಎ ಇಸ್ಲಾಂ ಕಮಿಟಿಯವರು ಮನವಿ ಸಲ್ಲಿಸಿದರು

ಶುಕ್ರವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಕೆಲಕಾಲ ಧರಣಿ ಸತ್ಯಾಗ್ರಹ ನಡೆಯಿಸಿದರು
ಈ ಸಿಡಿಯು ರಮೇಶ ಜಾರಕಿಹೊಳಿ ಅವರ ಏಳ್ಗೆಯನ್ನು ಸಹಿಸಲಾಗದೆ ಅವರ ಚಾರಿತ್ರ್ಯಕ್ಕೆ ಕಳಂಕ ತರುವ ವ್ಯವಸ್ಥಿತ ಸಂಚು ಇದಾಗಿದೆ. ಅವರ ಚಾರಿತ್ರ್ಯ ಇಲ್ಲಿಯ ಜನಗಳಿಗೆ ಚಿರಪರಿಚಿತವಾಗಿದ್ದು, ಸದಾ ಜನಸೇವೆಗೆ ತಮ್ಮನ್ನು ತೊಡಗಿಸಿಕೊಂಡಿರುವ ಇವರಿಗೆ ಕಳಂಕ ತರುವ ಕಾರ್ಯಾ ಇದಾಗಿದೆ. ಈ ಪ್ರಕರಣದ ಸತ್ಯಾಸತ್ಯತೆಯನ್ನು ಭೇದಿಸಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ಆಮರಣಾಂತಿಕ ಉಪವಾಸ ಸತ್ಯಾಗ್ರಹವನ್ನು ಮಾಡಲಾಗುವುದೆಂದು ಮನವಿ ಎಚ್ಚರಿಸಿದ್ದಾರೆ‌.

ಈ ಸಂದರ್ಭದಲ್ಲಿ ಮುಖಂಡರುಗಳಾದ ದಾವಲಸಾಬ ಚಪ್ಪಿ, ಮೋಸಿನ ಖೋಜಾ, ಅಬ್ಬಾಸ ಎ ದೇಸಾಯಿ, ಕುತಬುದ್ದೀನ ಗೋಕಾಕ, ಶಪೀ ಜಮಾದಾರ, ಎಚ್.ಡಿ ಮುಲ್ಲಾ, ಜಾವೇದ ಗೋಕಾಕ, ಯೂಸುಫ್ ಅಂಕಲಗಿ, ಮಲಿಕಜಾನ ತಲವಾರ , ಎ.ಕೆ ದೇಸಾಯಿ, ಸಾದಿಕ ಹಲ್ಯಾಳ, ಮಲಿಕ ಪೈಲವಾನ,ರಾಜು ಅಂಡಗಿ,ಹುಸೇನ ಫನಿಬಂದ, ಶಾನವಾಜ ದಾರವಾಡಕರ, ಮುನ್ನಾ ಖತೀಬ ,ಇರ್ಷಾದ್ ಪಟೇಲ, ಶರೀಪ್ ಮುದೋಳ ಸೇರಿದಂತೆ ನೂರಾರು ಜನ ಇದ್ದರು

Related posts: